Ind vs Aus: ಟೀಂ ಇಂಡಿಯಾ ಸೋಲಿಸಿದ ಆ್ಯಡಂ ಜಂಪಾ ಹೆಸರಿಗೆ ಅಪರೂಪದ ದಾಖಲೆ ಸೇರ್ಪಡೆ..!

First Published Mar 23, 2023, 9:24 AM IST

ಚೆನ್ನೈ(ಮಾ.23): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ 21 ರನ್‌ಗಳ ಆಘಾತಕಾರಿ ಸೋಲು ಅನುಭವಿಸುವ ಮೂಲಕ 1-2 ಅಂತರದಲ್ಲಿ ಆಸ್ಟ್ರೇಲಿಯಾಗೆ ಶರಣಾಗಿದೆ. 4 ವಿಕೆಟ್ ಕಬಳಿಸಿದ ಆ್ಯಡಂ ಜಂಪಾ, ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಇದೇ ಪಂದ್ಯದಲ್ಲಿ ಜಂಪಾ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಅಷ್ಟಕ್ಕೂ ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಆ್ಯಡಂ ಜಂಪಾ, ಭಾರತ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಮೂರನೇ ಪಂದ್ಯದಲ್ಲಿ ಜಂಪಾ, ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
 

ಮೂರನೇ ಏಕದಿನ ಪಂದ್ಯದಲ್ಲಿ ಆ್ಯಡಂ ಜಂಪಾ, ಟೀಂ ಇಂಡಿಯಾದ ಶುಭ್‌ಮನ್ ಗಿಲ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಹೀಗೆ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಕೈಯಲ್ಲಿದ್ದ ಗೆಲುವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು.
 

ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆ್ಯಡಂ ಜಂಪಾ, ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.ಜಂಪಾ 45 ರನ್ ನೀಡಿ ಟೀಂ ಇಂಡಿಯಾದ 4 ವಿಕೆಟ್ ಕಬಳಿಸಿದರು.
 

ಹೌದು, ಆ್ಯಡಂ ಜಂಪಾ, ಭಾರತ ಎದುರಿನ ಏಕದಿನ ಸರಣಿಯ ಪಂದ್ಯವೊಂದರಲ್ಲಿ ಎರಡು ಬಾರಿ 4+ ವಿಕೆಟ್ ಕಬಳಿಸಿದ ಮೊದಲ ಹಾಗೂ ಏಕೈಕ ಬೌಲರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ಈ ಮೊದಲು ಆ್ಯಡಂ ಜಂಪಾ, 2020ರಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ 4 ವಿಕೆಟ್ ಕಬಳಿಸಿದ್ದರು.

ಭಾರತ ಎದುರು ಏಕದಿನ ಕ್ರಿಕೆಟ್‌ನಲ್ಲಿ ಕೇವಲ ನಾಲ್ಕು ಸ್ಪಿನ್ನರ್‌ಗಳು ಮಾತ್ರ 4+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಜಂಪಾಗಿಂತ ಮೊದಲು 2007ರಲ್ಲಿ ಬ್ರಾಡ್‌ ಹಾಗ್, ಭಾರತ ಎದುರು ಏಕದಿನ ಪಂದ್ಯದಲ್ಲಿ 4+ ವಿಕೆಟ್ ಕಬಳಿದ ಸಾಧನೆ ಮಾಡಿದ್ದರು.

click me!