ಗ್ರೂಪ್ ಹಂತದಲ್ಲೇ ವಿಶ್ವಕಪ್‌ ಸೋತರೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ; ಪುರುಷರ ತಂಡದ ಭವಿಷ್ಯ ಡಿಸೆಂಬರ್‌ನಲ್ಲಿ ನಿರ್ಧಾರ!

Published : Jun 30, 2026, 08:37 AM IST

ನವದೆಹಲಿ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರಬಿದ್ದರೂ, ಭಾರತ ಮಹಿಳಾ ತಂಡವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಮೊದಲ ತಂಡವಾಗಿ ಅರ್ಹತೆ ಪಡೆದುಕೊಂಡಿದೆ. ಇನ್ನು ಪುರುಷರ ತಂಡದ ಕಥೆ ಏನು? ಅರ್ಹತಾ ಮಾನದಂಡಗಳೇನು? ನೋಡೋಣ ಬನ್ನಿ.

PREV
16
ಒಲಿಂಪಿಕ್ಸ್‌ಗೆ ಪ್ರವೇಶ ಮಾನದಂಡ ಪ್ರಕಟಿಸಿದ ಐಸಿಸಿ

ಸದ್ಯ ಚಾಲ್ತಿಯಲ್ಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅಗ್ರಸ್ಥಾನ ಪಡೆದ ಏಷ್ಯಾದ ತಂಡ ಎನ್ನುವ ಮಾನದಂಡದ ಆಧಾರದಲ್ಲಿ ಭಾರತ, 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ. ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ), ಒಲಿಂಪಿಕ್ಸ್‌ಗೆ ಪ್ರವೇಶ ಮಾನದಂಡವನ್ನು ಪ್ರಕಟಿಸಿತು.

26
ಒಲಿಂಪಿಕ್ಸ್‌ನಲ್ಲಿ ತಲಾ 6 ಕ್ರಿಕೆಟ್‌ ತಂಡಗಳು ಭಾಗಿ

ಅದರ ಪ್ರಕಾರ, ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ತಲಾ 6 ತಂಡಗಳು ಪಾಲ್ಗೊಳ್ಳಲಿವೆ. ಭಾರತ ಪುರುಷರ ತಂಡ, ಈ ವರ್ಷಾಂತ್ಯಕ್ಕೆ ಅಂದರೆ ಡಿಸೆಂಬರ್ ವೇಳೆಗೆ ಏಷ್ಯಾದ ತಂಡಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡರೆ, 2028ರ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಸಿಗಲಿದೆ.

36
ಭಾರತ ಮಹಿಳಾ ಟೀಮ್ ಮೊದಲ ತಂಡವಾಗಿ ಒಲಿಂಪಿಕ್ಸ್‌ಗೆ ಅರ್ಹತೆ

ಹಾಲಿ ನಡೆಯುತ್ತಿರುವ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಗ್ರೂಪ್ ಹಂತದಲ್ಲೇ ಎರಡು ಪಂದ್ಯಗಳನ್ನು ಸೋತು, ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಏಷ್ಯಾದ ತಂಡಗಳ ಪೈಕಿ ಅಗ್ರಸ್ಥಾನ ಕಾಯ್ದುಕೊಂಡಿದ್ದರಿಂದ ಮೊದಲ ತಂಡವಾಗಿ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ.

46
ನಾಲ್ಕು ಖಂಡಗಳಿಂದ ನಾಲ್ಕು ತಂಡಗಳು ಅರ್ಹತೆ

ಮಹಿಳೆಯರ ವಿಭಾಗದಲ್ಲಿ ಆಸ್ಟ್ರೇಲಿಯಾ, ಗ್ರೇಟ್‌ ಬ್ರಿಟನ್‌ (ಇಂಗ್ಲೆಂಡ್‌ನಿಂದಾಗಿ), ಭಾರತ ಹಾಗೂ ದ.ಆಫ್ರಿಕಾ ನೇರ ಅರ್ಹತೆ ಪಡೆದಿವೆ. ಈ ತಂಡಗಳು ಕ್ರಮವಾಗಿ ಓಷಿಯಾನಿಯಾ, ಯುರೋಪ್‌, ಏಷ್ಯಾ ಹಾಗೂ ಆಫ್ರಿಕಾ ಖಂಡಗಳಲ್ಲಿ ಅಗ್ರಸ್ಥಾನ ಪಡೆದಿವೆ.

56
ಕೆರಿಬಿಯನ್‌ ರಾಷ್ಟ್ರಗಳನ್ನು ಒಳಗೊಂಡ ಪ್ರತ್ಯೇಕ ಅರ್ಹತಾ ಟೂರ್ನಿ

ವೆಸ್ಟ್‌ಇಂಡೀಸ್‌ ತಂಡ ಕೂಡ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೇರಿದ್ದರೂ, ಅದು ವಿವಿಧ ಕೆರಿಬಿಯನ್‌ ದ್ವೀಪಗಳನ್ನು ಒಳಗೊಂಡ ತಂಡ. ಹೀಗಾಗಿ, ಐಸಿಸಿ ಕೆರಿಬಿಯನ್‌ ರಾಷ್ಟ್ರಗಳನ್ನು ಒಳಗೊಂಡ ಪ್ರತ್ಯೇಕ ಅರ್ಹತಾ ಟೂರ್ನಿ ಆಯೋಜಿಸಲಿದೆ. ಅಲ್ಲಿ ಗೆಲ್ಲುವ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದೆ.

66
ಅರ್ಹತಾ ಸುತ್ತಿನಿಂದ ಒಂದು ತಂಡ ಭಾಗಿ

ಇನ್ನೊಂದು ತಂಡಕ್ಕೆ 2027ರಲ್ಲಿ ಅರ್ಹತಾ ಪಂದ್ಯಾವಳಿ ನಡೆಯಲಿದೆ. ಪುರುಷರ ವಿಭಾಗದಲ್ಲೂ ಇದೇ ಮಾನದಂಡ ಅನ್ವಯವಾಗಲಿದೆ. ಖಂಡಗಳಲ್ಲಿ ಅಗ್ರಸ್ಥಾನಿಯಾಗುವ ತಂಡಗಳ ಜೊತೆ ಅರ್ಹತಾ ಸುತ್ತಿನಿಂದ ಬರುವ ತಂಡ ಸೇರಿ ಒಟ್ಟು 6 ತಂಡಗಳು ಸೆಣಸಲಿವೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories