1. ಅನುಭವಿ ಆಟಗಾರರಾದ ಪೊಲ್ಲಾರ್ಡ್, ಬ್ರಾವೋ, ನರೇನ್, ರಸೆಲ್ ಅಲಭ್ಯತೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಕೆಲವೇ ತಿಂಗಳ ಮುಂಚೆ ಕೀರನ್ ಪೊಲ್ಲಾರ್ಡ್ ಹಾಗೂ ಡ್ವೇನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಇನ್ನು ತಾರಾ ಆಟಗಾರರಾದ ಸುನಿಲ್ ನರೈನ್ ಹಾಗೂ ರಸೆಲ್‌ಗೆ ತಂಡದೊಳಗೆ ಸ್ಥಾನ ನೀಡದೇ ಹೋದದ್ದು ಕೆರಿಬಿಯನ್ನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
2. ನಾಯಕ ಪೂರನ್ ತಂಡ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲ:
ಕೀರನ್ ಪೊಲ್ಲಾರ್ಡ್ ನಿವೃತ್ತಿಯ ಬಳಿಕ ನಾಯಕತ್ವ ವಹಿಸಿಕೊಂಡ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಬ್ಯಾಟರ್ ಆಗಿ ಹಾಗೂ ನಾಯಕನಾಗಿ ದಯನೀಯ ವೈಫಲ್ಯ ಅನುಭವಿಸಿದ್ದು ವೆಸ್ಟ್ ಇಂಡೀಸ್ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.
3. ಹೆಟ್ಮೇಯರ್‌ರನ್ನೂ ತಂಡದಿಂದ ಹೊರಹಾಕಿದ ವಿಂಡೀಸ್ ಕ್ರಿಕೆಟ್ ಮಂಡಳಿ:
ವಿಂಡೀಸ್ ಮಂಡಳಿ ಹಾಗೂ ಆಟಗಾರರ ತಿಕ್ಕಾಟ ಕೂಡಾ, ವೆಸ್ಟ್ ಇಂಡೀಸ್ ತಂಡ ಕಳಪೆ ಪ್ರದರ್ಶನ ತೋರಲು ಕಾರಣ. ಹೆಟ್ಮೇಯರ್ ವಿಮಾನ ವೇರಲು ತಡವಾಗಿದ್ದಕ್ಕೆ ಅವರನ್ನು ವಿಶ್ವಕಪ್ ತಂಡದಿಂದಲೇ ಹೊರಹಾಕಿದ್ದು, ಇದಕ್ಕೊಂದು ಜೀವಂತ ನಿದರ್ಶನ.
4. ತಂಡದಲ್ಲಿದ್ದ ಬಹುತೇಕರು ಐಪಿಎಲ್ ಸೇರಿ ಪ್ರಮುಖ ಟಿ20 ಲೀಗ್‌ಗಳಲ್ಲಿ ಆಡಿದ್ದರೂ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ತೋರುವಲ್ಲಿ ಹಿನ್ನಡೆ:
ಜಗತ್ತಿನಾದ್ಯಂತ ನಡೆಯುವ ಟಿ20 ಲೀಗ್‌ಗಳಲ್ಲಿ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಇದೇ ವಿಂಡೀಸ್ ಆಟಗಾರರು ಹೊಂದಿದ್ದಾರೆ. ಆದರೆ ಇವರೆಲ್ಲರೂ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡದ್ದೇ ಹೋದದ್ದೂ ಕೂಡಾ ವೆಸ್ಟ್ ಇಂಡೀಸ್ ತಂಡವು ಅರ್ಹತಾ ಸುತ್ತಿನಲ್ಲಿ ಹೊರಬೀಳಲು ಕಾರಣಗಳಲ್ಲೊಂದು.
