ಭಾರತ ಎ ತಂಡದ ಪರ ನಿರಾಸೆ ಮೂಡಿಸಿದ ವೈಭವ್ ಸೂರ್ಯವಂಶಿ, ಕೇವಲ 14 ರನ್‌ಗೆ ಔಟ್

Published : Jun 09, 2026, 11:02 AM IST

ಅಂಡರ್ 19, ಐಪಿಎಲ್ ಟೂರ್ನಿಗಳಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ ಇದೀಗ ಭಾರತ ಎ ತಂಡದ ಪರ ಮೊದಲ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಔಟ್ ಆಗಿದ್ದಾರೆ. ಇತ್ತ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಭಾರತ ತಂಡ ಕೂಡ ಸಂಕಷ್ಟಕ್ಕೆ ಸಿಲುಕಿದೆ.

PREV
16
ಶ್ರೀಲಂಕಾ ವಿರುದ್ಧ ಮುಗ್ಗರಿಸಿದ ವೈಭವ್ ಸೂರ್ಯವಂಶಿ

ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ಎ ತಂಡ ಲಂಕಾ ವಿರುದ್ದ ಮೊದಲ ತ್ರಿಕೋನ ಸರಣಿ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಶ್ರೀಲಂಕಾ ವಿರುದ್ದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಎ ತಂಡ ಬೃಹತ್ ಮೊತ್ತದ ನಿರೀಕ್ಷೆಯಲ್ಲಿತ್ತು. ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ನಿರಾಸೆಯಾಗಿದೆ.

26
14 ರನ್ ಸಿಡಿಸಿ ವೈಭವ್ ಸೂರ್ಯವಂಶಿ ಔಟ್

ವೈಭವ್ ಸೂರ್ಯವಂಶಿ ತಮ್ಮ ಎಂದಿನ ಶೈಲಿಯಲ್ಲೇ ಬ್ಯಾಟಿಂಗ್ ಆರಂಭಿಸಿದ್ದರು. ಮೂರು ಬೌಂಡರಿ ಸಿಡಿಸಿದ್ದರು. ಆದರೆ ವಿಕೆಟ್ ಕೈಚೆಲ್ಲಿ ನಿರಾಸೆ ಅನುಭವಿಸಿದರು. ವೈಭವ್ ಸೂರ್ಯವಂಶಿ 12 ಎಸೆತದಲ್ಲಿ 14 ರನ್ ಸಿಡಿಸಿ ಔಟಾದರು. ಭಾರತ ಎ ತಂಡ 16 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ವೈಭವ್ ಸೂರ್ಯವಂಶಿ ವಿಕೆಟ್ ಪಡೆದ ಶ್ರೀಲಂಕಾ ಭರ್ಜರಿಯಾಗಿ ಸಂಭ್ರಮಿಸಿತು.

36
ಆರಂಭದಲ್ಲೇ ವಿಕೆಟ್ ಪತನ

ಶ್ರೀಲಂಕಾ ಎ ವಿರುದ್ದ ಕಣಕ್ಕಿಳಿದ ಭಾರತ ಎ ತಂಡ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿದೆ. ವೈಭವ್ ಸೂರ್ಯವಂಶಿ ಬೆನ್ನಲ್ಲೇ ಪ್ರಭಸಿಮ್ರನ್ ಸಿಂಗ್ ವಿಕೆಟ್ ಪತನಗೊಂಡಿತು. ಪ್ರಭಸಿಮ್ರನ್ 11 ಎಸೆತದಲ್ಲಿ 2 ರನ್ ಸಿಡಿಸಿ ಔಟಾದರು. 16 ರನ್‌ಗಳಿಗೆ ಭಾರತ ಎ ತಂಡ ಪ್ರಮುಖ 2 ವಿಕೆಟ್ ಕಳೆದುಕೊಂಡಿತು

46
ವೈಭವ್ ಮೇಲೆ ಬೆಟ್ಟದಷ್ಟು ನಿರೀಕ್ಷೆ

ವೈಭವ್ ಸೂರ್ಯವಂಶಿ ಸದ್ಯ ಶ್ರೀಲಂಕಾ ಎ ವಿರುದ್ದ ಸರಣಿ ಆಡುತ್ತಿದ್ದಾರೆ. ಟೀಂ ಇಂಡಿಯಾ ಸೀನಿಯರ್ ತಂಡಕ್ಕೂ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಹಿರಿಯರ ತಂಡದಲ್ಲಿ ವೈಭವ್ ಆಟ ನೋಡಲು ಭಾರತವೇ ಕಾದು ಕುಳಿತಿದೆ. ಆಧರೆ ಭಾರತ ಎ ತಂಡದ ಮೊದಲ ಪಂದ್ಯದಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿದ್ದಾರೆ

56
ಐರ್ಲೆಂಡ್, ಇಂಗ್ಲೆಂಡ್ ಪ್ರವಾಸಕ್ಕೆ ವೈಭವ್

ಶ್ರೀಲಂಕಾದಲ್ಲಿ ತ್ರಿಕೋನ ಸರಣಿ ಮುಗಿಸಿದ ಬಳಿಕ ವೈಭವ್ ಸೂರ್ಯವಂಶಿ ನೇರವಾಗಿ ಟೀಂ ಇಂಡಿಯಾ ಸೀನಿಯರ್ ತಂಡಲ ಸೇರಿಕೊಳ್ಳಲಿದ್ದಾರೆ. ಜೂನ್ 26 ರಿಂದ ಟೀಂ ಇಂಡಿಯಾ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಸರಣಿ ಆರಂಭಗೊಳ್ಳಲಿದೆ.

66
ಇಂಗ್ಲೆಂಡ್ ವಿರುದ್ಧ 5 ಟಿ20 ಪಂದ್ಯ

ಐರ್ಲೆಂಡ್ ವಿರುದ್ದ 2 ಟಿ20 ಪಂದ್ಯ ಆಡಲಿರುವ ಟೀಂ ಇಂಡಿಯಾ ಬಳಿಕ ಇಂಗ್ಲೆಂಡ್ ವಿರುದ್ಧ 5 ಟಿ20 ಪಂದ್ಯ ಆಡಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ತಂಡದಲ್ಲಿ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories