RCB ಮಾಜಿ ಆಟಗಾರ ಇಂದು ದಿಢೀರ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ..!

First Published | Jun 3, 2024, 6:03 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾದ ಬೆನ್ನಲ್ಲೇ ನಿವೃತ್ತಿಯ ಸರದಿ ಆರಂಭವಾಗಿದೆ. ಕೆಲ ದಿನಗಳ ಹಿಂದಷ್ಟೇ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ಆರ್‌ಸಿಬಿಯ ಮತ್ತೋರ್ವ ಆಟಗಾರ ದಿಢೀರ್ ಎನ್ನುವಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿಯುತ್ತಿದ್ದಂತೆಯೇ ಅನುಭವಿ ವಿಕೆಟ್‌ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ವಿದಾಯ ಘೋಷಿಸಿದ್ದರು.

ಇದೀಗ ಈ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಆರ್‌ಸಿಬಿ ಮಾಜಿ ಕ್ರಿಕೆಟಿಗ ಕೇದಾರ್ ಜಾಧವ್ ಕೂಡಾ ಇದೀಗ ಇಂದು ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ದಿಢೀರ್ ಎನ್ನುವಂತೆ ವಿದಾಯ ಘೋಷಿಸಿದ್ದಾರೆ.

Tap to resize

ಹೌದು, 39 ವರ್ಷದ ಮಹಾರಾಷ್ಟ್ರ ಮೂಲದ ಅನುಭವಿ ಬ್ಯಾಟಿಂಗ್ ಆಲ್ರೌಂಡರ್ ಕೇದಾರ್ ಜಾಧವ್ ಇದೀಗ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಜಾಧವ್ 4 ವರ್ಷಗಳ ಹಿಂದೆ ಕೊನೆಯ ಬಾರಿಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು.

ಕೇದಾರ್ ಜಾಧವ್ 2014ರ ನವೆಂಬರ್ ತಿಂಗಳಿನಲ್ಲಿ ಶ್ರೀಲಂಕಾ ಎದುರು ರಾಂಚಿಯಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ್ದರು. ಕೇದಾರ್ ಜಾಧವ್ ಭಾರತ ಪರ 73 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿ ಗಮನ ಸೆಳೆದಿದ್ದಾರೆ.

1500 ಗಂಟೆಗಳ ನನ್ನ ಕ್ರಿಕೆಟ್ ಜರ್ನಿಯಲ್ಲಿ ನನಗೆ ಪ್ರೀತಿ ನೀಡಿ ಗೌರವಿಸಿದ ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಇಂದಿನಿಂದ ನೀವು ನನ್ನನ್ನು ನಿವೃತ್ತ ಕ್ರಿಕೆಟಿಗ ಎಂದು ಪರಿಗಣಿಸಿ ಎಂದು ಜಾಧವ್, ಸೋಷಿಯಲ್ ಮೀಡಿಯಾವಾದ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕೇದಾರ್ ಜಾಧವ್ ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ 42.09ರ ಬ್ಯಾಟಿಂಗ್ ಸರಾಸರಿಯಲ್ಲಿ 2 ಶತಕ ಹಾಗೂ 6 ಅರ್ಧಶತಕ ಸಹಿತ 1,389 ರನ್ ಬಾರಿಸಿದ್ದಾರೆ.

ಇನ್ನು 9 ಟಿ20 ಪಂದ್ಯಗಳ ಪೈಕಿ 6 ಇನಿಂಗ್ಸ್‌ಗಳನ್ನಾಡಿ ಜಾಧವ್ 122 ರನ್ ಬಾರಿಸಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿ 27 ಏಕದಿನ ವಿಕೆಟ್ ಕಬಳಿಸಿದ್ದಾರೆ.

ಕೇದಾರ್ ಜಾಧವ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ಕೊಚ್ಚಿ ಟಸ್ಕರ್ಸ್‌ ಕೇರಳ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದಾರೆ.

Latest Videos

click me!