ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದ ಬಾಬರ್ ಅಜಂ ತಂಡದ ಕೆಟ್ಟ ನಿರ್ವಹಣೆಯ ಬೆನ್ನಲ್ಲಿಯೇ ಮೂರೂ ಮಾದರಿಯ ಕ್ರಿಕೆಟ್‌ನ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹನಿಯಾ ಅಮೀರ್ ಭಾರತದಲ್ಲಿ ಹೆಚ್ಚು ಪ್ರಸಿದ್ಧವಾಗಿಲ್ಲ ಆದರೆ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.
ಪಾಕಿಸ್ತಾನದ ಚಿತ್ರೋದ್ಯಮದಲ್ಲಿ ಸಾಕಷ್ಟು ಫೇಮಸ್ ಆದ ನಟಿಯರಲ್ಲಿ ಇವರೂ ಕೂಡ ಒಬ್ಬರು. ಇವರನ್ನು ಅಭಿಮಾನಿಗಳು ಪಾಕಿಸ್ತಾನದ ಅನುಷ್ಕಾ ಶರ್ಮ ಎಂದು ಹೇಳುತ್ತಾರಂತೆ!
ಐಸಿಸಿ ವಿಶ್ವಕಪ್ ಟೂರ್ನಿಯ ವೇಳೆ ಹನಿಯಾ ಆಮೀರ್ ಹಾಗೂ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬರ್ ಅಜಂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ವೈರಲ್ ಆಗಿದೆ.
ಈ ಬಗ್ಗೆ ಹನಿಯಾ ಆಗಲಿ ಬಾಬರ್ ಅಜಂ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮಾತ್ರವಲ್ಲ, ಇದು ಸುಳ್ಳು ಎನ್ನುವ ಹೇಳಿಕೆಯನ್ನೂ ನೀಡಿಲ್ಲ.
ಇಬ್ಬರೂ ತಮ್ಮ ತಮ್ಮ ಸಂದರ್ಶನದಲ್ಲಿ ಪರಸ್ಪರ ಹೊಗಳಿಕೊಂಡಿದ್ದ ದಿನದಿಂದ ಇವರಿಬ್ಬರ ನಡುವೆ ಡೇಟಿಂಗ್ ನಡೆಯುತ್ತಿರುಬಹುದು ಎನ್ನುವ ಗುಮಾನಿ ಕಾಡಿದೆ.
ಒಂದು ವಿಡಿಯೋದಲ್ಲಿ ಸ್ವತಃ ಹನಿಯಾ ಆಮೀರ್, ಬಾಬರ್ ಅಜಂ ನನಗಿಂತ ಸಿಕ್ಕಾಪಟ್ಟೆ ಕ್ಯೂಟ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಇನ್ನೊಂದು ವಿಡಿಯೋದಲ್ಲಿ ಸ್ವತಃ ಬಾಬರ್ ಅಜಮ್ ಆಕೆಯೊಂದಿಗೆ ಚಿತ್ರದಲ್ಲಿ ನಟಿಸಬೇಕು ಎಂದು ಇಂಗಿತ ವ್ಯಕ್ತಪಡಿಸಿದ ವಿಡಿಯೋ ಇದಾಗಿದೆ. ಆದರೆ, ಈ ವಿಡಿಯೋವನ್ನು ಅವರ ಅಭಿಮಾನಿ ಎಡಿಟ್ ಮಾಡಿದ್ದು ಎಂದು ನಂತರ ವರದಿಯಾಗಿತ್ತು.
ಅದಾದ ಬಳಿಕ ಬಾಬರ್ ಅಜಮ್ ಹಾಗೂ ಹನಿಯಾ ಆಮೀರ್ ಅವರ ಡೀಪ್‌ಫೇಕ್ ವಿಡಿಯೋ ಕೂಡ ಪಾಕಿಸ್ತಾನದಲ್ಲಿ ವೈರಲ್ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಅವರ ಮೂಲ ವಿಡಿಯೋಗೆ ಬಾಬರ್ ಅಜಂ ಹಾಗೂ ಹನಿಯಾ ಆಮೀರ್ ಅವರ ಮುಖವನ್ನಿಟ್ಟು ರಿಪ್ಲೇಸ್ ಮಾಡಲಾಗಿತ್ತು.
ಈ ವಿಡಿಯೋ ವೈರಲ್ ಆದ ಬಳಿಕ ನಟಿ ಹನಿಯಾ ಆಮೀರ್‌ರನ್ನು ಪಾಕಿಸ್ತಾನದ ಅನುಷ್ಕಾ ಶರ್ಮ ಎಂದೇ ಅಭಿಮಾನಿಗಳು ಕರೆಯುತ್ತಿದ್ದಾರೆ.
ಇನ್ನು ಬ್ಯಾಟಿಂಗ್ ಕೌಶಲದ ವಿಚಾರಕ್ಕೆ ಬಂದರೆ, ಬಾಬರ್ ಅಜಂ ಅವರನ್ನು ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಮೊದಲಿನಿಂದಲೂ ಹೋಲಿಸುತ್ತಾ ಬಂದಿದ್ದಾರೆ.
1997ರಲ್ಲಿ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಜನಿಸಿರುವ ಹನಿಯಾ ಆಮೀರ್, ಬಾಲ್ಯದಿಂದಲೇ ನಟನೆಯ ಕುರಿತಾಗಿ ಆಸಕ್ತಿ ಬೆಳೆಸಿಕೊಂಡಿದ್ದರು.
ಕಾಲೇಜಿನಲ್ಲಿದ್ದ ವೇಳೆಯಲ್ಲಿಯೇ ರೋಮ್ಯಾಂಟಿಕ್ ಕಾಮಿಡಿ ಫಿಲ್ಮ್ ಜಾನಮ್‌ನಲ್ಲಿ ನಟಿಸಿದ್ದ ಈಕೆ 19ನೇ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ತಿತ್ಲಿ ಸರಣಿಯಿಂದ ದೊಡ್ಡ ಮನ್ನಣೆಯನ್ನು ಪಡೆದರು, ಇದರಲ್ಲಿ ಅವರು ವಿಶ್ವಾಸದ್ರೋಹಿ ಮಹಿಳೆಯ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು 'ಫಿರ್ ವಾಹಿ ಮೊಹಬ್ಬತ್' ಮತ್ತು 'ವಿಸಾಲ್' ನಂತಹ ಶೋಗಳಲ್ಲಿ ಕಾಣಿಸಿಕೊಂಡರು. ಅವರು 'ಜಬ್ಕಿ ನಾ ಮಾಲೂಮ್', 'ಅಫ್ರಾದ್ 2' ಮತ್ತು 'ಪರ್ವಾಜ್' ನಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ.