ಐಪಿಎಲ್‌ನಲ್ಲಿ ಚೆನ್ನೈ ಬೌಲರ್‌ಗಳ ಚಚ್ಚಿಹಾಕಿದ್ದ ಪೌಲ್‌ ವಾಲ್ತಾಟಿ ಈಗ ಎಲ್ಲಿದ್ದಾರೆ? ಏನ್‌ ಮಾಡ್ತಿದ್ದಾರೆ..

Published : Jul 01, 2026, 06:54 PM IST

2011ರ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ಪರ ಶತಕ ಸಿಡಿಸಿ ಮಿಂಚಿದ್ದ ಪೌಲ್‌ ವಾಲ್ತಾಟಿ, ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದರು. ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅವರು, ಸದ್ಯ ಬಿಸಿಸಿಐನ ದೇಶೀಯ ಕ್ರಿಕೆಟ್‌ ಪಂದ್ಯಗಳಿಗೆ ಕಾಮೆಂಟರಿ ಮಾಡುತ್ತಿದ್ದಾರೆ.

PREV
15

ಈಗಿನ ಕಾಲದ ಐಪಿಎಲ್‌ ಅಭಿಮಾನಿಗಳಿಗೆ ಒಂದು ಕಾಲದಲ್ಲಿ ಈ ಬ್ಯಾಟ್ಸ್‌ಮನ್‌ ಸೃಷ್ಟಿಸಿದ್ದ ಕ್ರೇಜ್‌ ಅಂದಾಜು ಮಾಡೋಕೆ ಸಾಧ್ಯವಿಲ್ಲ. ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ ಜನಪ್ರಿಯವಾಗಿದ್ದ ವರ್ಷಗಳಲ್ಲಿ ಟಿ20ಯ ಕ್ರೇಜ್‌ ಹೆಚ್ಚಿಸಿದ್ದು ಐಪಿಎಲ್‌. ಇನ್ನು ಈ ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ಅದರ ಕ್ರೇಜ್‌ಅನ್ನು ನಿರೀಕ್ಷೆಗೂ ಮೀರಿ ಜಾಸ್ತಿ ಮಾಡಿದ್ದು ಕನ್ನಡಿಗ ಮನೀಷ್‌ ಪಾಂಡೆ, ವಿರಾಟ್‌ ಕೊಹ್ಲಿಯಂಥ ಸ್ಟಾರ್‌ಗಳು.

25

ಇದೆಲ್ಲದರ ನಡುವೆ 2011ರ ಐಪಿಎಲ್‌ನಲ್ಲಿ ಸೆನ್ಸೇಷನ್‌ ಆಗಿ ಎಲ್ಲರಿಗೂ ಕಂಡಿದ್ದು ಎಲ್ಲಿಯೂ ಇಲ್ಲದ ಹೆಸರು ಪೌಲ್‌ ವಾಲ್ತಾಟಿ. 2011ರ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ (ಅಂದಿನ ಕಿಂಗ್ಸ್‌ ಇಲೆವೆನ್‌ ಪಂಜಾಬ್‌) ಪರವಾಗಿ ಆಡಿ 14 ಪಂದ್ಯಗಳಿಂದ 463 ರನ್‌ ಸಿಡಿಸಿದ್ದರು. ಇದರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಆಕರ್ಷಕ 120 ರನ್‌ಗಳು ಸೇರಿದ್ದವು. ಇದು ಆ ಸೀಸನ್‌ನ ಮೊದಲ ಶತಕ ಎನಿಸಿತ್ತು.

35

ಆದರೆ, ಇದೇ ಫಾರ್ಮ್‌ಅನ್ನು ಅವರು ಮುಂದುವರಿಸಲು ಸಾಧ್ಯವಾಗಲಿಲ್ಲ. 2013ರ ಐಪಿಎಲ್‌ ವೇಳೆಗೆ ಒಪ್ಪಂದ ಪಡೆದುಕೊಳ್ಳಲು ಅವರು ವಿಫಲರಾದರು. ಇದರ ನಡುವೆ ಅವರಿಗೆ ಆದ ಮೊಣಕೈ ಗಾಯ ಕ್ರಿಕೆಟ್‌ ಜೀವನವನ್ನೇ ಅಂತ್ಯ ಮಾಡಿತು. ಮೊಣಕೈ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪೌಲ್‌ ವಾಲ್ತಾಟಿಗೆ ಮತ್ತೆ ಮೊದಲಿನಂತೆ ಬ್ಯಾಟಿಂಗ್‌ ಮಾಡಲು ಸಾಧ್ಯವಾಗಲಿಲ್ಲ. ಟೀಮ್‌ ಇಂಡಿಯಾ ಪರ ಒಂದೇ ಒಂದು ಪಂದ್ಯವಾದರೂ ಆಡಬೇಕು ಎಂದು ಕನಸು ಕಂಡಿದ್ದ ಪೌಲ್‌ ವಾಲ್ತಾಟಿ 2023ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾದರು.

45

ಇಂದಿಗೆ 42 ವರ್ಷದ ಪೌಲ್‌ ವಾಲ್ತಾಟಿ ಎರಡು ವರ್ಷಗಳ ಹಿಂದೆ ಅಮೆರಿಕ ಮೈನರ್‌ ಲೀಗ್‌ ಕ್ರಿಕೆಟ್‌ನಲ್ಲಿ ಸಿಯಾಟ್ಟಲ್‌ ಥಂಡರ್‌ಬೋಲ್ಟ್ಸ್‌ ಟೀಮ್‌ನ ಕೋಚ್‌ ಆಗಿ ನೇಮಕವಾಗಿದ್ದರು. ಅಲ್ಲಿ ಅಷ್ಟೇನೂ ದೊಡ್ಡ ಮಟ್ಟದ ಯಶಸ್ಸು ಕಾಣದ ಹಿನ್ನಲೆಯಲ್ಲಿ ಭಾರತಕ್ಕೆ ವಾಪಸಾಗಿದ್ದರು.

55

ಸದ್ಯ ಅವರು ಬಿಸಿಸಿಐನ ಕಾಮೆಂಟರಿ ಪ್ಯಾನೆಲ್‌ನ (BCCI Domestic Cricket Broadcast Team) ಭಾಗವಾಗಿದ್ದಾರೆ. ಆದರೆ, ದೇಶೀಯ ಕ್ರಿಕೆಟ್‌ನಲ್ಲಿ ಮಾತ್ರವೇ ಅವರ ಕಾಮೆಂಟರಿ ಕೇಳೋಕೆ ಸಿಗಲಿದೆ. ಅದರೊಂದಿಗೆ ಮುಂಬೈ, ಕೇರಳ ಕ್ರಿಕೆಟ್‌ ಅಸೋಸಿಯೇಷನ್‌ನ ಟಿ20 ಲೀಗ್‌, ಕೆಎಸ್‌ಸಿಎಯ ಮಹಾರಾಜ ಟ್ರೋಫಿ ಟಿ20ಯಲ್ಲೂ ಅವರು ಕಾಮೆಂಟರಿ ಮಾಡುತ್ತಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ರಣಜಿ ಟ್ರೋಫಿ, ವಿಜಯ್‌ ಹಜಾರೆ ಟ್ರೋಫಿ ಹಾಗೂ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಗೂ ವಿಶ್ಲೇಷಣೆ ಮಾಡಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories