ಸೋಶಿಯಲ್ ಮೀಡಿಯಾದಲ್ಲಿ ನೋ ವೈಭವ್ ಟ್ರೆಂಡ್ ಆಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಿಂದ ವೈಭವ್ ಕೈಬಿಡಲಾಗಿದೆ. ಇತ್ತ ಆರಂಭದಲ್ಲೇ ಭಾರತ 2 ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ತಂಡದ ಆಯ್ಕೆ ಟ್ರೋಲ್ ಮಾಡಲಾಗುತ್ತಿದೆ.
ಇಂಗ್ಲೆಂಡ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲೂ ವೈಭವ್ ಸೂರ್ಯವಂಶಿಗೆ ಅವಕಾಶ ಸಿಕ್ಕಿಲ್ಲ. ಐರ್ಲೆಂಡ್ ವಿರುದ್ದ 2 ಪಂದ್ಯ ಬೆಂಚ್ ಕಾದಿದ್ದ ವೈಭವ್ ಸೂರ್ಯವಂಶಿ ಇದೀಗ ಇಂಗ್ಲೆಂಡ್ ವಿರುದ್ಧ ಪಂದ್ಯಗಳಲ್ಲೂ ಬೆಂಚ್ ಕಾಯುವ ಪರಿಸ್ಥಿತಿ ಎದುರಾಗಿದೆ. ವೈಭವ್‌ಗೆ ಅವಕಾಶ ಸಿಗದ ಬೆನ್ನಲ್ಲೇ ಅಭಿಮಾನಿಗಳು ತಂಡದ ಆಯ್ಕೆಯನ್ನು ಟ್ರೋಲ್ ಮಾಡಿದ್ದಾರೆ.
26
ಆರಂಭದಲ್ಲೇ 2 ವಿಕೆಟ್
ವೈಭವ್ ಸೂರ್ಯವಂಶಿ ಹೊರಗಿಟ್ಟ ಭಾರತ ತಂಡ ಇಂಗ್ಲೆಂಡ್ ವಿರುದ್ದ ಕಣಕ್ಕಿಳಿದಿದ್ದು. ಆರಂಭದ 2 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಸಂಜು ಸ್ಯಾಮ್ಸನ್ 1 ರನ್ ಸಿಡಿಸಿ ಔಟಾದರೆ, ಇಶಾನ್ ಕಿಶನ್ ಶೂನ್ಯ ಸುತ್ತಿದರು. ಆರಂಭದಲ್ಲೇ 2 ವಿಕೆಟ್ ಪತನಗೊಳ್ಳುತ್ತಿದ್ದಂತೆ ಇತ್ತ ನೋ ವೈಭವ್ ಟ್ರೆಂಡ್ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.
36
ಎಷ್ಟು ಪಂದ್ಯ ಕಾಯಬೇಕು?
ವೈಭವ್ ಸೂರ್ಯವಂಶಿ ಪ್ರತಿಭಾನ್ವಿತ ಆಟಗಾರ. ಆದರೆ ಪ್ಲೇಯಿಂಗ್ 11 ಆಯ್ಕೆ ಮಾಡುವಾಗ ವೈಭವ್ ಸೂರ್ಯವಂಶಿ ಕೈಬಿಡಲಾಗಿದೆ. ಇನ್ನೆಷ್ಟು ಪಂದ್ಯಗಳಲ್ಲಿ ವೈಭವ್ ಅವಕಾಶಕ್ಕಾಗಿ ಕಾಯಬೇಕು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ವೈಭವ್‌ಗೆ ಅವಕಾಶ ನೀಡಿಲ್ಲ, ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಹಲವು ಮಾಜಿ ಕ್ರಿಕೆಟಿಗರು ವೈಭವ್ ಸೂರ್ಯವಂಶಿಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದರು. ಸುನಿಲ್ ಗವಾಸ್ಕರ್ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ವೈಭವ್ ಸೂರ್ಯವಂಶಿ ಪರ ಬ್ಯಾಟ್ ಬೀಸಿದ್ದರು. ಆದರೆ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಸದ್ಯ ಟಿ20 ವಿಶ್ವಕಪ್ ತಂಡವನ್ನು ಬೆಂಬಲಿಸುತ್ತಿದೆ. 2026ರ ವಿಶ್ವಕಪ್ ಗೆದ್ದ ತಂಡದ ಆಟಗಾರರಿಗೆ ಅವಕಾಶ ನೀಡುತ್ತಿದೆ.
56
ಮತ್ತೊಬ್ಬ ಆಟಗಾರನಲ್ಲ, ಸ್ಫೋಟಕ ಬ್ಯಾಟರ್
ವೈಭವ್ ಸೂರ್ಯವಂಶಿ ಮತ್ತೊಬ್ಬ ಆಟಗಾರ ಅಲ್ಲ. ಯುವ ಆಟಗಾರ ಹೌದು. ಆದರೆ 15ರ ಹರೆಯದಲ್ಲೇ ವಿಶ್ವದ ಕ್ಲಾಸ್ ಬಲರ್‌ಗಳನ್ನು ಯಶಸ್ವಿಯಾಗಿ ಎದುರಿಸಿದ ಆಟಗಾರ. ಹೀಗಾಗಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ವೈಭವ್ ಸೂರ್ಯವಂಶಿಗೆ ಅವಕಾಶ ಸಿಕ್ಕರೆ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದಿದ್ದಾರೆ.
66
ಯಾವಾಗ ವೈಭವ್ ಸೂರ್ಯವಂಶಿ ಪಾದಾರಪಣೆ?
ಇಂಗ್ಲೆಂಡ್ ವಿರುದ್ಧ ಭಾರತ 5 ಟಿ20 ಪಂದ್ಯಗಳನ್ನು ಆಡಲಿದೆ. ಆರಂಭಿಕ 3 ಪಂದ್ಯಗಳನ್ನು ಭಾರತ ಗೆದ್ದು ಸರಣಿ ವಶಪಡಿಸಿಕೊಂಡರೆ ನಾಲ್ಕು ಹಾಗೂ 5ನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವಕಾಶ ಪಡೆಯಲಿದ್ದಾರೆ. ಆದರೆ ಈ ಲೆಕ್ಕಾಚಾರದಲ್ಲಿ ವ್ಯತ್ಯಾಸವಾದರೆ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡುವ ಸಾಧ್ಯತೆಗಳು ಕಡಿಮೆಯಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.