ದುಬೈ(ನ. 12) ಐಪಿಎಲ್ ಹಬ್ಬ ಮುಗಿದಿದ್ದು ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಿದೆ. ದುಬೈನಿಂದ ನೇರವಾಗಿ ವಿಮಾನ ಏರಿದ್ದಾರೆ. ಟೀಮ್ ಇಂಡಿಯಾಕ್ಕೆ ಅಭಿಮಾನಿಗಳು ಹಾರೈಸಿದ್ದಾರೆ. ದುಬೈ ಬಿಡುವುದಕ್ಕೂ ಮುನ್ನ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಹೊರಟು ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದು ಎಲ್ಲರೂ ಪಿಪಿಇ ಕಿಟ್ ಧರಿಸಿದ್ದಾರೆ. ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಮೂರು ಏಕದಿನ, ಮೂರು ಟಿ20ಯ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ಪಿಂಕ್ ಬಾಲ್ ಟೆಸ್ಟ್ ಕೂಡ ಇರಲಿದೆ. ಒಂದನೇ ಟೆಸ್ಟ್ ನಂತರ ಕೊಹ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತಿದೆ. ರೋಹಿತ್ ಶರ್ಮಾ ಸದ್ಯ ಪಂದ್ಯಾವಳಿಯಿಂದ ಹೊರಗೆ ಉಳಿದಿದ್ದು ನಂತರ ಸೇರಿಕೊಳ್ಳುವ ನಿರೀಕ್ಷೆ ಇದೆ. Indian Premier League 2020 finally concluded on Tuesday (November 10) in Dubai and now the focus shifts to India tour of Australia. ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಹೊರಟ ಟೀಂ ಇಂಡಿಯಾ