Ind vs NZ ನ್ಯೂಜಿಲೆಂಡ್‌ ಎದುರಿನ ಎರಡನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ..?

First Published Nov 26, 2022, 5:10 PM IST

ಹ್ಯಾಮಿಲ್ಟನ್‌(ನ.26): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವು ಇಲ್ಲಿನ ಸೆಡನ್ ಪಾರ್ಕ್‌ನಲ್ಲಿ ಭಾನುವಾರ ಭಾರತೀಯ ಕಾಲಮಾನ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಲಿದೆ. ಈಗಾಗಲೇ ಮೊದಲ ಏಕದಿನ ಪಂದ್ಯ ಸೋತು ಕಂಗಾಲಾಗಿರುವ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಪಾಲಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ಎರಡು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.
 

1. ಶಿಖರ್ ಧವನ್: ಟೀಂ ಇಂಡಿಯಾ ನಾಯಕ ಧವನ್, ಮೊದಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಆದರೆ ನಾಯಕನಾಗಿ ಪಂದ್ಯವನ್ನು ಗೆಲ್ಲಿಸಲು ವಿಫಲವಾಗಿದ್ದರು.
 

2. ಶುಭ್‌ಮನ್‌ ಗಿಲ್‌: ಪ್ರತಿಭಾನ್ವಿತ ಬ್ಯಾಟರ್ ಗಿಲ್ ಕೂಡಾ ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದು ಮಾತ್ರವಲ್ಲದೇ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಅದೇ ಲಯ ಮುಂದುವರೆಸಿಕೊಂಡು ಹೋಗಲು ಗಿಲ್ ಎದುರು ನೋಡುತ್ತಿದ್ದಾರೆ.
 

3. ಶ್ರೇಯಸ್ ಅಯ್ಯರ್: ಮುಂಬೈ ಮೂಲದ ಪ್ರತಿಭಾನ್ವಿತ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದು, ಕಳೆದ ಪಂದ್ಯದಲ್ಲೂ 80 ರನ್ ಸಿಡಿಸಿದ್ದರು.
 

4. ಸೂರ್ಯಕುಮಾರ್ ಯಾದವ್: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಸೂರ್ಯ ಮೊದಲ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ಫಾರ್ಮ್‌ಗೆ ಮರಳು ಎದುರು ನೋಡುತ್ತಿದ್ದಾರೆ.
 

5. ರಿಷಭ್ ಪಂತ್: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಪಂತ್‌, ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಉಪನಾಯಕರಾಗಿರುವ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಬೇಕಿದೆ.
 

6. ಸಂಜು ಸ್ಯಾಮ್ಸನ್: ಕೇರಳ ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್‌, ಕಳೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಜತೆ ಜವಬ್ದಾರಿಯುತ ಜತೆಯಾಟ ನಿಭಾಯಿಸಿದ್ದರು. ಸಂಜು ಸ್ಪೋಟಕ ಇನಿಂಗ್ಸ್‌ ಆಡಬೇಕಿದೆ.
 

7. ವಾಷಿಂಗ್ಟನ್ ಸುಂದರ್: ತಮಿಳುನಾಡು ಮೂಲದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್‌ನಲ್ಲಿ ಚುರುಕಾಗಿ ರನ್ ಗಳಿಸಿ ಗಮನ ಸೆಳೆದಿದ್ದರು. ಬೌಲಿಂಗ್‌ನಲ್ಲೂ ಸುಂದರ್‌ ವಿಕೆಟ್ ಕಬಳಿಸಲು ಎದುರು ನೋಡುತ್ತಿದ್ದಾರೆ.
 

8. ದೀಪಕ್ ಚಹರ್: ಕಳೆದ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಕೊಂಚ ದುಬಾರಿಯಾಗಿದ್ದರು. ಹೀಗಾಗಿ ಸ್ವಿಂಗ್ ಸ್ಪೆಷಲಿಸ್ಟ್ ವೇಗಿ ದೀಪಕ್ ಚಹರ್ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ನಿರೀಕ್ಷೆಯಿದೆ.
 

9. ಆರ್ಶದೀಪ್ ಸಿಂಗ್: ಟೀಂ ಇಂಡಿಯಾ ಎಡಗೈ ವೇಗಿ ಆರ್ಶದೀಪ್ ಸಿಂಗ್, ಟಿ20 ಮಾದರಿಯಲ್ಲಿ ಮಾರಕ ದಾಳಿ ನಡೆಸಿದ್ದರು, ಆದರೆ ಏಕದಿನ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಎರಡನೇ ಏಕದಿನ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಕಾದು ನೋಡಬೇಕಿದೆ.

10. ಕುಲ್ದೀಪ್ ಯಾದವ್: ಇತ್ತೀಚಿಗೆ ಯುಜುವೇಂದ್ರ ಚಹಲ್ ವಿಕೆಟ್ ಕಬಳಿಸಲು ವಿಫಲವಾಗುತ್ತಿದ್ದು, ಎರಡನೇ ಪಂದ್ಯಕ್ಕೆ ಚಹಲ್‌ಗೆ ವಿಶ್ರಾಂತಿ ನೀಡಿ ಕುಲ್ದೀಪ್ ಯಾದವ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ.
 

10. ಉಮ್ರಾನ್ ಮಲಿಕ್: ಮಾರಕ ವೇಗಿ ಮೊದಲ ಪಂದ್ಯದಲ್ಲೇ 2 ವಿಕೆಟ್ ಕಬಳಿಸಿ ಮಿಂಚಿದ್ದ ಕಾಶ್ಮೀರ್ ಎಕ್ಸ್‌ಪ್ರೆಸ್‌, ಇದೀಗ ಎರಡನೇ ಪಂದ್ಯದಲ್ಲೂ ವೇಗದ ದಾಳಿಯ ಮೂಲಕ ಕಿವೀಸ್ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

click me!