ಬಹುತೇಕರು ಡ್ರಾಪೌಟ್, ಫೈನಲ್ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರು ಏನು ಓದಿದ್ದಾರೆ?

First Published | Nov 18, 2023, 5:13 PM IST

ಭಾರತ-ಆಸ್ಟ್ರೇಲಿಯಾ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಭರ್ಜರಿ ತಾಲೀಮು ನಡೆದಿದೆ. ಫೈನಲ್ ಪಂದ್ಯ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರ ವಿದ್ಯಾರ್ಹತೆ ಏನು? ಗರಿಷ್ಠ ವಿದ್ಯಾಭ್ಯಾಸ ಮಾಡಿದ ಕೀರ್ತಿ ಆರ್ ಅಶ್ವಿನ್ ಪಾಲಾಗಿದ್ದರೆ, ಬಹುತೇಕರು ಡ್ರಾಪ್ ಆಟ್ ಆಗಿದ್ದಾರೆ.

ನ.19ರ ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರ ವಿದ್ಯಾರ್ಹತೆ ವಿವರ ಇಲ್ಲಿದೆ.

ಪ್ರಸಕ್ತ ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಗರಿಷ್ಠ ಎಜುಕೇಶನಲ್ ಕ್ವಾಲಿಫಿಕೇಶನ್ ಕೀರ್ತಿ ಅಶ್ವಿನ್ ಪಾಲಾಗಿದೆ. ಆರ್ ಅಶ್ವಿನ್ ಎಂಜಿನೀಯರಿಂಗ್  ಮಾಡಿದ್ದಾರೆ. ಚೆನ್ನೈ  SSN ಎಂಜಿನೀಯರಿಂಗ್ ಕಾಲೇಜಿನಲ್ಲಿ ಇನ್‌ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಬಿಟೆಕ್ ಮಾಡಿದ್ದಾರೆ.

Tap to resize

ನಾಯಕ ರೋಹಿತ್ ಶರ್ಮಾ ಪಿಯುಸಿ ಬಳಿಕ ಪದವಿಗಾಗಿ ಮುಂಬೈ ರಿಜ್ವಿ ಕಾಲೇಜು ಸೇರಿಕೊಂಡಿದ್ದರು. ಆದರೆ ಕ್ರಿಕೆಟ್ ಕಾರಣ ರೋಹಿತ್ ಶರ್ಮಾ ವಿದ್ಯಾಭ್ಯಾಸ ಮುಂದುವರಿಸಲಿಲ್ಲ.

ಸಚಿನ್ ತೆಂಡೂಲ್ಕರ್ ಶತಕ ದಾಖಲೆ ಮುರಿದು ಇತಿಹಾಸ ರಚಿಸಿರುವ ವಿರಾಟ್ ಕೊಹ್ಲಿ ಭಾರತಿ ಪಬ್ಲಿಕ್ ಸ್ಕೂಲ್ ಹಾಗೂ ಕ್ಸೆವಿಯರ್ ಕಾನ್ವೆಂಟ್ ಸ್ಕೂಲ್‌ ಮೂಲಕ ಪಿಯುಸಿ ಮುಗಿಸಿದ್ದಾರೆ. ಬಳಿಕ ವಿದ್ಯಾಭ್ಯಾಸ ಮುಂದುವರಿಸಿಲ್ಲ.
 

ಕೆಎಲ್ ರಾಹುಲ್ ಪೋಷಕರು ಫ್ರೋಫೆಸರ್. ಇತ್ತ ರಾಹುಲ್ ಬಿಕಾಂ ಪದವಿ ಪಡೆದಿದ್ದಾರೆ. ಶಾಲೆ, ಪಿಯುಸಿ ವಿದ್ಯಾಭ್ಯಾಸ ಮಂಗಳೂರಿನಲ್ಲಿ ಪೂರೈಸಿದ್ದಾರೆ. ಭಗವಾನ್ ಮಹಾವೀರ್ ಜೈನ್ ಕಾಲೇನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ 7 ವಿಕೆಟ್, ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ 23 ವಿಕೆಟ್ ಕಬಳಿ ದಾಖಲೆ ಬರೆದಿರುವ ಮೊಹಮ್ಮದ್ ಶಮಿ 10ನೇ ತರಗತಿ ಬಳಿಕ ವಿದ್ಯಾಭ್ಯಾಸ ಮುಂದುವರಿಸಿಲ್ಲ. ಉತ್ತರ ಪ್ರದೇಶದ ಮೊರಾಬಾದ‌್‌ನ ಅಮೀರ್ ಹಸನ್ ಖಾನ್ ವಿದ್ಯಾಸಂಸ್ಧೆಯಲ್ಲಿ 10ನೇ ತರಗತಿ ವರಿಗೆ ವಿದ್ಯಾಭ್ಯಾಸ ಮಾಡಿದ್ದಾರೆ.

ಶುಬಮನ್ ಗಿಲ್ ಮೊಹಾಲಿಯಲ್ಲಿ 10ನೇ ತರಗತಿ ಪೂರೈಸಿದ್ದಾರೆ. ಬಳಿಕ ವಿದ್ಯಾಭ್ಯಾಸ ಮುಂದುವರಿಸಿಲ್ಲ. ಇತ್ತ ಶಾರ್ದೂಲ್ ಠಾಕೂರ್ ಮುಂಬೈನ ವಿವೇಕಾನಂದ ಸ್ಕೂಲ್‌ನಲ್ಲಿ 10ನೇ ತರಗಿ ಪೂರೈಸಿ, ಕಾಲೇಜು ಅಡ್ಮಿಷನ್ ಪಡೆದಿದ್ದಾರೆ. ಆದರೆ ಮಂದುವರಿಸಿಲ್ಲ.

ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ಕಾಮರ್ಸ್ ಪದವಿ ಪೂರೈಸಿದ್ದಾರೆ. ಯಾದವ್ ಮುಂಬೈನ ಪಿಳ್ಳೈ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದರೆ, ಶ್ರೇಯಸ್ ಅಯ್ಯರ್ ರಾಮನಿರಂಜನ್‌ ಆನಂದಿಲಾಲ್ ಪೋದಾರ್ ಕಾಲೇಜಿನಲ್ಲಿ ಕಾಮರ್ಸ್ ಹಾಗೂ ಎಕಾನಮಿಕ್ಸ್‌ನನಲ್ಲಿ ಪದವಿ ಪಡೆದಿದ್ದಾರೆ.
 

ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಗುಜರಾತಿನ ಶಾರ್ದಾಗ್ರಾಮ್ ಶಾಲೆಯಲ್ಲಿ 10ನೇ ತರಗತಿ ಪೂರೈಸಿದ್ದಾರೆ. ಬಳಿಕ ಕಾಲೇಜು ಸೇರಿದರೂ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಿಲ್ಲ.

ವೇಗಿ ಜಸ್ಪ್ರೀತ್ ಬುಮ್ರಾ ಅಹಮ್ಮದಾಬಾದ್‌ನ ನಿರ್ಮಾನ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಬುಮ್ರಾ 12ನೇ ತರಗತಿ ಬಳಿಕ ಕಾಲೇಜು ವಿದ್ಯಾಭ್ಯಾಸ ಮುಂದುವರಿಸಿಲ್ಲ.

Latest Videos

click me!