'ಇದೆಲ್ಲಾ ಸುಳ್ಳು..' ಸಚಿನ್‌, ದ್ರಾವಿಡ್‌ ಹೆಸರು ಸೇರಿ ರಚಿನ್‌ ಆಗಿದ್ದಲ್ಲ ಎಂದ ಕಿವೀಸ್‌ ಆಲ್ರೌಂಡರ್‌ ತಂದೆ!

First Published | Nov 15, 2023, 6:20 PM IST

ಈ ಬಾರಿಯ ವಿಶ್ವಕಪ್‌ನ ಸೆನ್ಸೇಷನ್‌ ನ್ಯೂಜಿಲೆಂಡ್‌ನ ಆಲ್ರೌಂಡರ್‌ ರಚಿನ್‌ ರವೀಂದ್ರ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಮಿಂಚಿರುವ ರಚಿನ್‌ ರವೀಂದ್ರಗೆ ಈ ಹೆಸರನ್ನು ಅವರ ತಂದೆ ಸಚಿನ್‌ ಹಾಗೂ ರಾಹುಲ್‌ ದ್ರಾವಿಡ್‌ ಹೆಸರಿನಿಂದ ಪಡೆದುಕೊಂಡು ಇಟ್ಟಿದ್ದರು ಎಂದು ಹೇಳಲಾಗಿತ್ತು. ಅದಕ್ಕೆ ಈಗ ರಚಿನ್‌ ರವೀಂದ್ರ ತಂದೆ ರವಿ ಕೃಷ್ಣಮೂರ್ತಿ ಉತ್ತರ ನೀಡಿದ್ದಾರೆ.
 

Rachin Ravindra

ರಚಿನ್‌ ರವೀಂದ್ರ ಈ ಬಾರಿಯ ವಿಶ್ವಕಪ್‌ನ ಸೆನ್ಸೇಷನಲ್‌ ಪ್ಲೇಯರ್‌. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡಲ್ಲೂ ಮಿಂಚಿರುವ ರಚಿನ್‌ ರವೀಂದ್ರಗೆ ಈ ಹೆಸರು ಇಟ್ಟಿದ್ದರ ಹಿಂದೆ ಇಲ್ಲಿಯವರೆಗೂ ಕುತೂಹಲಕರ ಕಥೆಯೊಂದಿತ್ತು.

Rachin Ravindra

ರಚಿನ್‌ ರವೀಂದ್ರ ಅವರ ತಂದೆ ರವಿ ಕೃಷ್ಣಮೂರ್ತಿ ಬೆಂಗಳೂರಿನಲ್ಲಿ ಕ್ಲಬ್‌ ಕ್ರಿಕೆಟಿಗರಾಗಿದ್ದವರು. ಅ ಬಳಿಕ ನ್ಯೂಜಿಲೆಂಡ್‌ಗೆ ವಾಸ್ತವ್ಯ ಬದಲಿಸಿದ ರವಿ ಕೃಷ್ಣಮೂರ್ತಿ ತನ್ನ ಮಗನಿಗೆ ಸಚಿನ್‌ ಹಾಗೂ ರಾಹುಲ್‌ ದ್ರಾವಿಡ್‌ ಅವರ ಹೆಸರನ್ನು ಸ್ಪೂರ್ತಿಯಾಗಿ ಪಡೆದು ರಚಿನ್‌ ಎಂದು ಹೆಸರನ್ನಿಟ್ಟಿದ್ದರು ಎನ್ನಲಾಗಿತ್ತು.

Latest Videos


Rachin Ravindra

ಆದರೆ, ಈಗ ಸ್ವತಃ ರಚಿನ್‌ ರವೀಂದ್ರ ಅವರ ತಂದೆ ಇದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 565 ರನ್‌ಗಳೊಂದಿಗೆ, ರಚಿನ್ ರವೀಂದ್ರ ಅವರು ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಮೂರನೇ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ.

ರಚಿನ್ ರವೀಂದ್ರ ಭಾರತೀಯ ಮೂಲದ ಆಟಗಾರ. ಅವರ ಅಜ್ಜ-ಅಜ್ಜಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ಕ್ರಿಕೆಟ್ ವಿಶ್ವಕಪ್ 2023 ರ ಸಮಯದಲ್ಲಿ ರಚಿನ್‌ ಅವರನ್ನು ಭೇಟಿ ಮಾಡಿದ್ದರು.

