ದೂರದ ಅಮೇರಿಕಾದಲ್ಲಿ ನಡೆಯುತ್ತಿರುವ T20 World up 2024 ನಲ್ಲಿ ದಾವಣಗೆರೆ ಯುವಕನೊಬ್ಬ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾನೆ. ಈ ಪೋಟೋದಲ್ಲಿ ಕಾಣುತ್ತಿರುವ ಈತನ ಹೆಸರು ಶ್ರೇಯಸ್ ಮೋವಾ ಕೆನಡಾ ಟೀಮ್ ನ ವಿಕೇಟ್ ಕೀಪರ್ ಆಗಿ ಮಿಂಚುತ್ತಿದ್ದಾನೆ.
ದಾವಣಗೆರೆಯ ಎಂ.ಜಿ.ವಾಸುದೇವರೆಡ್ಡಿ ಮತ್ತುಎನ್ ಯಶೋಧಾ ದಂಪತಿಗ ಪುತ್ರ ಶ್ರೇಯಸ್ ಮೋವ್ವಾ ಅದ್ಭುತ ಕ್ರಿಕೆಟ್ ಪ್ರತಿಭೆ. ದಾವಣಗೆರೆಯಲ್ಲಿ ಸಾಫ್ಟವೇರ್ ಇಂಜಿನಿಯರಿಂಗ್ ಮುಗಿಸಿ ಶ್ರೇಯಸ್ ಕೆನಡಾ ದೇಶಕ್ಕೆ ಹೋಗಿದ್ದ ಅಲ್ಲಿಯ ಪೌರತ್ವ ಪಡೆದುಕೊಂಡು ಅಲ್ಲಿಯೇ ನೆಲೆಸಿದ್ದಾರೆ.
ಚಿಕ್ಕವಯಸ್ಸಿನಿಂದಲೂ ಶ್ರೇಯಸ್ ಗೆ ಕ್ರಿಕೇಟ್ ಅಂದರೆ ಪಂಚಪ್ರಾಣ. ಈತನ ಆಟ ಹಾಗೂ ಅವರ ಎನರ್ಜಿ ನೋಡಿದ್ದ ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಕೋಚ್ ನಾಗರಾಜ್ ಆತನನ್ನು ವಿಕೆಟ್ ಕೀಪರ್ ಮಾಡಿದ್ದರು. ಉತ್ತಮ ಬ್ಯಾಟಿಂಗ್ ಕೌಶಲ್ಯತೆ ಹೊಂದಿದ್ದ ಶ್ರೇಯಸ್ ಓದಿನ ಜೊತೆಗೆ ಅಂತರ್ ರಾಜ್ಯ, 19 ಹಾಗೂ 16 ವರ್ಷದೊಳಗಿನ ಪಂದ್ಯಗಳಲ್ಲಿ ಆಡಿ ಶತಕ ಸಿಡಿದ್ದರು.
ವ್ಯಾಸಂಗ ಮುಗಿಸಿದ ನಂತರ ಕೆನಡಾಗೆ ತೆರಳಿದ್ದ ಶ್ರೇಯಸ್ ಅಲ್ಲಿಯೂ ಕ್ರಿಕೆಟ್ ಬಿಟ್ಟಿರಲಿಲ್ಲಾ. ಕೆನಡಾಕ್ಕೆ ಕೆಲಸಕ್ಕೆಂದು ಹೋದ ಶ್ರೇಯಸ್ ಅಲ್ಲಿಯೂ ಕ್ರಿಕೆಟ್ ವೃತ್ತಿಯನ್ನು ಮುಂದುವರೆಸಿದ್ದ. ಹಲವು ವರ್ಷಗಳಿಂದ ಕೆನಡಾ ಟೀಮ್ ಆಟವಾಡಿದ್ದ ಶ್ರೇಯಸ್ ಇದೀಗ ಕೆನಡಾದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇದೀಗ ಜೂನ್ 2 ರಿಂದ ಆರಂಭವಾಗಿರುವ ಟಿ.20 ವಿಶ್ವಕಪ್ ನಲ್ಲಿ ಕೆನಡಾ ಟೀಂನ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆದಿದ್ದು, ಪೋಷಕರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.