Breaking News: ದಯವಿಟ್ಟು ಗಮನಿಸಿ, ಇಂದಿನ ಇಂಡೋ-ವಿಂಡೀಸ್ T20I ಪಂದ್ಯ ಆರಂಭದ ಸಮಯ ಬದಲು..!

First Published | Aug 1, 2022, 6:36 PM IST

ಬಾಸೆಟೆರೆ: ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಕಡೆ ಕ್ಷಣದ ಬದಲಾವಣೆ ಎನ್ನುವಂತೆ ಪಂದ್ಯದ ಆರಂಭದ ಸಮಯ ಬದಲಾಗಿದೆ. ಅಷ್ಟಕ್ಕೂ ಯಾಕೆ ಹೀಗೆ ಕೊನೆಯ ಕ್ಷಣದ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
 

ಭಾರತ ಹಾಗೂ ವೆಸ್ಟ್ ಇಂಡಿಸ್ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇದೀಗ ಎರಡನೇ ಪಂದ್ಯದಲ್ಲೂ ಅಬ್ಬರಿಸಲು ಸಜ್ಜಾಗಿದೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಇಲ್ಲಿನ ವಾರ್ನರ್ ಪಾರ್ಕ್ ಮೈದಾನ ಆತಿಥ್ಯವನ್ನು ವಹಿಸಿದೆ. ಎರಡನೇ ಟಿ20 ಪಂದ್ಯವು ಇಂದು ಸಂಜೆ ಭಾರತೀಯ ಕಾಲಮಾನ 8 ಗಂಟೆಯಿಂದ ಆರಂಭವಾಗಬೇಕಿತ್ತು. ಆದರೆ ಇದೀಗ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯಾಗಿದೆ.
 

Tap to resize

ಹೌದು, ಇಂದು ಸಂಜೆ 8 ಗಂಟೆಯಿಂದ ಆರಂಭವಾಗಬೇಕಿದ್ದ ಪಂದ್ಯವು ಎರಡು ಗಂಟೆ ತಡವಾಗಿ ಅಂದರೆ ರಾತ್ರಿ 10 ಗಂಟೆಗೆ ಆರಂಭವಾಗಲಿದೆ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದ್ದು, ಖ್ಯಾತ ಕ್ರಿಕೆಟ್ ಪತ್ರಕರ್ತ ಜೋನ್ಸ್‌ ಟ್ವೀಟ್ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಲಗೇಜ್ ತಡವಾಗಿ ಆಗಮಿಸುತ್ತಿರುವುದರಿಂದಾಗಿ ಪಂದ್ಯ ಎರಡು ಗಂಟೆ ತಡವಾಗಿ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಎರಡನೇ ಟಿ20 ಪಂದ್ಯವು ರಾತ್ರಿ 10 ಗಂಟೆಯಿಂದ ಆರಂಭವಾಗಲಿದೆ.
 

Latest Videos

click me!