ಇವರೇ ಐಪಿಎಲ್‌ನ ಹೊಸ ತಾರೆಗಳು..! ಈ ಪಟ್ಟಿಯಲ್ಲಿವೆ ಅಚ್ಚರಿಯ ಹೆಸರುಗಳು

First Published | May 29, 2024, 6:22 PM IST

ಬೆಂಗಳೂರು: ಐಪಿಎಲ್ ಟ್ರೋಫಿ ಮೇಲೆ 'ಪ್ರತಿಭೆಯು ಅವಕಾಶವನ್ನು ಭೇಟಿಯಾದಾಗ' ಎಂದು ಬರೆದಿದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಪ್ರತಿ ಬಾರಿಯಂತೆ ಈ ವರ್ಷದ ಐಪಿಎಲ್ ಕೂಡ ಹಲವು ಹೊಸ ಪ್ರತಿಭೆಗಳನ್ನು ಕ್ರಿಕೆಟ್ ಲೋಕಕ್ಕೆ ಪರಿಚಯಿಸಿತು. ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಂಡ ಆಟಗಾರರು ಅಭಿಮಾನಿಗಳಿಗೆ ಮರೆಯಲಾಗದ ಕ್ಷಣಗಳನ್ನು ಕಟ್ಟಿಕೊಟ್ಟರು. ಈ ಐಪಿಎಲ್ ಮೂಲಕ ತಮ್ಮಕ್ರಿಕೆಟ್ ಭವಿಷ್ಯಕ್ಕೆ ಹೊಸ ದಿಕ್ಕು ಕಂಡುಕೊಂಡ ಕೆಲ ಪ್ರಮುಖ ಆಟಗಾರರ ವಿವರ ಇಲ್ಲಿದೆ.

1. ಫಿಲ್ ಸಾಲ್ಟ್ ಪಂದ್ಯ: 12 ಪಂದ್ಯ: 435 ರನ್, ಸ್ಟ್ರೈಕ್‌ರೇಟ್ 182

ಫಿಲ್ ಸಾಲ್ಟ್, ಆಟಗಾರರ ಹರಾಜಿನಲ್ಲಿ ಬಿಕರೆಯಾಗಿರಲಿಲ್ಲ. ಜೇಸನ್ ರಾಯ್ ಐಪಿಎಲ್‌ನಿಂದ ಹೊರಬೀಳದೆ ಇದ್ದಿದ್ದರೆ ಸಾಲ್ಟ್ ಗೆ ಬಹುಶಃ ಅವಕಾಶವೇ ಸಿಗುತ್ತಿರಲಿಲ್ಲ. ಸುನಿಲ್ ನರೈನ್ ಜೊತೆ ಆರಂಭಿಕನಾಗಿ ಕಣಕ್ಕಿಳಿದ ಸಾಲ್ಟ್ ಸ್ಫೋಟಕ ಆಟವಾಡಿ ಬಹುತೇಕ ಪಂದ್ಯಗಳಲ್ಲಿ ಕೆಕೆಆರ್‌ಗೆ ಉತ್ತಮ ಆರಂಭ ಒದಗಿಸಿದರು. 
 

ಅವರು 435 ರನ್‌ಗಳ ಪೈಕಿ 296 ರನ್‌ಗಳನ್ನು ಪವರ್-ಪ್ಲೇನಲ್ಲಿ ಗಳಿಸಿದ್ದು ವಿಶೇಷ. ಮೊದಲ 6 ಓವರಲ್ಲಿ ಅವರ ಸ್ಪೆಕ್‌ರೇಟ್ 185. ಪವರ್ ಪ್ಲೇ ಬಳಿಕವೂ ಅಬ್ಬರ ನಿಲ್ಲಿಸದ ಸಾಲ್ಟ್ 175.94ರ ಸೆಕ್‌ರೇಟ್‌ನಲ್ಲಿ ಆಡಿ, ಕೆಕೆಆರ್‌ನ 2ನೇ ಗರಿಷ್ಠ ರನ್ ಸರದಾರನಾಗಿ ಹೊರಹೊಮ್ಮಿದರು. ತಂಡ ಪ್ಲೇ-ಆಫ್‌ಗೇರಲು ಸಾಲ್ಟ್ ಕೂಡ ಪ್ರಮುಖ ಕಾರಣ.

Tap to resize

2. ಮಯಾಂಕ್ ಯಾದವ್ ಪಂದ್ಯ: 04 ವಿಕೆಟ್: 07 ಎಕಾನಮಿ 6.98 ಪ್ರತಿ ವಿಕೆಟ್‌ಗೆ ತೆಗೆದುಕೊಂಡ ಎಸೆತ: 10.4

ಮಯಾಂಕ್ ಯಾದವ್ ಈ ಆವೃತ್ತಿಯಲ್ಲಿ ಆಡಿದ್ದು ಕೇವಲ 4 ಪಂದ್ಯ ಆದರೆ, ಭಾರತೀಯ ಕ್ರಿಕೆಟ್‌ಗೆ ತಾವೆಷ್ಟು ದೊಡ್ಡ ಆಸ್ತಿಯಾಗಬಲ್ಲರು ಎನ್ನುವುದನ್ನು ತೋರಿಸಲು ಅಷ್ಟೇ ಸಾಕಾಯಿತು. ಐಪಿಎಲ್‌ ನಲ್ಲಿ ತಮ್ಮ ಪ್ರಯಾಣವನ್ನು ಗಂಟೆಗೆ 147 ಕಿ.ಮೀ. ವೇಗದ UC ಎಸೆತ (ಪಂಜಾಬ್ ವಿರುದ್ಧ)ದೊಂದಿಗೆ ಆರಂಭಿಸಿದ 21ರ ಮಯಾಂಕ್, ಟೂರ್ನಿಯಲ್ಲಿ ತಾವೆಸೆದ 3ನೇ ಎಸೆತದಲ್ಲಿ 150 ಕಿ.ಮೀ. ವೇಗವನ್ನು ದಾಟಿದರು. 

ಅವರ 2ನೇ ಓವರಲ್ಲಿ 155.8 ಕಿ.ಮೀ. ವೇಗದ ಎಸೆತ ದಾಖಲಾಯಿತು. ಮೊದಲ ಪಂದ್ಯದಲ್ಲೇ 21ಕ್ಕೆ 3 ವಿಕೆಟ್ ಕಿತ್ತ ಮಯಾಂಕ್, ಆರ್‌ಸಿಬಿ ವಿರುದ್ಧ 14ಕ್ಕೆ 3 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠರಾದರು. ಗಾಯದ ಕಾರಣ ಮಯಾಂಕ್ ಟೂರ್ನಿಯಿಂದ ಹೊರಬೀಳದೆ ಹೋಗಿದ್ದರೆ, ಮತ್ತಷ್ಟು ವೇಗದ ಎಸೆತಗಳನ್ನು ನೋಡಬಹುದಿತ್ತು. ಟೂರ್ನಿಯಲ್ಲಿ ಕೇವಲ 12.1 ಓವರ್ ಬೌಲ್ ಮಾಡಿದರೂ, ಬಿಸಿಸಿಐನಿಂದ ವೇಗದ ಬೌಲರ್‌ಗಳ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾದರು.

3. ಹರ್ಷಿತ್ ರಾಣಾ: ಪಂದ್ಯ: 13 | ವಿಕೆಟ್: 19 ಎಕಾನಮಿ: 9.08 ಪ್ರತಿ ವಿಕೆಟ್‌ಗೆ ತೆಗೆದುಕೊಂಡ ಎಸೆತ: 13.3

ಹರ್ಷಿತ್ ರಾಣಾ 2022ರಲ್ಲಿ ಕೇವಲ 2, 2023ರಲ್ಲಿ ಕೇವಲ 6 ಪಂದ್ಯಗಳನ್ನು ಆಡಿದ್ದರು. ಅವರ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿರಲಿಲ್ಲ. ಆದರೆ, ಈ ಆವೃತ್ತಿಯಲ್ಲಿ ಕೆಕೆಆರ್ ಪರ ಅವರು ಮಿಂಚಿನ ಆಟವಾಡಿದರು. ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಬೌಲ್ ಮಾಡಿ, ನಿರ್ಣಾಯಕ ವಿಕೆಟ್‌ಗಳನ್ನು ಉರುಳಿಸಿದ್ದಲ್ಲದೇ, ಉತ್ತಮ ಎಕಾನಮಿ ರೇಟ್ ಸಹ ಕಾಯ್ದುಕೊಂಡರು.

ಇನ್ನಿಂಗ್ಸ್‌ನ ಕೇವಲ ಒಂದು ಹಂತದಲ್ಲಷ್ಟೇ ಹರ್ಷಿತ್ ಪರಿಣಾಮಕಾರಿಯಾಗದೆ, ಎಲ್ಲಾ ಹಂತಗಳಲ್ಲೂ ಪ್ರಭಾವಿ ಪ್ರದರ್ಶನ ನೀಡಿದರು. ಅವರು ಗಳಿಸಿದ ಒಟ್ಟು 19 ಏಕೆಟ್‌ಗಳ ಪೈಕಿ 4 ವಿಕೆಟ್ ಪವರ್-ಪ್ಲೇನಲ್ಲಿ ಬಂದರೆ, ಮಧ್ಯ ಓವರ್‌ಗಳಲ್ಲಿ 9, ಡೆತ್ ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಿತ್ತರು. ಎಲ್ಲಾ ಹಂತಗಳಲ್ಲೂ 10 ರನ್‌ಗಿಂತ ಕಡಿಮೆ ಎಕಾನಮಿ ರೇಟ್ ಕಾಯ್ದುಕೊಂಡಿದ್ದು ವಿಶೇಷ.

4 ಜೇಕ್ ಫೇಸರ್ ಮೆಕ್‌ಗರ್ಕ್  ಪಂದ್ಯ: 09 ರನ್: 330, ಸ್ಟ್ರೈಕ್‌ರೇಟ್: 234.04

ಆಸ್ಟ್ರೇಲಿಯಾದ ಜೇಕ್ ಫೋಸರ್‌ರಷ್ಟು ವೇಗವಾಗಿ ಐಪಿಎಲ್‌ನಲ್ಲಿ ಇಂಪ್ಯಾಕ್ಟ್‌ ಮಾಡಿದ ಆಟಗಾರ ಬಹುಶಃ ಮತ್ತೊಬ್ಬರಿಲ್ಲ. 22 ವರ್ಷದ ಆಟಗಾರರನ್ನು ಟೂರ್ನಿ ಶುರುವಾದ 2 ವಾರಗಳ ಬಳಿಕ ಗಾಯಾಳು ಲುಂಗಿ ಎನ್‌ಗಿಡಿ ಬದಲು ಡೆಲ್ಲಿ ಸೇರ್ಪಡೆ ಮಾಡಿಕೊಂಡಿತು. ಡೇವಿಡ್ ವಾರ್ನರ್ ಜೊತೆ ಓಡಾಡಿಕೊಂಡು, ಅವರ ಫೋಟೋ ಗಳನ್ನು ಕ್ಲಿಕ್ಕಿಸಿಕೊಂಡಿದ್ದ ಮೆಕ್‌ಗರ್ಕ್ ತಂಡಕ್ಕೆ ಕಾಲಿಡುತ್ತಿ ದ್ದಂತೆ ವಾರ್ನರ್‌ ಅವರನ್ನೇ ಆಡುವ ಹನ್ನೊಂದರಿಂದ ಹೊರಕ್ಕೆ ಹಾಕಿದರು. 
 

ಈ ಆವೃತ್ತಿಯಲ್ಲಿ ಜೇಕ್ ಎದುರಿಸಿದ್ದು ಕೇವಲ 141 ಎಸೆತಗಳಷ್ಟೇ ಆದರೂ ತಂಡದ ಪರ 3ನೇ ಗರಿಷ್ಠ ಸ್ಟ್ರೈಕ್‌ರೇಟ್‌ನಲ್ಲಿ ರನ್ ಸರದಾರನಾದರು. ಮೆರ್ಕ್‌ಗರ್ಕ್ 330 ರನ್ ಚಚ್ಚಿದರು. ಅವರು ಗಳಿಸಿದ 330 ರನ್ ಪೈಕಿ 296 ರನ್ಗಳು ಬೌಂಡರಿ, ಸಿಕ್ಸರ್‌ಗಳಿಂದಲೇ (32 ಬೌಂಡರಿ, 28 ಸಿಕ್ಸರ್) ದಾಖಲಾಯಿತು ಎಂದರೆ ನಂಬಲಸಾಧ್ಯ.

5. ಟ್ರಿಸ್ಟನ್ ಸ್ಟಬ್ಸ್  ಪಂದ್ಯ: 14 ರನ್: 378, ಸ್ಟ್ರೈಕ್‌ರೇಟ್: 190.90

ಮುಂಬೈ ಪರ 2 ಆವೃತ್ತಿಗಳಲ್ಲಿ ಒಟ್ಟಾರೆ ಕೇವಲ 4 ಪಂದ್ಯಗಳನ್ನಾಡಿದ್ದ ದ.ಆಫ್ರಿಕಾದ ಟ್ರಸ್ಟನ್ ಸ್ಟಬ್ಸ್‌ರನ್ನು ಹರಾಜಿನಲ್ಲಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್ ತನ್ನ ತಂಡದ ಫಿನಿಶರ್ ಆಗಿ ಬಳಸಿಕೊಂಡಿತು. ಈ ಐಪಿಎಲ್‌ನಲ್ಲಿ 23ರ ಸ್ಟಬ್ಸ್ ಡೆಲ್ಲಿ ಪರ 2ನೇ ಗರಿಷ್ಠ ರನ್ ಸರದಾರ ನಾದರು. 190.90 ಸ್ಟೈಕ್‌ರೇಟ್‌ನಲ್ಲಿ 54ರ ಸರಾಸರಿಯಲ್ಲಿ ಸ್ಟಬ್ಸ್‌ 378 ರನ್ ಸಿಡಿಸಿದರು. 
 

360 ಡಿಗ್ರಿ ಬ್ಯಾಟರ್ ಆಗಿ ಕಾಣಿಸಿಕೊಂಡ ಸ್ಟಬ್ಸ್‌ ಮೈದಾನದ ಎಲ್ಲಾ ಭಾಗಗಳಿಗೂ ಚೆಂಡನ್ನು ಅಟ್ಟಿ ಎದುರಾಳಿಗಳಿಗೆ ಕಂಟಕರಾದರು. ವೇಗಿಗಳ ವಿರುದ್ಧ 198.30 ಸ್ಟೈಕ್‌ರೆಟ್‌ನಲ್ಲಿ ಬ್ಯಾಟ್ ಬೀಸಿದ ಸ್ಟಬ್ಸ್, ಸ್ಪಿನ್ನರ್‌ಗಳ ವಿರುದ್ಧ 180ರ ಸೈಕ್‌ನಲ್ಲಿ ಆಡಿದರು. ಈ ಆವೃತ್ತಿಯಲ್ಲಿ ಕನಿಷ್ಠ 100 ಎಸೆತ ಎದುರಿಸಿದ ಆಟಗಾರರ ಪೈಕಿ ಡೆತ್ ಓವರ್ಸ್‌ನಲ್ಲಿ ಅತಿಹೆಚ್ಚು ಸ್ಟ್ರೈಕ್‌ರೇಟ್ (297.33) ಹೊಂದಿದ ಆಟಗಾರ ಸ್ಟಬ್ಸ್ 17 ರಿಂದ 20 ಓವರ್ ನಡುವೆ ಸಬ್‌ ಎದುರಿಸಿದ ಒಟ್ಟು 75 ಎಸೆತಗಳಲ್ಲಿ ಕೇವಲ 2 ಡಾಟ್ ಬಾಲ್‌ಗಳಿದ್ದವು.

