ಗ್ಲೆನ್‌ ಮ್ಯಾಕ್ಸ್‌ವೆಲ್‌ ಮನುಷ್ಯನೇ ಅಲ್ಲ: ವಿಶ್ವಕಪ್‌ನಲ್ಲಿ ಕ್ರೇಜಿ ಆಟವಾಡಿದ ಆರ್‌ಸಿಬಿ ಬ್ಯಾಟರ್‌ಗೆ ನೆಟ್ಟಿಗರ ಮೆಚ್ಚುಗೆ

First Published Nov 8, 2023, 11:31 AM IST

ಐಪಿಎಲ್‌ನಲ್ಲಿ ಆರ್‌ಸಿಬಿ ಆಟಗಾರನಾಗಿರೋ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಪ್ಘಾನಿಸ್ತಾನ ವಿರುದ್ದದ ವಿಶ್ವಕಪ್‌ನಲ್ಲಿ ಸಿಡಿಸಿದ ಸ್ಫೋಟಕ ದ್ವಿಶತಕಕ್ಕೆ ಇಂಟರ್ನೆಟ್‌ ನಿಬ್ಬೆರಗಾಗಿದೆ. 

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ಅಸಾಮಾನ್ಯ ಕ್ರಿಕೆಟ್‌ ಆಟಕ್ಕೆ ಸಾಕ್ಷಿಯಾಯಿತು. ಇದು ಸ್ಟೇಡಿಯಂನಲ್ಲಿದ್ದವರಿಗೆ ಮಾತ್ರವಲ್ಲ, ಜಗತ್ತಿನಾದ್ಯಂತದ ಕ್ರಿಕೆಟ್‌ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಆರ್‌ಸಿಬಿ ಆಟಗಾರ ಹಾಗೂ ಅಸ್ಟ್ರೇಲಿಯಾ ಬ್ಯಾಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌. 

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನದ ಬೌಲಿಂಗ್ ದಾಳಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಫೋಟಕ ದ್ವಿಶತಕ ಬಾರಿಸಿದ್ದು, ಯಾವುದೇ ಬೌಲರ್ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ.

ಮುಜೀಬ್ ಉರ್ ರೆಹಮಾನ್ ಮ್ಯಾಕ್ಸ್‌ವೆಲ್‌ ಕ್ಯಾಚ್‌ ಕೈಬಿಟ್ಟ ಕಾರಣ, ಈ ಅಪರೂಪದ ಆಟಕ್ಕೆ ಅವರಿಗೂ ಕ್ರೆಡಿಟ್‌ ನೀಡಬೇಕು. ಇದಿಲ್ಲದಿದ್ದರೆ ಅವರ ಕ್ರೇಜಿ ಬ್ಯಾಟಿಂಗ್‌ ನಿನ್ನೆ ಸಾಧ್ಯವಾಗುತ್ತಿರಲಿಲ್ಲ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಯಾವುದೇ ಫುಟ್‌ವರ್ಕ್‌ ಇಲ್ಲದೆ ಲೀಲಾಜಾಲವಾಗಿ ಸಿಕ್ಸರ್‌ಗಳ ಸುರಿಮಳೆ ಸುರಿಸಿದ್ದಾರೆ. 

ಮ್ಯಾಕ್ಸ್‌ವೆಲ್‌ ಮತ್ತು ಕಮ್ಮಿನ್ಸ್ ನಡುವಿನ ಜೊತೆಯಾಟ ಆರಂಭವಾದಾಗ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತ್ತು. ಆದರೆ ಅಫ್ಘಾನಿಸ್ತಾನ ವಿರುದ್ಧ ಸೋಲಿನ ಭೀತಿಯಲ್ಲಿದ್ದ ಆಸ್ಟ್ರೇಲಿಯಾ ಪಂದ್ಯದಲ್ಲಿ ಜಯಗಳಿಸಿದೆ. 

