1. ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಲ ಆರಂಭಿಕ ಬ್ಯಾಟರ್ ಆಗಿ ಹಾಗೂ ನಾಯಕನಾಗಿ ಯಶಸ್ವಿಯಾಗಿದ್ದರು. ಇದೀಗ ಹಿಟ್‌ಮ್ಯಾನ್ ತಮ್ಮ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
2. ಸೂರ್ಯಕುಮಾರ್ ಯಾದವ್: ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಮತ್ತೋರ್ವ ಆರಂಭಿಕನ ಪಾತ್ರದಲ್ಲಿ ಪ್ರಯೋಗ ನಡೆಸುತ್ತಿರುವ ಟೀಂ ಇಂಡಿಯಾ, ಮೊದಲ ಪಂದ್ಯದಲ್ಲಿ ಸೂರ್ಯರನ್ನು ಕಣಕ್ಕಿಳಿಸಿತ್ತು. ಎರಡನೇ ಪಂದ್ಯದಲ್ಲೂ ಸಹಾ ಸೂರ್ಯ ಆರಂಭಿಕನಾಗಿ ಕಣಕ್ಕಿಳಿದರೆ ಅಚ್ಚರಿಪಡುವಂತಿಲ್ಲ.
3. ದೀಪಕ್ ಹೂಡಾ: ಶ್ರೇಯಸ್ ಅಯ್ಯರ್ ಮೊದಲ ಟಿ20 ಪಂದ್ಯದಲ್ಲಿ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದರು. ಇದೇ ವೇಳೆ ಮೊದಲ ಪಂದ್ಯದಲ್ಲಿ ಬೆಂಚ್ ಕಾಯಿಸಿದ್ದ ದೀಪಕ್ ಹೂಡಾ ಒಳ್ಳೆಯ ಫಾರ್ಮ್‌ನಲ್ಲಿರುವುದರಿಂದ ಶ್ರೇಯಸ್ ಅಯ್ಯರ್‌ಗೆ ವಿಶ್ರಾಂತಿ ನೀಡಿ, ಹೂಡಾಗೆ ಆಡುವ ಹನ್ನೊಂದರ ಬಳಗದಲ್ಲಿ ಮಣೆಹಾಕುವ ಸಾಧ್ಯತೆಯಿದೆ.
Rishabh Pant
4. ರಿಷಭ್ ಪಂತ್: ವಿಕೆಟ್ ಕೀಪರ್ ಬ್ಯಾಟರ್ ಪಂತ್ ಯಾವುದೇ ಕ್ಷಣದಲ್ಲಿ ಬೇಕಾದರೂ ಸ್ಪೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇನ್ನು ವಿಕೆಟ್ ಕೀಪಿಂಗ್‌ನಲ್ಲೂ ಚುರುಕಾಗಿರುವ ಪಂತ್, ದೊಡ್ಡ ಇನಿಂಗ್ಸ್ ಕಟ್ಟಲು ಕಾಯುತ್ತಿದ್ದಾರೆ.
5. ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬಲ್ಲ ಆಟಗಾರ. ಕಳೆದ ಪಂದ್ಯದಲ್ಲಿ ಪಾಂಡ್ಯ ವೈಪಲ್ಯ ಅನುಭವಿಸಿದ್ದರು. ಇಂದು ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ ಹಾರ್ಡ್ ಹಿಟ್ಟರ್.
Image credit: PTI
6. ದಿನೇಶ್ ಕಾರ್ತಿಕ್: ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ಕಳೆದ ಪಂದ್ಯದಲ್ಲಿ ಸ್ಪೋಟಕ 41 ರನ್ ಬಾರಿಸಿ ಪಂದ್ಯದ ಗತಿಯನ್ನೇ ಬದಲಿಸಿದ್ದರು. ಡಿಕೆ ಮ್ಯಾಚ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.
7. ರವೀಂದ್ರ ಜಡೇಜಾ: ಟೀಂ ಇಂಡಿಯಾ ಮತ್ತೋರ್ವ ಅನುಭವಿ ಆಲ್ರೌಂಡರ್ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಉಪಯುಕ್ತ ಕಾಣಿಕೆ ನೀಡಬಲ್ಲ ಆಲ್ರೌಂಡರ್. ಜಡ್ಡು ಮೇಲೆ ಟೀಂ ಇಂಡಿಯಾ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದೆ.
r ashwin
8. ರವಿಚಂದ್ರನ್ ಅಶ್ವಿನ್: ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಸಾಕಷ್ಟು ಬಿಡುವಿನ ಭಾರತ ಸೀಮಿತ ಓವರ್‌ಗಳ ತಂಡವನ್ನು ಕೂಡಿಕೊಂಡಿದ್ದು, ಕಮ್‌ಬ್ಯಾಕ್ ಪಂದ್ಯದಲ್ಲೇ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ್ದರು.
9. ಭುವನೇಶ್ವರ್ ಕುಮಾರ್: ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಮೊದಲ ಪಂದ್ಯದಲ್ಲೇ ಅತ್ಯಂತ ಶಿಸ್ತುಬದ್ದ ದಾಳಿಯ ಮೂಲಕ ಗಮನ ಸೆಳೆದಿದ್ದರು. ಇದೀಗ ಅದೇ ಲಯ ಮುಂದುವರೆಸಿಕೊಂಡು ಹೋಗಲು ಸ್ವಿಂಗ್ ಸ್ಪೆಷಲಿಸ್ಟ್ ರೆಡಿಯಾಗಿದ್ದಾರೆ.
10. ಆರ್ಶದೀಪ್ ಸಿಂಗ್: ಟೀಂ ಇಂಡಿಯಾ ಯುವ ವೇಗಿ ಆರ್ಶದೀಪ್ ಸಿಂಗ್, ವಿಂಡೀಸ್ ಎದುರಿನ ಮೊದಲ ಪಂದ್ಯದಲ್ಲೇ ಮಾರಕ ದಾಳಿ ನಡೆಸಿ ಮಿಂಚಿದ್ದರು. ಇಂದು ಕೂಡಾ ವಿಂಡೀಸ್ ಬ್ಯಾಟರ್‌ಗಳನ್ನು ಕಾಡಲು ಆರ್ಶದೀಪ್ ಸಿಂಗ್ ಸಜ್ಜಾಗಿದ್ದಾರೆ.
Ravi Bishnoi
11. ರವಿ ಬಿಷ್ಣೋಯಿ: ಯುಜುವೇಂದ್ರ ಚಹಲ್ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ರವಿ ಬಿಷ್ಣೋಯಿ ಮೊದಲ ಟಿ20 ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಬಿಷ್ಣೋಯಿ ಮತ್ತೆ ವಿಕೆಟ್ ಬೇಟೆಯಾಡಲು ರೆಡಿಯಾಗಿದ್ದಾರೆ.