ಸದ್ದಿಲ್ಲದೇ ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೇದಾ ಕೃಷ್ಣಮೂರ್ತಿ..!

Published : Jan 13, 2023, 01:58 PM IST

ಬೆಂಗಳೂರು(ಡಿ.13): ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ತಮ್ಮ ಬಹುಕಾಲದ ಗೆಳೆಯ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಅತ್ಯಂತ ವಿಶೇಷವಾದ ದಿನದಂದು ಸರಳ ಕಾರ್ಯಕ್ರಮದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

PREV
15
ಸದ್ದಿಲ್ಲದೇ ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೇದಾ ಕೃಷ್ಣಮೂರ್ತಿ..!

ವೇದಾ ಕೃಷ್ಣಮೂರ್ತಿ ಹಾಗೂ ಅರ್ಜುನ್ ಹೊಯ್ಸಳ ಬೆಂಗಳೂರಿನ ತೀರಾ ಖಾಸಗಿ ಕಾರ್ಯಕ್ರಮದಲ್ಲಿ ಕೋರ್ಟ್‌ನಲ್ಲಿ ಈ ತಾರಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

25

ಕಳೆದ ವರ್ಷವಷ್ಟೇ ತಮ್ಮ ತಾಯಿಯನ್ನು ಕೋವಿಡ್‌ನಿಂದ ಕಳೆದುಕೊಂಡಿದ್ದ ವೇದಾ ಕೃಷ್ಣಮೂರ್ತಿ, ಇದೀಗ ತಮ್ಮ ತಾಯಿಯ ಹುಟ್ಟುಹಬ್ಬದ ದಿನದಂದೇ ತಮ್ಮ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

35

30 ವರ್ಷದ ವೇದಾ ಕೃಷ್ಣಮೂರ್ತಿ, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ “Mr and Mrs!!! ಇದು ನಿಮಗಾಗಿ ಅಮ್ಮ. ನಿನ್ನ ಹುಟ್ಟುಹಬ್ಬವು ಎಂದೆಂದಿಗೂ ನನ್ನ ಪಾಲಿಗೆ ಅತ್ಯಂತ ವಿಶೇಷವಾಗಿಯೇ ಉಳಿಯಲಿದೆ. ಲವ್‌ ಯೂ ಅಕ್ಕ" ಎಂದು ವೇದಾ ಕೃಷ್ಣಮೂರ್ತಿ ಬರೆದುಕೊಂಡಿದ್ದಾರೆ. 

45

ಕಳೆದ ವರ್ಷ ಕೋವಿಡ್‌ನಿಂದಾಗಿ ವೇದಾ ಕೃಷ್ಣಮೂರ್ತಿ ತಮ್ಮ ಸಹೋದರಿ ಹಾಗೂ ತಾಯಿಯನ್ನು ಕಳೆದುಕೊಂಡಿದ್ದರು. ಇದೀಗ ವೇದಾ ತಮ್ಮ ತಾಯಿಯ ಹುಟ್ಟುಹಬ್ಬದಂದೇ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮೂಲಕ ತಾಯಿಗೆ ವಿನೂತನ ಶೈಲಿಯಲ್ಲಿಯೇ ನಮನ ಸಲ್ಲಿಸಿದ್ದಾರೆ.

55

ಒಟ್ಟಿನಲ್ಲಿ ಯಾವುದೇ ಅಬ್ಬರವಿಲ್ಲದೇ, ತೀರಾ ಖಾಸಗಿಯಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮೂಲಕ  ಹಲವರ ಪಾಲಿಗೆ ಮಾದರಿಯಾಗಿದ್ದಾರೆ. ಇದೀಗ ಹೊಸ ಇನಿಂಗ್ಸ್‌ ಆರಂಭಿಸಿರುವ ತಾರಾ ಜೋಡಿಯ ಬದುಕು ಸುಖಮಯವಾಗಿರಲಿ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್ ಬಳಗ ಹಾರೈಸುತ್ತಿದೆ.  

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories