ಶಾಹೀನ್ vs ರೋಹಿತ್, ರಾಹುಲ್
ಕಳೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ಆರಂಭಿಕರನ್ನು ಪಾಕ್ ವೇಗಿ ಶಾಹೀನ್ ಆಫ್ರಿದಿ ಇನ್ನಿಲ್ಲದಂತೆ ಕಾಡಿದ್ದರು. ಆಕರ್ಷಕ ಯಾರ್ಕರ್‌ಗಳ ಮೂಲಕ ಶಾಹೀನ್ ಮತ್ತೊಂದು ಕದನಕ್ಕೆ ರೆಡಿಯಾಗಿದ್ದರೆ, ರೋಹಿತ್, ರಾಹುಲ್ ಸಮರ್ಥವಾಗಿ ಎದುರಿಸಲು ಸಜ್ಜಾಗಿದ್ದಾರೆ.
ಭಾರತದ ಡೆತ್ ಬೌಲರ್ಸ್ vs ಆಸಿಫ್ ಅಲಿ
ಇತ್ತೀಚಿನ ದಿನಗಳಲ್ಲಿ ಪಾಕ್ ತಂಡದ ಫಿನಿಶರ್ ಆಗಿ ಗುರುತಿಸಿಕೊಂಡಿರುವ ಆಸಿಫ್ ಅಲಿಯನ್ನು ತಡೆಯುವುದು ಭಾರತದ ಡೆತ್ ಓವರ್ ಬೌಲರ್‌ಗಳ ಮುಂದಿರುವ ಗುರಿ. ಬುಮ್ರಾ ಅನುಪಸ್ಥಿತಿಯಲ್ಲಿ ಆರ್ಶದೀಪ್ ಮೇಲೆ ಹೆಚ್ಚು ನಿರೀಕ್ಷೆ ಇದೆ.
ಸೂರ್ಯಕುಮಾರ್ vs ಶದಾಬ್ ಖಾನ್
ವಿಶ್ವಕಪ್‌ನಲ್ಲಿ ಭಾರತದ ಟ್ರಂಪ್‌ಕಾರ್ಡ್ ಎನಿಸಿರುವ ಸೂರ್ಯಕುಮಾರ್ ಯಾವುದೇ ಬೌಲರ್‌ಗಳಿಗೆ ನಡುಕ ಹುಟ್ಟಿಸಬಲ್ಲರು. ಮೈದಾನದ ಎಲ್ಲಾ ಭಾಗಗಳಿಗೂ ಚೆಂಡನ್ನು ಅಟ್ಟುವ ಸೂರ್ಯ ಅವರನ್ನು ಕಟ್ಟಿಹಾಕಲು ಪಾಕಿಸ್ತಾನ ತನ್ನ ಪ್ರಮುಖ ಸ್ಪಿನ್ ಅಸ್ತ್ರ ಶದಾಬ್‌ರನ್ನು ಬಳಸಬಹುದು.
ಬಾಬರ್, ರಿಜ್ವಾನ್ vs ಭುವನೇಶ್ವರ್
ಬಾಬರ್ ಹಾಗೂ ರಿಜ್ವಾನ್ ಪಾಕಿಸ್ತಾನದ ಬ್ಯಾಟಿಂಗ್ ಆಧಾರಸ್ತಂಭ. ಕಳೆದ 2 ವರ್ಷದಲ್ಲಿ ಇಬ್ಬರೂ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ಜೋಡಿಯನ್ನು ಪವರ್-ಪ್ಲೇನಲ್ಲೇ ಪೆವಿಲಿಯನ್‌ಗಟ್ಟುವ ಹೊಣೆಗಾರಿಕೆ ವೇಗಿ ಭುವನೇಶ್ವರ್ ಮೇಲಿದೆ. ಈ ಇಬ್ಬರನ್ನೂ ಕಟ್ಟಿಹಾಕಿದರೆ ಭಾರತ ಅರ್ಧ ಗೆದ್ದಂತೆ.