ವೆಸ್ಟ್‌ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಇಂದು ಭಾರತ ತಂಡ ಪ್ರಕಟ; ಯಾರಿಗೆ ಸಿಗತ್ತೆ ಸ್ಥಾನ?

Published : Sep 24, 2025, 02:53 PM IST

ಮುಂಬೈ: ಏಷ್ಯಾಕಪ್ ಟೂರ್ನಿ ಮುಗಿಯುತ್ತಿದ್ದಂತೆಯೇ ಟೀಂ ಇಂಡಿಯಾ ತವರಿನಲ್ಲಿ ವೆಸ್ಟ್ ಇಂಡೀಸ್ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗೆ ಇಂದು ಭಾರತ ತಂಡ ಪ್ರಕಟವಾಗಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

PREV
16
ಇಂದು ಭಾರತ ತಂಡ ಪ್ರಕಟ

ಅಕ್ಟೋಬರ್ 2ರಿಂದ ಆರಂಭಗೊಳ್ಳಲಿರುವ ವೆಸ್ಟ್‌ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಬುಧವಾರ ಬಿಸಿಸಿಐ, ಭಾರತ ತಂಡವನ್ನು ಆಯ್ಕೆ ಮಾಡಲಿದೆ.

26
ಕರುಣ್ ನಾಯರ್

ತಂಡಕ್ಕೆ ಯಾವುದೇ ಅಚ್ಚರಿಯ ಆಯ್ಕೆ ನಡೆಸುವ ಸಾಧ್ಯತೆ ಇಲ್ಲ ವಾದರೂ, ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಕರ್ನಾಟಕದ ಕರುಣ್ ನಾಯರ್‌ರನ್ನು ತಂಡದಲ್ಲಿ ಮುಂದುವರಿಸಲಾಗುತ್ತಾ ಎನ್ನುವ ಕುತೂಹಲವಿದೆ.

36
ರಿಷಭ್ ಪಂತ್

ಇಂಗ್ಲೆಂಡ್‌ನಲ್ಲಿ ಆಡಿದ್ದ ಬಹುತೇಕ ತಂಡದಲ್ಲಿದ್ದ ಆಟಗಾರರು ಸ್ಥಾನ ಪಡೆಯಲಿದ್ದು, ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ರಿಷಭ್ ಪಂತ್ ಸರಣಿಯಿಂದ ಹೊರಗುಳಿಯಲಿದ್ದಾರೆ.

46
ಜಸ್ಪ್ರೀತ್ ಬುಮ್ರಾ

ಇನ್ನುಳಿದಂತೆ ವೇಗಿ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಬಹುದು ಅಥವಾ ಒಂದು ಟೆಸ್ಟ್‌ಗೆ ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ. ಮತ್ತೊಂದು ರಾಷ್ಟ್ರೀಯ ಮಾಧ್ಯಮದ ವರದಿ ಪ್ರಕಾರ, ಬುಮ್ರಾ ಎರಡೂ ಟೆಸ್ಟ್ ನಲ್ಲಿ ಆಡುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗಿದೆ.

56
ಮಾನವ್ ಸುಥಾರ್

ಇದೇ ವೇಳೆ ಯುವ ಸ್ಪಿನ್ನರ್ ಮಾನವ ಸುಥಾರ್‌ಗೂ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ.

66
ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ ಸರಣಿಗೆ ಸಂಭವನೀಯ ತಂಡ

ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್‌, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ಧೃವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷ‌ರ್‌ ಪಟೇಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ದೇವದತ್ ಪಡಿಕ್ಕಲ್, ಎನ್‌. ಜಗದೀಶನ್, ನಿತೀಶ್ ರೆಡ್ಡಿ/ಆಕಾಶ್ ದೀಪ್/ಅರ್ಶದೀಪ್ ಸಿಂಗ್.

Read more Photos on
click me!

Recommended Stories