ಭಾರತ ಮುಗ್ಗರಿಸಿದರೆ ಮಟನ್ ಬಿರಿಯಾನಿ ಹಂಚುತ್ತೇನೆ; ಮತ್ತೆ ಹರಿಹಾಯ್ದ ಪಾಕ್ ನಟಿ!

First Published | Oct 22, 2023, 6:13 PM IST

ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಪದೇ ಪದೇ ಭಾರತ ವಿರುದ್ಧ ದ್ವೇಷಕಾರುತ್ತಿದ್ದಾರೆ. ಇದೀಗ ನ್ಯೂಜಿಲೆಂಡ್ ತಂಡ ಭಾರತವನ್ನು ಸೋಲಿಸಿದರೆ ದರ್ಗಾದ ಬಳಿ ಎಲ್ಲರಿಗೂ ಮಟನ್ ಬಿರಿಯಾನಿ ಹಂಚುತ್ತೇನೆ ಎಂದು ಘೋಷಿಸಿದ್ದಾರೆ. 

ಪಾಕಿಸ್ತಾನ ನಟಿ ಸೆಹರ್ ಶಿನ್ವಾರಿ ಭಾರತ ವಿರುದ್ಧ ದ್ವೇಷಕಾರುತ್ತಲೇ ಇದ್ದಾರೆ. ಇದರ ನಡುವೆ ಪ್ರಧಾನಿ ಮೋದಿ, ಕಾಶ್ಮೀರ ಸೇರಿದಂತೆ ಹಲವು ವಿಚಾರಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡುತ್ತಾ ಜನಪ್ರಿಯರಾಗುವ ಪ್ರಯತ್ನದಲ್ಲಿದ್ದಾರೆ.

ಭಾರತ ಇಸ್ಲಾಮಿಕ್ ದೇಶವಾಗಬೇಕು, ಮೋದಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರೆ ಟೀಂ ಇಂಡಿಯಾಗೆ ಬೆಂಬಲ ನೀಡುವುದಾಗಿ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದ ಶಿನ್ವಾರಿ ಇದೀಗ ಭಾರತ ತಂಡದ ವಿರುದ್ಧ ಮತ್ತೆ ವಿಷಕಾರಿದ್ದಾರೆ.

Tap to resize

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ಭಾರತ ಹಾಗೂ ನ್ಯೂಜಿಲೆಂಡ್ ಪಂದ್ಯ ರೋಚಕತೆ ಪಡೆಯುತ್ತಿದೆ. ಇಂದು ನ್ಯೂಜಿಲೆಂಡ್ ತಂಡ ಭಾರತವನ್ನು ಸೋಲಿಸಬೇಕು ಎಂದು ಪಾಕ್ ನಟಿ ಆಶಯ ವ್ಯಕ್ತಪಡಿಸಿದ್ದಾರೆ.
 

ಭಾರತ ತಂಡ ಮುಗ್ಗರಿಸಿದರೆ ಪಾಕಿಸ್ತಾನ ಅಬ್ದುಲ್ಲಾ ಶಾ ಘಾಜಿ ದರ್ಗಾದ ಬಳಿ ಎಲ್ಲರಿಗೂ ಮಟನ್ ಬಿರಿಯಾನಿ ಹಂಚುತ್ತೇನೆ ಎಂದು ಟ್ವೀಟರ್‌ನಲ್ಲಿ ಸೆಹರ್ ಶಿನ್ವಾರಿ ಘೋಷಿಸಿದ್ದಾರೆ.

ಇದೇ ವೇಳೆ ನ್ಯೂಜಿಲೆಂಡ್ ತಂಡಕ್ಕೆ ಪ್ರಶ್ನೆಯೊಂದನ್ನೂ ಇಟ್ಟಿದ್ದಾರೆ.. ನ್ಯೂಜಿಲೆಂಡ್ ಆಟಗಾರರಿಗೆ 220 ಮಿಲಿಯನ್ ಪಾಕಿಸ್ತಾನಿಗಳು ಬೆಂಬಲ ನೀಡಿದ್ದಾರೆ. ನೀವು ಪಾಕಿಸ್ತಾನಿಯರಿಗೆ ಹೀರೋ ಆಗಬೇಕಾ, ಜೀರೋ ಆಗ್ತಿರಾ ಎಂದು ಪ್ರಸ್ನಿಸಿದ್ದಾರೆ.

ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಸೆಹರ್ ಶಿನ್ವಾರಿ, ಭಾರತೀಯ ಜನತಾ ಪಾರ್ಟಿ ಭಯೋತ್ಪಾದಕ ಸಂಘಟನೆ ಎಂದು ಶಿನ್ವಾರಿ ಹೇಳಿದ್ದಾರೆ. ಪ್ರಧಾನಿ ಮೋದಿ ಈ ಸಂಘಟನೆಯ ಮಂತ್ರಿ ಎಂದು ಶಿನ್ವಾರಿ ಟ್ವೀಟ್ ಮಾಡಿದ್ದಾರೆ.

ಪಾಕ್ ನಟಿ ಶಿನ್ವಾರಿ ಇತ್ತೀಚೆಗೆ ಭಾರಿ ಟ್ರೋಲ್ ಆಗಿದ್ದರು. ಶುಕ್ರವಾರ ಪಾಕಿಸ್ತಾನ ತಂಡಕ್ಕೆ ಸೋಲೇ ಇಲ್ಲ ಎಂದು ಟ್ವೀಟ್ ಮಾಡಿದ್ದರು. ಆದರೆ ಶುಕ್ರವಾರವೇ ಆಸ್ಟ್ರೇಲಿಯಾ ವಿರುದ್ದ ಪಾಕ್ ಮುಗ್ಗರಿಸಿತ್ತು.

ಈ ಸೋಲಿನ ಬೆನ್ನಲ್ಲೇ ಸೆಹರ್ ಶಿನ್ವಾರಿ ಭಾರಿ ಟ್ರೋಲ್ ಆಗಿದ್ದರು. ಈ ಟ್ರೋಲಿನ ಬೆನ್ನಲ್ಲೇ ಭಾರತ ವಿರೋದಿ ಟ್ವೀಟ್ ಮೂಲಕ ಪಾಕಿಸ್ತಾನಿಗರ ಸೆಳೆಯು ಪ್ರಯತ್ನ ಮಾಡಿದ್ದಾರೆ.

Latest Videos

click me!