Rachin Ravindra

ರಾಹುಲ್ ದ್ರಾವಿಡ್‌ ಅವರ ಹೆಸರಿನ ಮೊದಲ ಅಕ್ಷರಗಳು ಹಾಗೂ ಸಚಿನ್‌ ತೆಂಡುಲ್ಕರ್‌ ಅವರ ಹೆಸರಿನ ಮೊದಲ ಅಕ್ಷರಗಳು ಸೇರಿ  ರಚಿನ್‌ ಎನ್ನುವ ಹೆಸರು ಬಂದಿದೆ ಎನ್ನುವದು ಈವರೆಗಿನ ಪಾಪ್ಯುಲರ್‌ ಕಥೆಯಾಗಿತ್ತು.

Rachin Ravindra

ಆದರೆ, ಈ ಹೆಸರನ್ನು ಉದ್ದೇಶಪೂರ್ವಕವಾಗಿ ಇಟ್ಟಿರಲಿಲ್ಲ ಎಂದು ರಚಿನ್ ಅವರ ತಂದೆ ರವಿ ಕೃಷ್ಣ ಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

Rachin Ravindra

ರಚಿನ್ ಜನಿಸಿದಾಗ, ನನ್ನ ಹೆಂಡತಿ ಹೆಸರನ್ನು ಸೂಚಿಸಿದಳು, ಮತ್ತು ನಾವು ಅದನ್ನು ಚರ್ಚಿಸಲು ಹೆಚ್ಚು ಸಮಯ ಕೂಡ ತೆಗೆದುಕೊಂಡಿರಲಿಲ್ಲ ಎಂದು ರವಿ ಕೃಷ್ಣಮೂರ್ತಿ ಹೇಳಿದ್ದಾರೆ.

Rachin Ravindra

ಹೆಸರು ಚೆನ್ನಾಗಿತ್ತು. ಉಚ್ಚರಿಸಲು ಸುಲಭ ಮತ್ತು ಚಿಕ್ಕದಾಗಿತ್ತು. ಆದ್ದರಿಂದ ನಾವು ಅವನಿಗೆ ಅದೇ ಹೆಸರನ್ನು ಇಡಲು ತೀರ್ಮಾನ ಮಾಡಿದ್ದೆವು ಎಂದು ಹೇಳಿದ್ದಾರೆ.

Rachin Ravindra

ಇದಾದ ಕೆಲವು ವರ್ಷಗಳ ನಂತರ, ರಚಿನ್‌ ಎನ್ನುವ ಹೆಸರು ರಾಹುಲ್‌ ದ್ರಾವಿಡ್‌ ಹಾಗೂ ಸಚಿನ್‌ ಅವರ ಹೆಸರಿನ ಮಿಶ್ರಣ ಎನ್ನುವುದು ನಮಗೆ ಗೊತ್ತಾಗಿತ್ತು ಎಂದು ಹೇಳಿದ್ದಾರೆ.

Rachin Ravindra

ನನ್ನ ಮಗ ಕ್ರಿಕೆಟರ್‌ ಆಗಬೇಕು, ದಿಗ್ಗಜ ಪ್ಲೇಯರ್‌ರಂತೆ ಆಗಬೇಕು ಎನ್ನುವ ಉದ್ದೇಶವಿಟ್ಟುಕೊಂಡು ನಾವು ಈ ಹೆಸರನ್ನು ಇಟ್ಟಿರಲಿಲ್ಲ ಎಂದು ಹೇಳಿದ್ದಾರೆ.

Rachin Ravindra

ತಮ್ಮ ಅಜ್ಜ- ಅಜ್ಜಿಯ ಊರಾದ ಬೆಂಗಳೂರಿನಲ್ಲಿ ಆಡಿದ ಬಗ್ಗೆ ಮಾತನಾಡಿದ್ದ ರಚಿನ್‌ ರವೀಂದ್ರ, ಬೆಂಗಳೂರಿನ ಪ್ರೇಕ್ಷಕರು ತನ್ನ ಹೆಸರನ್ನು ಕೇಳಿ ಕಿರುಚಾಡುತ್ತಿದ್ದದ್ದು ವಿಶೇಷ ಎನಿಸಿತ್ತು ಎಂದು ಹೇಳಿದ್ದರು.

ಬಾಲ್ಯದಿಂದಲೂ ಹೀಗೊಂದು ನನಗೆ ಡ್ರೀಮ್‌ ಇತ್ತು. ನನ್ನ ಹೆಸರನ್ನು ಪ್ರೇಕ್ಷಕರು ಕಿರುಚಾಡಬೇಕು ಅನ್ನೋದು.ಅದು ಬೆಂಗಳೂರಿನಲ್ಲಿಯೇ ಆಗಿರುವ ಬಗ್ಗೆ ಬಹಳ ಖುಷಿಯಾಗುತ್ತಿದೆ ಎಂದಿದ್ದರು.

click me!