ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮಣಿಸಿದ ಭಾರತ ನೇರವಾಗಿ ಫೈನಲ್ ಪ್ರವೇಶಿಸಿದೆ. ಇದೀಗ ಅಹಮ್ಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದೆ.
ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆ ಇಡುತ್ತಿದ್ದಂತೆ ಬರೋಬ್ಬರಿ 12 ವರ್ಷಗಳ ಹಿಂದೆ ರೋಹಿತ್ ಶರ್ಮಾ ಮಾಡಿದ್ದ ಟ್ವೀಟ್ ಇದೀಗ ವೈರಲ್ ಆಗಿದೆ. ಎಲ್ಲರೂ ರೋಹಿತ್ ಟ್ವೀಟ್‌ಗೆ ಇದೀಗ ಪ್ರತಿಕ್ರಿಯೆ ನೀಡುತ್ತಿದ್ದಾರೆ.
2011, ಜನವರಿ 31ರಂದು ರೋಹಿತ್ ಶರ್ಮಾ ಈ ಟ್ವೀಟ್ ಮಾಡಿದ್ದರು. ಅಂದು 2011ರ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಘೋಷಣೆಯಾಗಿತ್ತು. ರೋಹಿತ್ ಶರ್ಮಾ ಸ್ಥಾನ ಪಡೆದುಕೊಳ್ಳಲು ವಿಫಲರಾಗಿದ್ದರು. ಈ ಬೇಸರವನ್ನು ಟ್ವೀಟ್ ಮೂಲಕ ಹೊರಹಾಕಿದ್ದರು.
2011ರ ವಿಶ್ವಕಪ್ ತಂಡದಲ್ಲಿ ನಾನಿನಲ್ಲಿ ಅನ್ನೋದು ತೀವ್ರ ನಿರಾಶೆಯಾಗಿದೆ. ಆದರೆ ಇಲ್ಲಿಂದ ನಾನು ಮುನ್ನಡೆಯಬೇಕಿದೆ. ಆದರೆ ನಿಜವಾಗಿಯೂ ಇದು ನನಗೆ ಆಗಿರುವ ಅತೀ ದೊಡ್ಡ ಹಿನ್ನಡೆ ಎಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದರು.
Rohit Sharma
2011ರ ವಿಶ್ವಕಪ್ ಟೂರ್ನಿ ತಂಡದಲ್ಲಿ ಸ್ಥಾನ ಸಿಗದ ಅದೇ ರೋಹಿತ್ ಶರ್ಮಾ ಇಂದು ನಾಯಕನಾಗಿ ಭಾರತ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ.
ಸತತ ಪ್ರಯತ್ನ, ಶ್ರದ್ಧೆ, ಆತ್ಮವಿಶ್ವಾಸ, ಗೆದ್ದೆ ಗೆಲ್ಲಬೇಕೆಂಬ ಛಲವಿದ್ದರೆ ಅವಕಾಶ ಬಂದೇ ಬರುತ್ತದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಅಂದು ತಂಡದಲ್ಲಿ ಇರಲಿಲ್ಲ, ಇಂದು ತಂಡ ಮಾತ್ರವಲ್ಲ ಭಾರತವೇ ನಿಮ್ಮೊಂದಿಗೆದೆ ಎಂದು ಕಮೆಂಟ್ ಮಾಡಿದ್ದಾರೆ.
2011ರ ವಿಶ್ವಕಪ್ ಟೂರ್ನಿ ತಂಡದಲ್ಲಿದ್ದ ಭಾರತೀಯ ಕ್ರಿಕೆಟಿಗರ ಪೈಕಿ ಕೇವಲ ಇಬ್ಬರು ಕ್ರಿಕೆಟಿಗರು ಮಾತ್ರ ಈ 2023ರ ವಿಶ್ವಕಪ್ ಟೂರ್ನಿಯ ತಂಡದಲ್ಲಿದ್ದಾರೆ. ಒಂದು ವಿರಾಟ್ ಕೊಹ್ಲಿ, ಮತ್ತೊಂದು ಆರ್ ಅಶ್ವಿನ್.
ಸತತ 10 ಗೆಲುವಿನ ಮೂಲಕ ಭಾರತ ಫೈನಲ್ ಪ್ರವೇಶಿಸಿದೆ. ನವೆಂಬರ್ 19 ರಂದು ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.