ICC ಏಕದಿನ ವಿಶ್ವಕಪ್‌ಗೆ BCCI ಆಯ್ಕೆ ಮಾಡಿದ ಭಾರತ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಯಾರಿಗೆಲ್ಲಾ ಸ್ಥಾನ..?

First Published | Jan 2, 2023, 5:28 PM IST

ಬೆಂಗಳೂರು(ಜ.02) ಈ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ 20 ಸಂಭವನೀಯ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿರುವುದಾಗಿ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ ಮಾಹಿತಿ ನೀಡಿದ್ದಾರೆ. ಈ ಆಟಗಾರರಿಗೆ ಮುಂಬರುವ ಸರಣಿಗಳಲ್ಲಿ ಸರದಿ ಆಧಾರದಲ್ಲಿ ಅವಕಾಶಗಳನ್ನು ನೀಡಲಾಗುತ್ತದೆ. ಸಂಭವನೀಯರನ್ನು ಹೊರತುಪಡಿಸಿ ದೇಸಿ ಟೂರ್ನಿಗಳಲ್ಲಿ ಅಸಾಧಾರಣ ಪ್ರದರ್ಶನ ತೋರುವ ಆಟಗಾರರನ್ನೂ ವಿಶ್ವಕಪ್‌ ತಂಡಕ್ಕೆ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಶಾ ಹೇಳಿದ್ದಾರೆ.

ಸದ್ಯ ಬಿಸಿಸಿಐ ಆಯ್ಕೆ ಮಾಡಿರುವ ಸಂಭಾವ್ಯ 20 ಆಟಗಾರರ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿರಬಹುದು ಎನ್ನುವುದರ ವಿಶ್ಲೇಷಣೆ ಹೀಗಿದೆ ನೋಡಿ.
 

1. ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ನಾಯಕನಾಗಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಬೇಕಾದ ಗುರುತರ ಜವಾಬ್ದಾರಿಯಿದೆ. ಇದರ ಜತೆಗೆ ಆರಂಭಿಕನಾಗಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡಬೇಕಿದೆ.

2. ಶುಭ್‌ಮನ್‌ ಗಿಲ್‌: ಪಂಜಾಬ್ ಮೂಲದ ಪ್ರತಿಭಾನ್ವಿತ ಬ್ಯಾಟರ್ ಗಿಲ್‌, ಮೀಸಲು ಆರಂಭಿಕನಾಗಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಸಿಕ್ಕ ಅವಕಾಶವನ್ನು ಗಿಲ್ ಉತ್ತಮವಾಗಿಯೇ ಬಳಸಿಕೊಳ್ಳುತ್ತಿದ್ದಾರೆ.

Tap to resize

3. ವಿರಾಟ್ ಕೊಹ್ಲಿ:  ಟೀಂ ಇಂಡಿಯಾ ರನ್‌ ಮಷೀನ್, ಚೇಸಿಂಗ್ ಕಿಂಗ್ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಪ್ರಮುಖ ಬ್ಯಾಟಿಂಗ್ ಅಸ್ತ್ರವೆನಿಸಿಕೊಂಡಿದ್ದಾರೆ. ಕೊಹ್ಲಿ ಅಬ್ಬರಿಸಿದರೇ ಎದುರಾಳಿ ಪಡೆ ಕಂಗಾಲಾಗೋದು ಗ್ಯಾರಂಟಿ
 

4. ಶ್ರೇಯಸ್ ಅಯ್ಯರ್: 2022ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಶ್ರೇಯಸ್ ಅಯ್ಯರ್, ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ.

5. ಸೂರ್ಯಕುಮಾರ್ ಯಾದವ್: ಚುಟುಕು ಕ್ರಿಕೆಟ್‌ನಲ್ಲಿ ಸರಾಗವಾಗಿ ರನ್ ಗಳಿಸುತ್ತಾ ಮಿಂಚಿರುವ ಸೂರ್ಯಕುಮಾರ್ ಯಾದವ್, ಇದೀಗ ಏಕದಿನ ಕ್ರಿಕೆಟ್‌ನಲ್ಲೂ ನೆಲೆ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.
 

6. ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ತಾರಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಸರೆಯಾಗುವ ಕ್ಷಮತೆ ಹೊಂದಿದ್ದು, ಉತ್ತಮ ಮ್ಯಾಚ್ ಫಿನಿಶರ್ ಕೂಡಾ ಹೌದು.

7. ರವೀಂದ್ರ ಜಡೇಜಾ: ಟೀಂ ಇಂಡಿಯಾದ ಮತ್ತೋರ್ವ ಆಲ್ರೌಂಡರ್‌ ಜಡ್ಡು, ಸದ್ಯ ಗಾಯದಿಂದ ಚೇತರಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ತಂಡ ಕೂಡಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಜಡ್ಡು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತಂಡದ ಆಸ್ತಿಯಾಗಬಲ್ಲರು.
 

8. ಅಕ್ಷರ್ ಪಟೇಲ್‌: ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ರೂಪದಲ್ಲಿ ಸ್ಥಾನ ಪಡೆದಿರುವ ಅಕ್ಷರ್ ಪಟೇಲ್, ಭಾರತದ ಪಿಚ್‌ನಲ್ಲಿ ಪರಿಣಾಮಕಾರಿ ದಾಳಿ ನಡೆಸುವ ಕ್ಷಮತೆ ಹೊಂದಿದ್ದಾರೆ.
 

Image credit: Getty

9. ವಾಷಿಂಗ್ಟನ್ ಸುಂದರ್: ಟೀಂ ಇಂಡಿಯಾದ ಮತ್ತೋರ್ವ ಪ್ರತಿಭಾನ್ವಿತ ಬ್ಯಾಟರ್ ವಾಷಿಂಗ್ಟನ್ ಸುಂದರ್ ಕೂಡಾ ಆಲ್ರೌಂಡರ್ ರೂಪದಲ್ಲಿ ಭಾರತ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
 

10. ಇಶಾನ್ ಕಿಶನ್: ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‌, ಆರಂಭಿಕನಾಗಿ ಬ್ಯಾಟಿಂಗ್‌ನಲ್ಲಿ ಕೂಡಾ ಸ್ಪೋಟಕ ಆರಂಭ ಒದಗಿಸಿಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

11. ರಿಷಭ್ ಪಂತ್: ಟೀಂ ಇಂಡಿಯಾ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್. ಸದ್ಯ ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

12. ಕೆ ಎಲ್ ರಾಹುಲ್: ಕರ್ನಾಟಕ ಮೂಲದ ಅನುಭವಿ ಬ್ಯಾಟರ್ ಕೆ ಎಲ್ ರಾಹುಲ್ ಆರಂಭಿಕನಾಗಿ ಹಾಗೂ ಫಿನಿಶರ್ ಆಗಿ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ಆಸರೆಯಾಗುವ ಕ್ಷಮತೆ ಹೊಂದಿದ್ದಾರೆ. ರಾಹುಲ್ ಬ್ಯಾಟಿಂಗ್ ಜತೆಗೆ ಚೆನ್ನಾಗಿ ವಿಕೆಟ್ ಕೀಪಿಂಗ್ ಕೂಡಾ ಮಾಡಬಲ್ಲರು.

13. ಸಂಜು ಸ್ಯಾಮ್ಸನ್‌: ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಪಂತ್, ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಬಲ್ಲ ನೆಚ್ಚಿನ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

14. ಯುಜುವೇಂದ್ರ ಚಹಲ್‌: ಟೀಂ ಇಂಡಿಯಾ ಅನುಭವಿ ಲೆಗ್‌ಸ್ಪಿನ್ನರ್ ಚಹಲ್, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ನಂ.1 ಸ್ಪಿನ್ನರ್ ಎನಿಸಿಕೊಂಡಿದ್ದು, ಸಹಜವಾಗಿಯೇ ಭಾರತ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.
 

15. ರವಿಚಂದ್ರನ್ ಅಶ್ವಿನ್‌: ಭಾರತದ ಅನುಭವಿ ಆಫ್‌ಸ್ಪಿನ್ನರ್ ಅಶ್ವಿನ್‌, ಅಪಾರ ಬೌಲಿಂಗ್ ಅನುಭವವನ್ನು ಹೊಂದಿದ್ದು, ಬ್ಯಾಕ್‌ಅಪ್‌ ಸ್ಪಿನ್ನರ್ ಆಗಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
 

16. ಜಸ್ಪ್ರೀತ್ ಬುಮ್ರಾ: ಟೀಂ ಇಂಡಿಯಾ ಮಾರಕ ವೇಗಿ ಬುಮ್ರಾ ಕೂಡಾ, ಸದ್ಯ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯದಲ್ಲಿಯೇ ಫಿಟ್ನೆಸ್ ಸಾಧಿಸಿ ತಂಡ ಕೂಡಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
 

17. ಮೊಹಮ್ಮದ್ ಶಮಿ: ಟೀಂ ಇಂಡಿಯಾ ಅನುಭವಿ ವೇಗಿ ಶಮಿ, ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಂಗೆಡಿಸುವ ಕ್ಷಮತೆ ಹೊಂದಿದ್ದಾರೆ.
 

18. ಮೊಹಮ್ಮದ್ ಸಿರಾಜ್: ಹೈದರಾಬಾದ್ ಮೂಲದ ವೇಗಿ ಸಿರಾಜ್ ಕೂಡಾ ಸಾಕಷ್ಟು ಮಾರಕ ದಾಳಿಯ ಮೂಲಕ ತಂಡಕ್ಕೆ ಆಸರೆಯಾಗುವ ಕ್ಷಮತೆ ಹೊಂದಿರುವ ವೇಗಿ
 

19. ಆರ್ಶದೀಪ್ ಸಿಂಗ್: ಯುವ ಎಡಗೈ ವೇಗಿ ಆರ್ಶದೀಪ್ ಸಿಂಗ್ ಕೂಡಾ ಟೀಂ ಇಂಡಿಯಾದ ಪ್ರಮುಖ ವೇಗದ ಬೌಲಿಂಗ್ ಅಸ್ತ್ರ ಎನಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಬೌಲಿಂಗ್‌ನಲ್ಲಿ ಸಾಕಷ್ಟು ಏರಿಳಿತ ಹೊಂದಿರುವ ಆರ್ಶದೀಪ್‌, ಡೆತ್ ಓವರ್ ಸ್ಪೆಷಲಿಸ್ಟ್ ಕೂಡಾ ಹೌದು.
 

20. ಉಮ್ರಾನ್ ಮಲಿಕ್:  ಜಮ್ಮು ಕಾಶ್ಮೀರ ಮೂಲದ ಮಾರಕ ವೇಗಿ ಉಮ್ರಾನ್ ಮಲಿಕ್‌, ತಮ್ಮ ಮಿಂಚಿದ ವೇಗದ ಬೌಲಿಂಗ್ ಮೂಲಕ ಗಮನ ಸೆಳೆದಿದ್ದು, ಏಕದಿನ ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆಯಬಲ್ಲ ನೆಚ್ಚಿನ ವೇಗಿಗಳಲ್ಲಿ ಒಬ್ಬರೆನಿಸಿದ್ದಾರೆ 

Latest Videos

click me!