ಈ ಹಿಂದಿನ ದಾಖಲೆಗಳು ಛಿದ್ರಛಿದ್ರವಾಗಿದ್ದು, ಬೌಲರ್‌ಗಳನ್ನು ಶಿಕ್ಷಿಸಲಾಗಿದ್ದು, ಪ್ರೇಕ್ಷಕರು ಮಾತ್ರ ಪಂದ್ಯವನ್ನು ಸಖತ್‌ ಎಂಜಾಯ್‌ ಮಾಡ್ತಿದ್ದರು. ಇದಕ್ಕೆ ಕಾರಣ ಕೇವಲ ಒಬ್ಬ ವ್ಯಕ್ತಿ ಗ್ಲೆನ್ ಮ್ಯಾಕ್ಸ್‌ವೆಲ್. ಇದರೊಂದಿಗೆ ಅಫ್ಘನ್‌ ತಂಡದ ಸೆಮೀಸ್‌ ಕನಸು ಕೂಡ ಬಹುತೇಕ ನುಚ್ಚುನೂರಾದಂತೆ. 

128 ಎಸೆತಗಳಲ್ಲಿ 157.03 ಸ್ಟ್ರೈಕ್ ರೇಟ್‌ನೊಂದಿಗೆ 201 ರನ್ ಗಳಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌, 10 ಸಿಕ್ಸರ್‌ಗಳು ಮತ್ತು 21 ಬೌಂಡರಿಗಳನ್ನು ಸಿಡಿಸಿದರು.  292 ರನ್‌ಗಳ ಬೆನ್ನಟ್ಟಿದ ಆಸ್ಟ್ರೇಲಿಯಾ ಏಳು ವಿಕೆಟ್‌ಗಳನ್ನು ಕಳೆದುಕೊಂಡಾಗ 100 ರನ್‌ ಅನ್ನೂ ಗಳಿಸಿರಲಿಲ್ಲ.

ಈ ಹಿನ್ನೆಲೆ ಗೆಲುವು ಅಫ್ಘಾನಿಸ್ತಾನದ್ದೇ ಎಂದೇ ಬಹುತೇಕರು ಎಣಿಸಿದ್ದರು. ಆದರೆ, ಅಫ್ಘಾನಿಸ್ತಾನ ಕ್ರಿಕೆಟಿಗರು ಹಾಗೂ ಅಭಿಮಾನಿಗಳನ್ನು ಮ್ಯಾಕ್ಸಿ ಕಣ್ಣೀರು ಹಾಕುವಂತೆ ಆಡಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಆಟಗರನೂ ಆಗಿರೋ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅಮೋಘ ಆಟದೊಂದಿಗೆ, ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.

ಅವರ ಈ ಅದ್ಭುತ ಬ್ಯಾಟಿಂಗ್‌ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಭಾರಿ ಮೆಚ್ಚುಗೆ ಹಾಗೂ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಟ್ರೋಲ್‌ಗಳ ಸುರಿಮಳೆಯೂ ಆಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅಮೋಘ ಆಟದೊಂದಿಗೆ, ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ. 

ಇದಕ್ಕೂ ಮೊದಲು, ಅಫ್ಘಾನಿಸ್ತಾನದ ಆರಂಭಿಕ ಬ್ಯಾಟರ್ ಇಬ್ರಾಹಿಂ ಜದ್ರಾನ್ ಸೋಮವಾರ ಇತಿಹಾಸ ನಿರ್ಮಿಸಿದ್ದು, ಐಸಿಸಿ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅವರ ದೇಶದ ಪರ ಮೊದಲ ಆಟಗಾರ ಶತಕ ಸಿಡಿಸಿದ್ದಾರೆ. ಮಂಗಳವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜದ್ರಾನ್ ಈ ದಾಖಲೆ ಮಾಡಿದರು. 143 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 129 ರನ್ ಗಳಿಸಿದ ಅವರು ತಂಡ ಹೆಚ್ಚು ರನ್‌ ಗಳಿಸಲು ಕಾರಣವಾದರು.

ಆಸ್ಟ್ರೇಲಿಯಾ ತಂಡವು ಅಫ್ಘಾನಿಸ್ತಾನವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಮುನ್ನಡೆಯಲು ಅವರ ಬ್ಯಾಟರ್ ಗಳಿಸಿದ ಮೊದಲ ದ್ವಿಶತಕದಿಂದಾಗಿಯೇ ಸಾಧ್ಯವಾಯಿತು.
 

ಇನ್ನು, ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ, ಪ್ಯಾಟ್ ಕಮ್ಮಿನ್ಸ್ ಜೊತೆಗಿನ 202 ರನ್‌ಗಳ ಅವರ 8ನೇ ವಿಕೆಟ್‌ನ ಜೊತೆಯಾಟ ಅತ್ಯಧಿಕವಾಗಿದೆ.

click me!