T20 World Cup ಪಟ್ಟಕ್ಕೆ 12 ತಂಡ ಕಾದಾಟ..! ಯಾವ ತಂಡ ಎಷ್ಟು ಸ್ಟ್ರಾಂಗ್...?

Published : Oct 22, 2022, 11:32 AM ISTUpdated : Oct 22, 2022, 11:33 AM IST

ಮೆಲ್ಬರ್ನ್‌(ಅ.22): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪ್ರಧಾನ ಸುತ್ತು ಇಂದಿನಿಂದ ಆರಂಭವಾಗಲಿದ್ದು, ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಮೊದಲು ಸೂಪರ್ 12 ಹಂತಕ್ಕೆ ನೇರವಾಗಿ 8 ತಂಡಗಳು ಅರ್ಹತೆ ಪಡೆದಿದ್ದವು. ಇನ್ನುಳಿದ 4 ತಂಡಗಳು ಅರ್ಹತಾ ಸುತ್ತಿನಲ್ಲಿ ಗೆದ್ದು ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟಿವೆ. ಇದೀಗ ತಲಾ 6 ತಂಡಗಳ ಎರಡು ಗುಂಪುಗಳನ್ನಾಗಿ ವಿಂಗಡಿಸಿದ್ದು, ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮೀಸ್ ಪ್ರವೇಶಿಸಲಿದ್ದು, ಫೈನಲ್ ಪಂದ್ಯವು ನವೆಂಬರ್ 13ರಂದು ನಡೆಯಲಿವೆ. ಸೂಪರ್ 12 ಹಂತದ ಪಂದ್ಯಕ್ಕೂ ಮುನ್ನ 12 ತಂಡಗಳ ಬಲಾಬಲ ಹೇಗಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ  

PREV
112
T20 World Cup ಪಟ್ಟಕ್ಕೆ 12 ತಂಡ ಕಾದಾಟ..! ಯಾವ ತಂಡ ಎಷ್ಟು ಸ್ಟ್ರಾಂಗ್...?
1. ಭಾರತ, ರ‍್ಯಾಂಕಿಂಗ್‌‌: 01

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಈ ಬಾರಿ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದೆ. ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಟ್ರಂಪ್‌ ಕಾರ್ಡ್‌. ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ತಂಡಗವನ್ನು ಕಾಡುವ ಸಾಧ್ಯತೆಯಿದೆ. 

ಶ್ರೇಷ್ಠ ಪ್ರದರ್ಶನ: 2007ರಲ್ಲಿ ಚಾಂಪಿಯನ್‌
 

212
2. ಇಂಗ್ಲೆಂಡ್‌, ರ‍್ಯಾಂಕಿಂಗ್‌‌: 02

ತಂಡ ಉತ್ತಮ ಟಿ20 ತಜ್ಞ ಬ್ಯಾಟರ್‌ಗಳನ್ನು ಹೊಂದಿದೆ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಅನೇಕರಿದ್ದಾರೆ. ಸ್ಟೋಕ್ಸ್‌, ಕರ್ರನ್‌, ಅಲಿ ಆಲ್ರೌಂಡ್‌ ಆಟ ತಂಡಕ್ಕಿರುವ ದೊಡ್ಡ ಬಲ. ಬೇರ್‌ಸ್ಟೋವ್‌, ಆರ್ಚರ್‌ ಅನುಪಸ್ಥಿತಿ ಕಾಡಬಹುದು.

ಶ್ರೇಷ್ಠ ಪ್ರದರ್ಶನ: 2010ರಲ್ಲಿ ಚಾಂಪಿಯನ್‌

312
3. ಪಾಕಿಸ್ತಾನ,  ರ‍್ಯಾಂಕಿಂಗ್‌‌: 03

ಕಳೆದ 2 ವರ್ಷದಲ್ಲಿ ಅತಿಹೆಚ್ಚು ಟಿ20 ಪಂದ್ಯಗಳನ್ನು ಆಡಿರುವ ತಂಡ. ವಿಶ್ವ ಶ್ರೇಷ್ಠ ವೇಗಿಗಳ ಬಲ ತಂಡಕ್ಕಿದೆ. ರಿಜ್ವಾನ್‌, ಬಾಬರ್‌ ಉತ್ಕೃಷ್ಟ ಲಯದಲ್ಲಿದ್ದಾರೆ. ಅನುಭವಿ ಫಿನಿಶರ್‌ಗಳ ಕೊರತೆ ಕಾಣುತ್ತಿದ್ದು, ಸಮಸ್ಯೆಯಾಗಬಹುದು.

ಶ್ರೇಷ್ಠ ಪ್ರದರ್ಶನ: 2009ರಲ್ಲಿ ಚಾಂಪಿಯನ್‌
 

412
4. ದಕ್ಷಿಣ ಆಫ್ರಿಕಾ, ರ‍್ಯಾಂಕಿಂಗ್‌‌: 04

ಉತ್ತಮ ಸಾಮರ್ಥ್ಯವಿರುವ ತಂಡ. ಗುಣಮಟ್ಟದ ವೇಗಿಗಳಿದ್ದಾರೆ. ಆದರೆ ವಿಶ್ವಕಪ್‌ಗಳಲ್ಲಿ ಉತ್ತಮ ದಾಖಲೆ ಹೊಂದಿಲ್ಲ. ಇತ್ತೀಚೆಗೆ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ಕೆಲ ಆಟಗಾರರು ಲಯದಲ್ಲಿಲ್ಲ.

ಶ್ರೇಷ್ಠ ಪ್ರದರ್ಶನ: 2009, 14ರಲ್ಲಿ ಸೆಮೀಸ್‌
 

512
5. ನ್ಯೂಜಿಲೆಂಡ್‌, ರ‍್ಯಾಂಕಿಂಗ್‌‌: 05

2022ರಲ್ಲಿ 15 ಪಂದ್ಯಗಳಲ್ಲಿ ಕೇವಲ 3ರಲ್ಲಿ ಸೋತಿದೆ. ಕಳೆದ ಬಾರಿ ರನ್ನರ್‌-ಅಪ್‌ ಆಗಿದ್ದ ಕಿವೀಸ್‌ ಈ ವರ್ಷವೂ ಸೆಮೀಸ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದು. ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಸಮತೋಲನವಿದೆ.

ಶ್ರೇಷ್ಠ ಪ್ರದರ್ಶನ: 2021ರಲ್ಲಿ ರನ್ನರ್‌-ಅಪ್‌
 

612
6. ಆಸ್ಪ್ರೇಲಿಯಾ, ರ‍್ಯಾಂಕಿಂಗ್‌‌: 06

ಹಾಲಿ ವಿಶ್ವ ಚಾಂಪಿಯನ್‌ ಆಸ್ಪ್ರೇಲಿಯಾಗೆ ತವರಿನ ಲಾಭ ಸಿಗಲಿದೆ. ಉತ್ತಮ ತಂಡವನ್ನೂ ಹೊಂದಿದೆ. ಆದರೆ ಈ ವರ್ಷ ಸ್ಥಿರ ಪ್ರದರ್ಶನ ತೋರಿಲ್ಲ. ಇತ್ತೀಚೆಗೆ ತವರಲ್ಲಿ ಇಂಗ್ಲೆಂಡ್‌ ವಿರುದ್ಧ ಸರಣಿ ಸೋತಿತ್ತು.

ಶ್ರೇಷ್ಠ ಪ್ರದರ್ಶನ: 2021ರಲ್ಲಿ ಚಾಂಪಿಯನ್‌
 

712
7. ಶ್ರೀಲಂಕಾ, ರ‍್ಯಾಂಕಿಂಗ್‌‌: 08

ಹಾಲಿ ಏಷ್ಯಾ ಚಾಂಪಿಯನ್‌. ಅರ್ಹತಾ ಸುತ್ತಿನಲ್ಲಿ ಆರಂಭಿಕ ಆಘಾತದ ಎದುರು ಪುಟಿದೆದ್ದಿದೆ. ಪ್ರತಿಭಾನ್ವಿತ ಆಟಗಾರರಿದ್ದಾರೆ. ಶಾನಕ ತಂಡ ನಿರ್ವಹಣೆಯಲ್ಲಿ ಪ್ರಬುದ್ಧತೆ ತೋರಿದ್ದಾರೆ. ಅಪಾಯಕಾರಿ ತಂಡಗಳಲ್ಲೊಂದು.

ಶ್ರೇಷ್ಠ ಪ್ರದರ್ಶನ: 2014ರಲ್ಲಿ ಚಾಂಪಿಯನ್‌
 

812
8. ಬಾಂಗ್ಲಾದೇಶ, ರ‍್ಯಾಂಕಿಂಗ್‌‌: 09

ತಂಡದಲ್ಲಿ ಆಂತರಿಕ ಗೊಂದಲಗಳಿವೆ. ಹಲವು ಹೊಸ ಆಟಗಾರರಿದ್ದು ಅನುಭವದ ಕೊರತೆ ಇದೆ. ಈ ವರ್ಷ 15ರಲ್ಲಿ 11 ಪಂದ್ಯ ಸೋತಿದೆ. ಶಕೀಬ್‌, ಮುಸ್ತಾಫಿಜುರ್‌, ಸರ್ಕಾರ್‌, ಲಿಟನ್‌ ಹೆಚ್ಚು ಜವಾಬ್ದಾರಿ ವಹಿಸಬೇಕಿದೆ.

ಶ್ರೇಷ್ಠ ಪ್ರದರ್ಶನ: 2007ರಲ್ಲಿ ಸೂಪರ್‌-8
 

912
9. ಆಫ್ಘಾನಿಸ್ತಾನ, ರ‍್ಯಾಂಕಿಂಗ್‌: 10

ಟಿ20ಗೆ ತಕ್ಕ ಮನಸ್ಥಿತಿಯೊಂದಿಗೆ ಆಡುವ ಪಡೆ. ಆಕ್ರಮಣಕಾರಿ ಆಟ ತಂಡದ ಬಲ. ರಶೀದ್‌, ಮುಜೀಬ್‌, ನಬಿಯಂತಹ ವಿಶ್ವಶ್ರೇಷ್ಠ ಸ್ಪಿನ್ನರ್‌ಗಳಿದ್ದಾರೆ. ಸ್ಫೋಟಕ ಬ್ಯಾಟರ್‌ಗಳ ದಂಡೇ ಇದೆ. ಅಚ್ಚರಿ ಫಲಿತಾಂಶಗಳಿಗೆ ಹೆಸರುವಾಸಿ.

ಶ್ರೇಷ್ಠ ಪ್ರದರ್ಶನ: 2016ರಲ್ಲಿ ಸೂಪರ್‌-10
 

1012
10. ಜಿಂಬಾಬ್ವೆ, ರ‍್ಯಾಂಕಿಂಗ್‌: 11

ಅರ್ಹತಾ ಸುತ್ತಿನಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ಆಲ್ರೌಂಡರ್‌ ಸಿಕಂದರ್‌ ರಾಜಾ ತಂಡದ ಟ್ರಂಪ್‌ ಕಾರ್ಡ್‌. ನಾಯಕ ಕ್ರೇಗ್‌ ಎರ್ವಿನ್‌ ಜೊತೆ ರಾಜಾ ಉತ್ತಮ ಪ್ರದರ್ಶನ ಮುಂದುವರಿಸಿದರಷ್ಟೇ ತಂಡಕ್ಕೆ ಯಶಸ್ಸು.

ಶ್ರೇಷ್ಠ ಪ್ರದರ್ಶನ: 2022ರಲ್ಲಿ ಸೂಪರ್‌-12
 

1112
11. ಐರ್ಲೆಂಡ್‌, ರ‍್ಯಾಂಕಿಂಗ್‌: 12

ಸ್ಫೋಟಕ ಬ್ಯಾಟರ್‌ಗಳ ಪಡೆ ಇದೆ. ಸ್ಟಿರ್ಲಿಂಗ್‌, ಬಾಲ್ಬರ್ನಿ ಉತ್ತಮ ಲಯದಲ್ಲಿದ್ದಾರೆ. ಕ್ಯಾಂಫರ್‌ ಆಲ್ರೌಂಡ್‌ ಆಟ ತಂಡದ ಬಲ. ಉತ್ತಮ ವೇಗಿಗಳು, ಗೆರಾತ್‌ ಡ್ಯಾನ್ಲಿಯಂತಹ ಉತ್ತಮ ಸ್ಪಿನ್ನರ್‌ ಬಲವೂ ತಂಡಕ್ಕಿದೆ.

ಶ್ರೇಷ್ಠ ಪ್ರದರ್ಶನ: 2009ರಲ್ಲಿ ಸೂಪರ್‌-8
 

1212
12. ನೆದರ್‌ಲೆಂಡ್ಸ್‌, ರ‍್ಯಾಂಕಿಂಗ್‌: 17

ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಸ್ಥಿರತೆ ಉಳಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ಕೆಲ ಅನುಭವಿ ಟಿ20 ಆಟಗಾರರಿದ್ದು, ಅವರ ಮೇಲೆ ತಂಡ ಹೆಚ್ಚು ಅವಲಂಬಿತಗೊಂಡಿದೆ.

ಶ್ರೇಷ್ಠ ಪ್ರದರ್ಶನ: 2014ರಲ್ಲಿ ಸೂಪರ್‌-10
 

Read more Photos on
click me!

Recommended Stories