6. ನಿತೀಶ್ ರೆಡ್ಡಿ ಪಂದ್ಯ: 14, ರನ್: 354, ಸ್ಟ್ರೈಕ್‌ರೇಟ್: 164,65

21ರ ನಿತೀಶ್ ರೆಡ್ಡಿ ತಾವೊಬ್ಬ ಪ್ರತಿಭಾನ್ವಿತ ಆಿಂಡರ್ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. 11 ಇನ್ನಿಂಗ್ಸ್‌ನಲ್ಲಿ 142.92ರ ಸ್ಟ್ರೈಕ್‌ರೇಟ್‌ನಲ್ಲಿ 303 ರನ್ ಗಳಿಸಿದ ನಿತೀಶ್, ಕೆಲ ಪ್ರಮುಖ ಘಟ್ಟದಲ್ಲಿ ತಂಡಕ್ಕೆ ಆಸರೆಯಾದರು. ಪಂಜಾಬ್ ವಿರುದ್ದ 37 ಎಸೆತದಲ್ಲಿ 64 ರನ್ ಗಳಿಸಿದ ನಿತೀಶ್, ರಾಜಸ್ಥಾನ ವಿರುದ್ಧ 42 ಎಸೆತದಲ್ಲಿ ಔಟಾಗದೆ 76 ರನ್ ಸಿಡಿಸಿ ಸನ್ ರೈಸರ್ಸ್ ಗೆಲುವಿಗೆ ಕಾರಣರಾಗಿದ್ದರು. ರೆಡ್ಡಿ ಮಧ್ಯಮ ವೇಗದ ಬೌಲಿಂಗ್ ಮೂಲಕವೂ ಗಮನ ಸೆಳೆದರು. ಅಷ್ಟೇ ಅಲ್ಲ, ಅವರೊಬ್ಬ ಅಮೋಘ ಫೀಲ್ಡರ್ ಕೂಡ ಹೌದು.

7. ಶಶಾಂಕ್ ಸಿಂಗ್ ಪಂದ್ಯ: 14, ರನ್: 354, ಸ್ಟ್ರೈಕ್‌ರೇಟ್‌: 164.65

ಹರಾಜಿನಲ್ಲಿ ಗೊಂದಲ ಉಂಟಾಗಿ ಪಂಜಾಬ್ ಕಿಂಗ್ ಶಶಾಂಕ್‌ ಸಿಂಗ್‌ರನ್ನು ಖರೀದಿಸಿತ್ತು. ಆದರೆ ಶಶಾಂಕ್‌ ಅಬ್ಬರದ ಬ್ಯಾಟಿಂಗ್ ಅವರ ಸಾಮರ್ಥ್ಯದ ಬಗ್ಗೆ ಯಾವ ಗೊಂದಲವೂ ಬಾಕಿ ಉಳಿಯದಂತೆ ಮಾಡಿತು. 

ಪಂಜಾಬ್ ಪಾಲಿಗೆ 2024ರ ಐಪಿಎಲ್ ಫಲದಾಯಕವಾಗಿರಲಿಲ್ಲ, ಆದರೆ ಮುಂದಿನ ಆವೃತ್ತಿಯ ಮೆಗಾ ಹರಾಜಿನಲ್ಲಿ ಶಶಾಂಕ್ ತಮಗೆ ಭಾರಿ ಡಿಮ್ಯಾಂಡ್ ಇರುವಂತೆ ಮಾಡಿಕೊಂಡಿದ್ದಾರೆ. 164.65ರ ಸ್ಟೈಕ್‌ರೇಟ್‌ನಲ್ಲಿ 354 ರನ್ ಸಿಡಿಸಿ ಪಂಜಾಬ್ ಪರ ಅತಿಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎನಿಸಿದ ಶಶಾಂಕ್, ತಾವೊಬ್ಬ ಅಪ್ಪಟ ಟಿ20 ಫಿನಿಶರ್ ಎನ್ನುವುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟರು.

Latest Videos

click me!