ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತದಿಂದ ಬ್ರೇಕ್ ಬಿದ್ದಿದ್ದ ಪಂದ್ಯಗಳಿಗೆ ಮತ್ತೆ ಸರ್ಕಾರದ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ.KSCA ಅಧಿಕೃತ ಘೋಷಣೆ ಮಾಡಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದೆ. ಒಂದೆಡೆ 11ಕ್ಕೂ ಹೆಚ್ಚು ಮಂದಿ ಮೃತಪಟ್ಟರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಇದರ ಪರಿಣಾಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ಬ್ರೇಕ್ ಬಿದ್ದಿತ್ತು. ಆದರೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷತೆಯ ಹೊಸ ಕೆಎಸ್‌ಎಸಿಎ ಪದಾಧಿಕಾರಿಗಳ ತಂಡ ಸತತ ಮಾತುಕತೆ ಮೂಲಕ ಮತ್ತೆ ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆಗೆ ಸಜ್ಜಾಗಿದೆ.
26
ಸರ್ಕಾರದ ಸಮಿತಿಯಿಂದ ಗ್ರೀನ್ ಸಿಗ್ನಲ್
ಕಾಲ್ತುಳಿತ ಘಟನೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣಣದಲ್ಲಿ ಪಂದ್ಯಗಳ ಆಯೋಜನೆಗೆ ಒಂದೆಡೆ ಬಿಸಿಸಿಐ ಹಿಂದೇಟು ಹಾಕಿದ್ದರೆ, ಮತ್ತೊಂದೆಡೆ ರಾಜ್ಯ ಸರ್ಕಾರ ಕೂಡ ನಿರ್ಬಂಧ ಹೇರಿತ್ತು. ಇದೀಗ ಸರ್ಕಾರ ನೇಮಿಸಿದ್ದ ಸಮಿತಿ ಸಾಧಕ ಬಾಧಕಗಳ ಪರಿಶೀಲನೆ ನಡೆಸಿ ಪಂದ್ಯ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ವರದಿಯಾಗಿದೆ.
36
ಅಧಿಕೃತ ಘೋಷಣೆ ಮಾಡಲಿದೆ ರಾಜ್ಯ ಕ್ರಿಕೆಟ್ ಸಂಸ್ಥೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಗೆ ಸರ್ಕಾರದ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಲಿದೆ. ಎಲ್ಲಾ ಭದ್ರತಾ ವ್ಯವಸ್ಥೆ, ಹಲವು ಷರತ್ತುಗಳ ಮೂಲಕ ಪಂದ್ಯ ಆಯೋಜನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಲಾಗಿದೆ ಎಂದು ವರದಿಯಾಗಿದೆ.
ಸರ್ಕಾರದ ಸಮಿತಿಯ ವರದಿ ಅಧರಿಸಿ ರಾಜ್ಯ ಸರ್ಕಾರ ಐಪಿಎಲ್ ಟೂರ್ನಿಯ ಬೆಂಗಳೂರು ಪಂದ್ಯ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತವರಿನ ಪಂದ್ಯಗಳು ಬೆಂಗಳೂರಿನಲ್ಲಿ ಆಯೋಜಿಸಲು ಎಲ್ಲಾ ಸಿದ್ಥತೆಗಳು ನಡೆದಿದೆ. ಹೀಗಾಗಿ ಅಭಿಮಾನಿಗಳು ನಿರಾಸರಾಗಬೇಕಿಲ್ಲ.
56
ಬೆಂಗಳೂರಿನಲ್ಲೇ ಪಂದ್ಯ ಆಡಲು ಫ್ಲಾಂಚೈಸಿ ಒಲವು
ಇತ್ತೀಚಗೆ ಆರ್‌ಸಿಬಿ ಫ್ರಾಂಚೈಸಿ ತವರಿನ ಪಂದ್ಯಗಳನ್ನು ಪುಣೆ ಅಥವಾ ರಾಯ್‌ಪುರದಲ್ಲಿ ಆಡಲು ಮುಂದಾಗಿತ್ತು ಅನ್ನೋ ವರದಿಗಳು ಹರಿದಾಡಿತ್ತು. ಇದರ ಬೆನ್ನಲ್ಲೇ ಆರ್‌ಸಿಬಿ ಫ್ರಾಂಚೈಸಿ ತವರಿನಲ್ಲಿ ಪಂದ್ಯ ಆಡಲು ಸುರಕ್ಷತಾ ಕ್ರಮಗಳ ಕುರಿತು ಕೆಎಸ್‌ಸಿಎ ಜೊತೆ ಚರ್ಚಿಸಿತ್ತು. ಕ್ರೀಡಾಂಗಣದಲ್ಲಿ ಎಐ ಆಧಾರಿತ ಕ್ಯಾಮೆರಾ ಅಳವಡಿಕೆ, ಸುರಕ್ಷತಾ ಮಾನದಂಡಗಳ ಪಾಲನೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿತ್ತು. ಈ ಮೂಲಕ ಪರೋಕ್ಷವಾಗಿ ಆರ್‌ಸಿಬಿ ತವರಿನಲ್ಲೇ ಪಂದ್ಯ ಆಡಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಇದರೊಂದಿಗೆ ಬೆಂಗಳೂರಿನಿಂದ ಪಂದ್ಯಗಳ ವರ್ಗಾವಣೆಗೆ ಪರೋಕ್ಷವಾಗಿಯೇ ಉತ್ತರ ನೀಡಿತ್ತು.
ಬೆಂಗಳೂರಿನಲ್ಲೇ ಪಂದ್ಯ ಆಡಲು ಫ್ಲಾಂಚೈಸಿ ಒಲವು
66
ಫ್ಯಾನ್ಸ್‌ಗೆ ಮತ್ತೆ ಹಬ್ಬ
ಐಪಿಎಲ್ ಟೂರ್ನಿಗೆ ತಯಾರಿಗಳು ನಡೆಯುತ್ತಿದೆ. ಇದೇ ವೇಳೆ ಪಂದ್ಯ ಆಯೋಜನೆ ಕುರಿತು ಗೊಂದಲ ಕಾರಣ ಆರ್‌ಸಿಬಿ ಅಭಿಮಾನಿಗಳು ನಿರಾಸೆಗೊಂಡಿದ್ದರು. ಆದರೆ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಯೋಜನೆಗೊಳ್ಳುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಮತ್ತೆ ನೆಚ್ಚಿನ ತಂಡವನ್ನು ಹುರಿದುಂಬಿಸಲು ಅಭಿಮಾನಿಗಳಿಗೆ ಮತ್ತೆ ಅವಕಾಶ ಒದಗಿ ಬರಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.