Published : Jul 15, 2026, 06:44 PM ISTUpdated : Jul 15, 2026, 06:51 PM IST
ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಹೊಸ ಮಾದರಿಯಲ್ಲಿ ಆಯೋಜನೆಯಾಗುತ್ತಿದೆ. ಐಪಿಎಲ್ ರೀತಿಯಲ್ಲಿ ಎಲಿಮಿನೇಟರ್, ಸೂಪರ್ 7 ಹಂತ ಸೇರಿದಂತೆ ಮಹತ್ವದ ಬದಲಾವಣೆ ಮಾಡಲಾಗಿದೆ. ಹೊಸ ಮಾದರಿಯಲ್ಲಿ ಹೇಗೆ ನಡೆಯಲಿದೆ ಪಂದ್ಯ?
ಕಳೆದ ಹಲವು ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿ ಲೀಗ್ ಹಂತ, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದ ಮಾದರಿಯಲ್ಲಿ ನಡೆಯುತ್ತಿದೆ. ಇದೀಗ ಈ ಮಾದರಿ ಬದಲಿಸಿ ಸೂಪರ್ 7 ಹಂತ, ಐಪಿಎಲ್ ಟೂರ್ನಿ ರೀತಿ ಎಲಿಮಿನೇಟರ್ ಮಾದರಿಯಲ್ಲಿ ಐಸಿಸಿ ವಿಶ್ವಕಪ್ ಟೂರ್ನಿ ಆಯೋಜಿಸಲಾಗುತ್ತಿದೆ. ಹೊಸ ಟೂರ್ನಿ ಸ್ವರೂಪ ಹೇಗಿರುತ್ತೆ?
26
2027ರ ಏಕದಿನ ವಿಶ್ವಕಪ್ ಟೂರ್ನಿಗೆ ಹೊಸ ಮಾದರಿ
ಮುಂಬರುವ 2027ರ ಏಕದಿನ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಆಯೋಜಿಸುತ್ತಿದೆ. ಈ ಟೂರ್ನಿಯಿಂದ ಐಸಿಸಿ ಟೂರ್ನಿಯಲ್ಲಿ ಸೂಪರ್ 7 ಹಂತ ಜಾರಿಗೆ ಬಲಿದೆ. ಇನ್ನು 2028ರ ಟಿ20 ವಿಶ್ವಕಪ್ ಟೂರ್ನಿ ಸೂಪರ್ 10 ಹಾಗೂ ಐಪಿಎಲ್ ಮಾದರಿಯಲ್ಲಿ ಎಲಿಮಿನೇಟರ್ ಮಾದರಿಯಲ್ಲಿ ನಡೆಯಲಿದೆ.
36
ಹೊಸ ಮಾದರಿ ಹೊಸ ಶೈಲಿ
ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವ ಮೂರು ತಂಡಗಳು ಪರಸ್ವರ ಹೋರಾಟ ನಡೆಸಲಿದೆ. ಬಳಿಕ ಒಂದು ತಂಡ ಮಾತ್ರ ಪ್ರಮುಖ ಹಂತದ ಟೂರ್ನಿಗೆ ಅರ್ಹತೆ ಪಡೆಯಲಿದೆ. ಈ ಮೂಲಕ ಒಟ್ಟು 12 ತಂಡಗಳಿರುವ ಐಸಿಸಿ ಏಕದಿನ ಟೂರ್ನಿ ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಎರಡೂ ಗುಂಪಿನಿಂದ ಟಾಪ್ 3 ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ. ಇನ್ನುಳಿದ ಕೊನೆಯ 7ನೇ ಸ್ಥಾನವನ್ನು ಉಭಯ ಗ್ರೂಪ್‌ಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತೊಂದು ತಂಡಕ್ಕೆ ನೀಡಲಾಗುತ್ತದೆ.
ಸೂಪರ್ ಸಿಕ್ಸ್ ಬದಲು ಸೂಪರ್ 7 ಮಾದರಿಯಲ್ಲಿ ಟೂರ್ನಿ ನಡೆಸಲಾಗುತ್ತದೆ. ಒಂದೇ ಟೇಬಲ್‌ನಲ್ಲಿ 7 ತಂಡಗಳ ರೌಂಡ್-ರಾಬಿನ್ ಲೀಗ್ ಆಯೋಜಿಸಲಾಗುತ್ತದೆ. ಪ್ರತಿ ತಂಡವು ಉಳಿದ 6 ತಂಡಗಳ ವಿರುದ್ಧ ಆಡಲಿದ್ದು, ಈ ಸಿಂಗಲ್ ಲೀಗ್ ಟೇಬಲ್‌ನಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ.
56
ಹೊಸ ಮಾದರಿ ಬದಲಾವಣೆ ಏನು
ಈ ಹಿಂದೆ 14 ತಂಡಗಳ ಟೂರ್ನಿಯಲ್ಲಿ ಒಟ್ಟು 54 ಪಂದ್ಯಗಳು ಆಯೋಜನೆಯಾಗುತ್ತಿತ್ತು. ಆದರೆ ಹೊಸ ಸ್ವರೂಪದ ಅಡಿಯಲ್ಲಿ ಪಂದ್ಯಗಳ ಸಂಖ್ಯೆ 57 ಕ್ಕೆ ಏರಿಕೆಯಾಗಲಿದೆ (ಸೂಪರ್ ಸೀರೀಸ್‌ನಲ್ಲಿ 3 ಪಂದ್ಯಗಳು, ಗ್ರೂಪ್ ಹಂತದಲ್ಲಿ 30 ಪಂದ್ಯಗಳು, ಸೂಪರ್ 7 ನಲ್ಲಿ 21 ಪಂದ್ಯಗಳು, 2 ಸೆಮಿಫೈನಲ್ ಮತ್ತು 1 ಫೈನಲ್).
66
ಟಿ20 ವಿಶ್ವಕಪ್‌ನಲ್ಲಿ ಎಲಿಮಿನೇಟಕರ್
ಗ್ರೂಪ್ 'ಎ' ನಲ್ಲಿ 2 ಮತ್ತು 3ನೇ ಸ್ಥಾನ ಪಡೆದ ತಂಡಗಳು, ಗ್ರೂಪ್ 'ಬಿ' ನ 3 ಮತ್ತು 2ನೇ ಸ್ಥಾನ ಪಡೆದ ತಂಡಗಳೊಂದಿಗೆ ಕ್ರಾಸ್-ಓವರ್ ಎಲಿಮಿನೇಟರ್ಸ್ (Eliminators) ಪಂದ್ಯಗಳನ್ನಾಡಲಿವೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐಪಿಎಲ್ ರೀತಿ ಎಲಿಮಿನೇಟರ್ ಮಾದರಿ ಅನುಸರಿಸಲಾಗುತ್ತದೆ. ಹೊಸ ಮಾದರಿಯಲ್ಲಿ 4 ತಂಡಗಳಂತೆ 5 ಗ್ರೂಪ್ ಮಾಡಲಾಗುತದೆ. ಲೀಗ್‌ನಲ್ಲಿ ಗೆದ್ದ ಟಾಪ್ 10 ತಂಡಗಳನ್ನು ಎರಡು ಗುಂಪು ಮಾಡಿ ಸೂಪರ್ 10 ಪಂದ್ಯಗಳು ನಡೆಯಲಿದೆ. ಸೂಪರ್ 10 ರ ಪ್ರತಿ ಗ್ರೂಪ್‌ನ ಅಗ್ರ ತಂಡಗಳು ಮಾತ್ರ ನೇರವಾಗಿ ಸೆಮಿಫೈನಲ್‌ಗೆ ಹೋಗಲಿವೆ. ಗೆದ್ದ ಎರಡು ತಂಡಗಳು ಸೆಮಿಫೈನಲ್ ಲೈನ್-ಅಪ್ ಪೂರ್ಣಗೊಳಿಸಲಿವೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.