2021ರ ಟಿ20 ವಿಶ್ವಕಪ್ ಖಚಿತಪಡಿಸಿದ ICC,ಭಾರತೀಯರಿಗೆ ಡಬಲ್ ಧಮಾಕ!

First Published Nov 12, 2020, 5:51 PM IST

IPL 2020 ಟೂರ್ನಿ ಯಶಸ್ವಿಯಾದ ಬೆನ್ನಲ್ಲೇ ಇದೀಗ ಐಸಿಸಿಗೆ ಟೂರ್ನಿ ಆಯೋಜಿಸುವ ವಿಶ್ವಾಸ ಬಂದಿದೆ. ಹೀಗಾಗಿ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ. 2020ರ ಟಿ20 ವಿಶ್ವಕಪ್ ಟೂರ್ನಿ ರದ್ದಗೊಂಡಿದೆ. 2021ರ ಟೂರ್ನಿಗೆ ಆತಿಥ್ಯ ಯಾರು?ICC ಹೇಳಿದ್ದೇನು?

IPL 2020 ಟೂರ್ನಿ ಅಂತ್ಯಗೊಂಡ ಬೆನ್ನಲ್ಲೇ ಇದೀಗ 2021ರ ಟಿ20 ವಿಶ್ವಕಪ್ ಟೂರ್ನಿ ನಿಗದಿಯಂತೆ ನಡೆಯಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.
undefined
2021ರ ವಿಶ್ವಕಪ್ ಟೂರ್ನಿಗೆ ಭಾರತ ಅತಿಥ್ಯ ವಹಿಸಲಿದೆ. ಭಾರತದಲ್ಲಿ ಕೊರೋನಾ ವೈರಸ್ ಸಂಖ್ಯೆ ಹೆಚ್ಚಾಗಿದ್ದ ಕಾರಣ ಐಸಿಸಿ ಟೂರ್ನಿ ಆಯೋಜನೆ ಕುರಿತು ಮೌನ ತಾಳಿತ್ತು.
undefined
ಕೊರೋನಾ ನಡುವೆ ಐಪಿಎಲ್ ಟೂರ್ನಿಯಲ್ಲಿ ಯಶಸ್ವಿಗೊಳಿಸಿದ ಬಿಸಿಸಿಐ ಕಾರ್ಯವೈಖ್ಯರಿಗೆ ಐಸಿಸಿ ತಲೆಬಾಗಿದೆ. ಹೀಗಾಗಿ ಭಾರತದಲ್ಲೇ 2021ರ ಟಿ20 ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿದೆ ಎಂದು ಐಸಿಸಿ ಹೇಳಿದೆ.
undefined
2020ರ ಟಿ20 ವಿಶ್ವಕಪ್ ಟೂರ್ನಿ ಕೊರೋನಾ ವೈರಸ್ ಕಾರಣ ರದ್ದುಗೊಂಡಿದೆ. ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಿದ್ದ ಈ ಟೂರ್ನಿಗೆ ಕೊರೋನಾ ತೀವ್ರ ಹಿನ್ನಡೆ ತಂದಿತ್ತು. ಹೀಗಾಗಿ ಟೂರ್ನಿಯನ್ನು ರದ್ದು ಮಾಡಲಾಗಿದೆ.
undefined
ಕೊರೋನಾ ವೈರಸ್ ಕಾರಣ ಅಂತಿಮ ಹಂತದಲ್ಲಿ 2020ರ ಟಿ20 ವಿಶ್ವಕಪ್ ಟೂರ್ನಿ ರದ್ದುಮಾಡಲಾಯಿತು. 2020ರಲ್ಲಿ ರದ್ದಾಗಿರುವ ಟಿ20 ವಿಶ್ವಕಪ್ ಟೂರ್ನಿ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ಎಂದು ಐಸಿಸಿ ಹೇಳಿದೆ.
undefined
ಭಾರತ 2016ರಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಿತ್ತು. ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
undefined
ಭಾರತ ಆಯೋಜಿಸುತ್ತಿರುವ 2021ರ ಟಿ20 ಟೂರ್ನಿಗೆ ಕಟ್ಟು ನಿಟ್ಟಿನ ನಿಯಮ ಪಾಲಿಸಲು ಬಿಸಿಸಿಐ ರೆಡಿಯಾಗಿದೆ. ಕ್ವಾರಂಟೈನ್, ಬಯೋ ಬಬಲ್ ಸೇರಿದಂತೆ ಹಲವು ನಿಯಮಗಳು ಆಟಗಾರರಿಗೆ ಅನ್ವಯವಾಗಲಿದೆ.
undefined
ಪ್ರೇಕ್ಷರ ಪ್ರವೇಶದ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹೊಸ ವರ್ಷದಲ್ಲಿ ಕೊರೋನಾ ಲಸಿಕೆ ಲಭ್ಯವಾದಲ್ಲಿ ಹಾಗೂ ಕೊರೋನಾ ನಿಯಂತ್ರಣಕ್ಕೆ ಬಂದರೆ ಪ್ರೇಕ್ಷಕರ ಪ್ರವೇಶಕ್ಕೆ ಸಾಧ್ಯತೆಗಳಿವೆ.
undefined
click me!