5. ಸ್ಪಿನ್ ಬೌಲಿಂಗ್ ಎದುರು ದಯನೀಯ ವೈಫಲ್ಯ. 3 ಪಂದ್ಯಗಳಲ್ಲಿ ಎದುರಾಳಿ ಸ್ಪಿನ್ನರ್‌ಗಳಿಗೆ ಒಟ್ಟು 13 ವಿಕೆಟ್ ನೀಡಿದ ವಿಂಡೀಸ್:
ಹೊಡಿಬಡಿಯಾಟಕ್ಕೆ ಹೆಸರುವಾಸಿಯಾದ ವೆಸ್ಟ್ ಇಂಡೀಸ್ ಬ್ಯಾಟರ್‌ಗಳು, ಆಸ್ಟ್ರೇಲಿಯಾ ನೆಲದಲ್ಲಿ ಸ್ಪಿನ್ನರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ವೈಫಲ್ಯ ಅನುಭವಿಸಿದರು. ಅರ್ಹತಾ ಸುತ್ತಿನ ಮೂರು ಪಂದ್ಯಗಳಲ್ಲಿ ಎದುರಾಳಿ ತಂಡ ಒಟ್ಟು 13
6. ಮೂರೂ ಪಂದ್ಯಗಳಲ್ಲಿ ಪವರ್-ಪ್ಲೇನಲ್ಲಿ ಬ್ಯಾಟಿಂಗ್ ವೈಫಲ್ಯ:
ವೆಸ್ಟ್ ಇಂಡೀಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಮೂರು ಪಂದ್ಯಗಳಲ್ಲೂ ಪವರ್ ಪ್ಲೇ ಸ್ಪೋಟಕ ಆರಂಭ ಒದಗಿಸಿಕೊಡಲು ವಿಫಲವಾಗಿದ್ದೂ ಕೂಡಾ ತಂಡದ ಹಿನ್ನೆಡೆಗೆ ಕಾರಣವೆನಿಸಿತು. ವಿಂಡೀಸ್ ಬ್ಯಾಟರ್‌ಗಳ ಓಪನ್ನರ್‌ಗಳು ಆಕ್ರಮಣಕಾರಿಯಾಟಕ್ಕಿಂತ ರಕ್ಷಣಾತ್ಮಕ ಆಟಕ್ಕೆ ಮೊರೆಹೋದದ್ದು ನಿಜಕ್ಕೂ ಅಚ್ಚರಿಯೆನಿಸಿತು.
7. ಸ್ಕಾಟ್ಲೆಂಡ್, ಐರ್ಲೆಂಡ್ ವಿರುದ್ಧ ಕಳಪೆ ಬೌಲಿಂಗ್. ಸ್ಕಾಟ್ಲೆಂಡ್ ವಿರುದ್ಧ 5, ಐರ್ಲೆಂಡ್ ವಿರುದ್ಧ 1 ವಿಕೆಟ್ ಕಿತ್ತ ವಿಂಡೀಸ್ ಬೌಲರ್ಸ್
ವೆಸ್ಟ್ ಇಂಡೀಸ್ ಬ್ಯಾಟರ್‌ಗಳಂತೆ ಬೌಲರ್‌ಗಳು ಕೂಡಾ ಜವಾಬ್ದಾರಿಯುತ ಪ್ರದರ್ಶನ ತೋರಲು ವಿಫಲವಾಗಿದ್ದು ತಂಡದ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿತು. ಕ್ರಿಕೆಟ್ ಶಿಶುಗಳು ಎನಿಸಿರುವ ಸ್ಕಾಟ್ಲೆಂಡ್ ಎದುರು 5 ವಿಕೆಟ್ ಕಬಳಿಸಿದರೆ, ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದ್ದ ಐರ್ಲೆಂಡ್ ವಿರುದ್ದ ಕೆರಿಬಿಯನ್ನರು ಪಡೆದಿದ್ದು ಕೇವಲ ಒಂದು ವಿಕೆಟ್ ಮಾತ್ರ. ಈ ಎರಡೂ ಪಂದ್ಯಗಳಲ್ಲೂ ವಿಂಡೀಸ್ ಸೋಲು ಕಂಡಿತು.