1. ಪಾಕಿಸ್ತಾನ-ಇಂಗ್ಲೆಂಡ ನಡುವಿನ ಫೈನಲ್ ಪಂದ್ಯಕ್ಕೆ ಎಂಸಿಜಿ ಮೈದಾನ ಆತಿಥ್ಯ
1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಫೈನಲ್ ಪ್ರವೇಶಿಸಿದ್ದವು. ಇನ್ನು ಈ ಬಾರಿ ಕೂಡಾ ಪಾಕ್ ಹಾಗೂ ಇಂಗ್ಲೆಂಡ್ ತಂಡಗಳು ಫೈನಲ್ ಪ್ರವೇಶಿಸಿವೆ. ಅಚ್ಚರಿ ಎನ್ನುವಂತೆ 1992ರ ಏಕದಿನ ವಿಶ್ವಕಪ್ ಫೈನಲ್‌ಗೆ ಮೆಲ್ಬರ್ನ್ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿತ್ತು. ಇದೀಗ ಚುಟುಕು ಕ್ರಿಕೆಟ್ ವಿಶ್ವಕಪ್ ಫೈನಲ್‌ಗೂ ಎಂಸಿಜಿ ಆತಿಥ್ಯ ವಹಿಸಿದೆ.
2. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿತ್ತು ಪಾಕಿಸ್ತಾನ
ಮತ್ತೊಂದು ಅಚ್ಚರಿಯ ಸಂಗತಿ ಎಂದರೆ 1992ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲೂ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಆಗಲೂ ಕಿವೀಸ್ ಮಣಿಸಿ ಪಾಕಿಸ್ತಾನ ತಂಡವು ಫೈನಲ್ ಪ್ರವೇಶಿಸಿತ್ತು. ಇನ್ನು ಈ ಬಾರಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲೂ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ತಂಡವನ್ನು ಮಣಿಸಿ ಫೈನಲ್‌ಗೇರಿದೆ.
3. ಆಸ್ಟ್ರೇಲಿಯಾ ಹಾಲಿ ಚಾಂಪಿಯನ್ ಆಗಿತ್ತು:
ತೀರಾ ಅಚ್ಚರಿ ಎನ್ನುವಂತೆ 1992ರ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಆಸ್ಟ್ರೇಲಿಯಾ ತಂಡವು ಹಾಲಿ ಚಾಂಪಿಯನ್ ಆಗಿತ್ತು. ಅದೇ ಸದ್ಯ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಆಸ್ಟ್ರೇಲಿಯಾ ತಂಡವು ಹಾಲಿ ಚಾಂಪಿಯನ್ ಎನಿಸಿಕೊಂಡಿದೆ.
4. ಕನಿಷ್ಠ ಶ್ರೇಯಾಂಕಿತ ತಂಡದೆದುರು ಸೋತಿದ್ದರೂ ಫೈನಲ್ ಪ್ರವೇಶಿಸಿದ್ದ ಇಂಗ್ಲೆಂಡ್..!
ಇಂಗ್ಲೆಂಡ್ ತಂಡವು 1992ರಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ ಸಹಸದಸ್ಯ ರಾಷ್ಟ್ರವಾಗಿದ್ದ ಜಿಂಬಾಬ್ವೆ ಎದುರು ಗ್ರೂಪ್ ಹಂತದಲ್ಲೇ ಶರಣಾಗಿತ್ತು. ಇದು ಜಿಂಬಾಬ್ವೆ ಟೂರ್ನಿಯಲ್ಲಿ ದಾಖಲಿಸಿದ ಏಕೈಕ ಗೆಲುವು ಎನಿಸಿಕೊಂಡಿತ್ತು. ಅದೇ ರೀತಿ 2022ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ಎದುರು ಇಂಗ್ಲೆಂಡ್ ತಂಡವು ಮುಗ್ಗರಿಸಿದೆ. ಅಂದಹಾಗೆ ಸೂಪರ್ 12 ಹಂತದಲ್ಲಿ ಐರ್ಲೆಂಡ್ ದಾಖಲಿಸಿದ ಏಕೈಕ ಗೆಲುವು ಎನಿಸಿಕೊಂಡಿದೆ.
5. ಟೂರ್ನಿಯ ಉದ್ಘಾಟನಾ ಪಂದ್ಯವನ್ನಾಡಿದ್ದ ನ್ಯೂಜಿಲೆಂಡ್-ಆಸ್ಟ್ರೇಲಿಯಾ:
1992ರ ಏಕದಿನ ವಿಶ್ವಕಪ್ ಹಾಗೂ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವು, ಆಸ್ಟ್ರೇಲಿಯಾ ತಂಡವನ್ನು ಪ್ರಶಸ್ತಿ ರೇಸ್‌ನಿಂದ ಹೊರದಬ್ಬುವಲ್ಲಿ ಪ್ರಮುಖ ಪಾತ್ರವಹಿಸಿದೆ. 1992ರ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ನ್ಯೂಜಿಲೆಂಡ್ ತಂಡವು 37 ರನ್‌ಗಳ ಗೆಲುವು ದಾಖಲಿಸಿ ಶುಭಾರಂಭ ಮಾಡಿತ್ತು. ಇನ್ನು ಈ ಬಾರಿ ನಡೆದ ಸೂಪರ್ 12 ಹಂತದ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತ