ಭಾರತೀಯ ಕ್ರಿಕೆಟ್ ತಂಡದ ಹಲವು ಆಟಗಾರರಿಗೆ ಅವರ ಅತ್ಯುತ್ತಮ ಸಾಧನೆಗಾಗಿ ಭಾರತೀಯ ಸೇನೆಯಲ್ಲಿ ಹಲವು ಹುದ್ದೆಗಳಿಂದ ಗೌರವಿಸಲಾಗಿದೆ. ಆದರೆ ಹಲವು ಭಾರತೀಯ ಕ್ರಿಕೆಟಿಗರ ತಂದೆಯೂ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ?
ದೀಪಕ್ ಚಹರ್ ಅವರ ತಂದೆ ಲೋಕೇಂದ್ರ ಸಿಂಗ್ ಚಹರ್, ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ. ಲೋಕೇಂದ್ರ ಸಿಂಗ್ ಸ್ವತಃ ಕ್ರಿಕೆಟ್ ಆಡುತ್ತಿದ್ದರು. ಅವರು ತಮ್ಮ ಮಗ ದೀಪಕ್ ಮತ್ತು ಸಹೋದರನ ಮಗ ರಾಹುಲ್ ಚಹರ್‌ಗೆ ಆರಂಭಿಕ ಕ್ರಿಕೆಟ್ ತರಬೇತಿ ನೀಡಿದರು. ವಾಯುಪಡೆಯಿಂದ ನಿವೃತ್ತರಾದ ನಂತರ, ದೀಪಕ್ ಚಹರ್ ಅವರ ತಂದೆ ಆಗ್ರಾದಲ್ಲಿ ಲೋಕೇಂದ್ರ ಸಿಂಗ್ ಕ್ರಿಕೆಟ್ ಅಕಾಡೆಮಿಯನ್ನು ತೆರೆದರು.
26
ರಾಹುಲ್ ತ್ರಿಪಾಠಿ
ಭಾರತೀಯ ಕ್ರಿಕೆಟಿಗ ರಾಹುಲ್ ತ್ರಿಪಾಠಿ ಅವರ ತಂದೆಯೂ ನಿವೃತ್ತ ಸೇನಾ ಕರ್ನಲ್. ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ 1980 ರ ದಶಕದಲ್ಲಿ ಉತ್ತರ ಪ್ರದೇಶಕ್ಕಾಗಿ ಅಂಡರ್ 22 ಕ್ರಿಕೆಟ್ ಅನ್ನು ಸಹ ಆಡಿದರು.
36
ಏಕ್ತಾ ಬಿಷ್ತ್
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಪಿನ್ನರ್ ಏಕ್ತಾ ಬಿಷ್ತ್ ಅವರ ತಂದೆ ಕುಂದನ್ ಸಿಂಗ್ ಬಿಷ್ತ್ ಭಾರತೀಯ ಸೇನೆಯ ನಿವೃತ್ತ ಹವಾಲ್ದಾರ್.
ಭಾರತ ಮತ್ತು ಇಂಗ್ಲೆಂಡ್ ನಡುವೆ ಇತ್ತೀಚೆಗೆ ನಡೆದ ತೆಂಡೂಲ್ಕರ್-ಆಂಡರ್ಸನ್ ಸರಣಿಯಲ್ಲಿ ತಮ್ಮ ವಿಕೆಟ್ ಕೀಪಿಂಗ್‌ನಿಂದ ಸೈ ಎನಿಸಿಕೊಂಡ ಧ್ರುವ್ ಜುರೆಲ್ ಅವರ ತಂದೆ ನೇಮ್ ಚಂದ್ ಜುರೆಲ್ ಭಾರತೀಯ ಸೇನೆಯ ನಿವೃತ್ತ ಹವಾಲ್ದಾರ್.
56
ಮಿಥಾಲಿ ರಾಜ್
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ತಂದೆ ದೊರೈ ರಾಜ್ ವಾಯುಪಡೆಯ ನಿವೃತ್ತ ವಾರಂಟ್ ಅಧಿಕಾರಿ.
66
ಸುರೇಶ್ ರೈನಾ
ಭಾರತೀಯ ಕ್ರಿಕೆಟ್ ತಂಡದ ಧೂಳೆಬ್ಬಿಸುವ ಆಟಗಾರ ಮತ್ತು 2011 ರ ವಿಶ್ವಕಪ್ ತಂಡದ ಭಾಗವಾಗಿದ್ದ ಸುರೇಶ್ ರೈನಾ ಕೂಡ ಸೇನಾ ಹಿನ್ನೆಲೆಯಿಂದ ಬಂದವರು. ಅವರ ತಂದೆ ದಿವಂಗತ ತ್ರಿಲೋಕಚಂದ್ರ ರೈನಾ ಸೇನಾ ಅಧಿಕಾರಿಯಾಗಿದ್ದರು.