T20 World Cup: ಧೋನಿ ದಾಖಲೆ ಸರಿಗಟ್ಟಿದ ಬಟ್ಲರ್‌, ಟ್ರೋಫಿಯೊಂದಿಗೆ ಸಂಭ್ರಮಿಸಿದ ಇಂಗ್ಲೆಂಡ್‌!

First Published Nov 13, 2022, 7:25 PM IST

ಲೀಗ್‌ ಹಂತದಲ್ಲಿ ಐರ್ಲೆಂಡ್‌ ವಿರುದ್ಧ ಆಘಾತಕಾರಿ ಸೋಲು ಕಂಡರೂ ಇಂಗ್ಲೆಂಡ್‌ ತಂಡ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್‌ ತಂಡ ಟ್ರೋಫಿ ಎತ್ತಿಹಿಡಿದ ಸಂಭ್ರಮದ ಚಿತ್ರಗಳು ಇಲ್ಲಿವೆ.

2010ರಲ್ಲಿ ಪಾಲ್‌ ಕಾಲಿಂಗ್‌ವುಡ್‌ ನೇತೃತ್ವದಲ್ಲಿ ಟಿ20 ವಿಶ್ವಕಪ್‌ ಜಯಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಇದು 2ನೇ ಟಿ20 ವಿಶ್ವಕಪ್‌ ಟ್ರೋಫಿ ಎನಿಸಿದೆ.

2016ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡ ಫೈನಲ್‌ ಸಾಧನೆ ಮಾಡಿದ್ದರೂ, ಫೈನಲ್‌ನಲ್ಲಿ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧ ಸೋಲು ಕಂಡಿತ್ತು.

ಇಂಗ್ಲೆಂಡ್‌ ತಂಡ 2022ರ ಟಿ20 ವಿಶ್ವಕಪ್‌ ಗೆಲುವಿನೊಂದಿಗೆ 13 ಕೋಟಿ ರೂ. ನಗದು ಬಹುಮಾನವನ್ನೂ ಜಯಿಸಿದೆ. 2021ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್‌ ಆಗಿತ್ತು.

ಏಕಕಾಲದಲ್ಲಿ ಟಿ20 ಹಾಗೂ ಏಕದಿನ ವಿಶ್ವಕಪ್‌ ಎರಡರಲ್ಲೂ ಚಾಂಪಿಯನ್‌ ಆಗಿರುವ ಮೊದಲ ತಂಡ ಇಂಗ್ಲೆಂಡ್‌. 2019ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ಚಾಂಪಿಯನ್‌ ಆಗಿತ್ತು.

ಮೆಲ್ಬೋರ್ನ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಪಾಕಿಸ್ತಾನದ ವಿರುದ್ಧ ಅಧಿಕಾರಯುತ 5 ವಿಕೆಟ್‌ ಗೆಲುವು ಸಾಧಿಸಿತು.

ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ಗೆ ನಾಯಕರಾಗಿ ಇದೇ ಮೊಟ್ಟಮೊದಲ ಐಸಿಸಿ ಟೂರ್ನಿ ಎನಿಸಿತ್ತು. ಧೋನಿಯಂತೆ ನಾಯಕನಾದ ಮೊಟ್ಟಮೊದಲ ಐಸಿಸಿ ಟೂರ್ನಿಯಲ್ಲೇ ತಂಡವನ್ನು ಬಟ್ಲರ್‌ ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ. ಕ್ಯಾಪ್ಟನ್‌ ಹಾಗೂ ವಿಕೆಟ್‌ ಕೀಪರ್‌ ಆಗಿ ವಿಶ್ವಕಪ್‌ ಗೆದ್ದ 2ನೇ ನಾಯಕ ಇವರಾಗಿದ್ದಾರೆ. ಧೋನಿ ಮೊದಲ ಆಟಗಾರ.

ಇಡೀ ಟೂರ್ನಿಯಲ್ಲಿ ಇಂಗ್ಲೆಂಡ್‌ ತಂಡದ ಯಶಸ್ಸಿಗೆ ಪ್ರಮುಖ ಕಾರಣರಾದ ವೇಗಿ ಸ್ಯಾಮ್‌ ಕರ್ರನ್‌ ಮ್ಯಾನ್‌ ಆಫ್‌ ದ ಟೂರ್ನಮೆಂಟ್‌ ಪ್ರಶಸ್ತಿ ಜಯಿಸಿದರು. ವಿಶ್ವಕಪ್‌ನಲ್ಲಿ ಕೇವಲ 148 ರನ್‌ ನೀಡಿ 13 ವಿಕೆಟ್‌ ಉರುಳಿಸಿದ್ದಾರೆ.

2016ರ ಟಿ20 ವಿಶ್ವಕಪ್‌ನಲ್ಲಿ ತಂಡದ ಸೋಲಿಗೆ ಕಾರಣರಾಗಿದ್ದ ಆಲ್ರೌಂಡರ್‌ ಆಟಗಾರ ಬೆನ್‌ ಸ್ಟೋಕ್ಸ್‌, ಈ ಬಾರಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಅಂದು ಬೌಲಿಂಗ್‌ನಲ್ಲಿ ಸೋತಿದ್ದ ಸ್ಟೋಕ್ಸ್ ಈ ಬಾರಿ ಬ್ಯಾಟಿಂಗ್‌ನಲ್ಲಿ ಗೆದ್ದಿದ್ದಾರೆ.

ಇಂಗ್ಲೆಂಡ್‌ ತಂಡದ ಬ್ಯಾಟಿಂಗ್‌ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಜೋಸ್‌ ಬಟ್ಲರ್‌ ಆಡಿದ 6 ಪಂದ್ಯಗಳಿಂದ 45ರ ಸರಾಸರಿಯಲ್ಲಿ 225 ರನ್‌ ಬಾರಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್‌ ಪರವಾಗಿ ಟೂರ್ನಿಯಲ್ಲಿ ಗರಿಷ್ಠ ರನ್‌ ಸ್ಕೋರರ್‌ ಎನಿಸಿದ್ದಾರೆ.

Sam Currun

 ಫೈನಲ್‌ ಪಂದ್ಯದಲ್ಲಿ ನಾಲ್ಕು ಓವರ್‌ ದಾಳಿ ನಡೆಸಿದ ಆಲ್ರೌಂಡರ್‌ ಸ್ಯಾಮ್‌ ಕರ್ರನ್‌ 12 ರನ್ ನೀಡಿ ಪ್ರಮುಖ ಮೂರು ವಿಕೆಟ್‌ ಉರುಳಿಸಿದರು. 

ವೇಗದ ಬೌಲಿಂಗ್‌ ಹಾಗೂ ಸ್ಪಿನ್‌ ಬೌಲಿಂಗ್ ವಿಭಾಗವನ್ನು ಯಶಸ್ವಿಯಾಗಿ ಬಳಸಿಕೊಂಡ ಇಂಗ್ಲೆಂಡ್‌ ತಂಡ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು 137 ರನ್‌ಗಳಿಗೆ ನಿಯಂತ್ರಿಸಿತ್ತು.

click me!