1. ಶುಭ್‌ಮನ್ ಗಿಲ್: ಆರಂಭಿಕ ಬ್ಯಾಟರ್ ಮೊದಲೆರಡು ಟಿ20 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದಾರೆ. ಮೊದಲ ಪಂದ್ಯದಲ್ಲಿ 7 ರನ್ ಗಳಿಸಿದ್ದ ಗಿಲ್, ಎರಡನೇ ಪಂದ್ಯದಲ್ಲಿ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಕೊನೆಯ ಪಂದ್ಯದಲ್ಲಿ ಗಿಲ್‌ಗೆ ಮತ್ತೊಂದು ಅವಕಾಶ ದೊರೆಯುವ ಸಾಧ್ಯತೆಯಿದೆ.
2. ಇಶಾನ್ ಕಿಶನ್: ಮತ್ತೋರ್ವ ಆರಂಭಿಕ ಬ್ಯಾಟರ್ ಕಿಶನ್ ಮೊದಲ ಪಂದ್ಯದಲ್ಲಿ ಚುರುಕಿನ 37 ರನ್ ಗಳಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಕೇವಲ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ನಿರ್ಣಾಯಕ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಗಳಿಸಬೇಕಿದ್ದರೇ, ಕಿಶನ್ ಅಬ್ಬರಿಸಬೇಕಿದೆ.
3. ಸೂರ್ಯಕುಮಾರ್ ಯಾದವ್: ಟೀಂ ಇಂಡಿಯಾ ಉಪನಾಯಕ ಸೂರ್ಯಕುಮಾರ್ ಯಾದವ್, ಎರಡನೇ ಟಿ20 ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ 51 ರನ್ ಸಿಡಿಸಿದ್ದರು. ಇದೀಗ ಸೂರ್ಯ ಮತ್ತೆ ಮಿಂಚುವ ವಿಶ್ವಾಸದಲ್ಲಿದ್ದಾರೆ.
4. ರಾಹುಲ್ ತ್ರಿಪಾಠಿ: ಬಲಗೈ ಬ್ಯಾಟರ್ ರಾಹುಲ್ ತ್ರಿಪಾಠಿ, ಎರಡನೇ ಟಿ20 ಪಂದ್ಯದ ವೇಳೆ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಹೀಗಿದ್ದೂ ಮತ್ತೊಮ್ಮೆ ತ್ರಿಪಾಠಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆಯುವ ಸಾಧ್ಯತೆಯಿದೆ.
5. ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಎರಡನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲು ವಿಫಲರಾಗಿದ್ದರು. ಆದರೆ ಬೌಲಿಂಗ್‌ನಲ್ಲಿ 2 ವಿಕೆಟ್ ಕಬಳಿಸಿ ಮಿಂಚಿದ್ದರು.
6. ದೀಪಕ್ ಹೂಡಾ: ಪ್ರತಿಭಾನ್ವಿತ ಆಲ್ರೌಂಡರ್ ದೀಪಕ್ ಹೂಡಾ, ಮೊದಲ ಟಿ20 ಪಂದ್ಯದಲ್ಲಿ ಕೇವಲ 21 ಎಸೆತದಲ್ಲಿ ಅಜೇಯ 41 ರನ್ ಚಚ್ಚಿದ್ದರು. ಆದರೆ ಎರಡನೇ ಪಂದ್ಯದಲ್ಲಿ ವಿಫಲವಾಗಿದ್ದರು. ಇದೀಗ ನಿರ್ಣಾಯಕ ಪಂದ್ಯದಲ್ಲಿ ಹೂಡಾ ಸಿಡಿಯುವ ವಿಶ್ವಾಸದಲ್ಲಿದ್ದಾರೆ.
7. ಅಕ್ಷರ್ ಪಟೇಲ್: ಟೀಂ ಇಂಡಿಯಾ ಮತ್ತೋರ್ವ ಪ್ರತಿಭಾನ್ವಿತ ಆಲ್ರೌಂಡರ್ ಅಕ್ಷರ್ ಪಟೇಲ್, ಬೌಲಿಂಗ್‌ಗಿಂತ ಹೆಚ್ಚಾಗಿ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಎರಡನೇ ಟಿ20 ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ಅಕ್ಷರ್ ಪಟೇಲ್ ಮೇಲೆ ಇದೀಗ ಸಾಕಷ್ಟು ನಿರೀಕ್ಷೆಗಳಿವೆ.
8. ಆರ್ಶದೀಪ್ ಸಿಂಗ್: ಪ್ರತಿಭಾನ್ವಿತ ಎಡಗೈ ವೇಗದ ಬೌಲರ್ ಆರ್ಶದೀಪ್ ಸಿಂಗ್, ಎರಡನೇ ಪಂದ್ಯದಲ್ಲಿ ಕೇವಲ 2 ಓವರ್‌ನಲ್ಲಿ 5 ನೋಬಾಲ್ ಹಾಕಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಹೀಗಿದ್ದೂ ಆರ್ಶದೀಪ್ ಸಿಂಗ್‌ಗೆ ಕಮ್‌ಬ್ಯಾಕ್ ಮಾಡಲು ಮತ್ತೊಂದು ಅವಕಾಶ ದೊರೆಯುವ ಸಾಧ್ಯತೆಯಿದೆ.
9. ಶಿವಂ ಮಾವಿ: ಯುವ ವೇಗಿ ಶಿವಂ ಮಾವಿ ತಮ್ಮ ಪಾದಾರ್ಪಣಾ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಅದರೆ ಎರಡನೇ ಪಂದ್ಯದಲ್ಲಿ ಸಾಕಷ್ಟು ದುಬಾರಿಯಾಗಿದ್ದರು. ಇದೆಲ್ಲದರ ಹೊರತಾಗಿಯೂ ಮಾವಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನಿಸಿಕೊಂಡಿದೆ.
Umran Malik
10. ಉಮ್ರಾನ್ ಮಲಿಕ್: ಟೀಂ ಇಂಡಿಯಾ ಪರ ಅತ್ಯಂತ ಸ್ಥಿರ ಬೌಲಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಕಾಶ್ಮೀರ ಮೂಲದ ವೇಗಿ ಉಮ್ರಾಮನ್ ಮಲಿಕ್ ಕಳೆದ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದರಾದರೂ 48 ರನ್ ನೀಡಿ ದುಬಾರಿಯಾಗಿದ್ದರು. ಇದೀಗ ನಿರ್ಣಾಯಕ ಪಂದ್ಯದಲ್ಲಿ ಮಲಿಕ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
11. ಯುಜುವೇಂದ್ರ ಚಹಲ್: ಟೀಂ ಇಂಡಿಯಾ ಅನುಭವಿ ಲೆಗ್ ಸ್ಪಿನ್ನರ್ ಚಹಲ್ ಮೊದಲ ಪಂದ್ಯದಲ್ಲಿ ವಿಕೆಟ್ ಕಬಳಿಸಲು ವಿಫಲವಾಗಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಪ್ರಮುಖ ಒಂದು ವಿಕೆಟ್ ಕಬಳಿಸಿದ್ದರು. ಚಹಲ್, ಮಹತ್ವದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರಲು ಹಾತೊರೆಯುತ್ತಿದ್ದಾರೆ.