"ನಾನು ಹೋಗಿ HIV ಟೆಸ್ಟ್‌ ಮಾಡಿಸಿಕೊಂಡೆ": ಬದುಕಿನ ಅತಿದೊಡ್ಡ ರಹಸ್ಯ ಬಯಲು ಮಾಡಿದ ಶಿಖರ್ ಧವನ್..!

Published : Mar 26, 2023, 05:07 PM ISTUpdated : Apr 04, 2023, 01:12 PM IST

ನವದೆಹಲಿ: ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್‌, ಸೌರವ್ ಗಂಗೂಲಿ, ಗೌತಮ್ ಗಂಭೀರ್ ಬಳಿಕ ಭಾರತ ಕ್ರಿಕೆಟ್ ತಂಡ ಕಂಡಂತಹ ಅತ್ಯಂತ ಯಶಸ್ವಿ ಎಡಗೈ ಆರಂಭಿಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೀಗ ಶಿಖರ್ ಧವನ್, ತಮ್ಮ ಜೀವನದಲ್ಲಿ ನಡೆದ ಅತ್ಯಂತ ಮಹತ್ವದ ಘಟನೆಯೊಂದನ್ನು ಬಾಯ್ಬಿಟ್ಟಿದ್ದಾರೆ. ಏನದು? ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
19
"ನಾನು ಹೋಗಿ HIV ಟೆಸ್ಟ್‌ ಮಾಡಿಸಿಕೊಂಡೆ": ಬದುಕಿನ ಅತಿದೊಡ್ಡ ರಹಸ್ಯ ಬಯಲು ಮಾಡಿದ ಶಿಖರ್ ಧವನ್..!

ಟೀಂ ಇಂಡಿಯಾ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್, ಕೆಲ ಸಮಯದಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದು, ಇದೀಗ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ..

29

2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಶಿಖರ್ ಧವನ್, ನಾಯಕನಾಗಿ ಪಂಜಾಬ್ ಕಿಂಗ್ಸ್‌ ತಂಡವನ್ನು ಮುನ್ನಡೆಸುದ್ದಾರೆ. ಪಂಜಾಬ್ ಕಿಂಗ್ಸ್‌ ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸುವ ಕನವರಿಕೆಯಲ್ಲಿದೆ.

39

ಇನ್ನು ಈ ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನ ಹಿಂದಿ ನ್ಯೂಸ್ ಚಾನೆಲ್‌ 'ಆಜ್‌ ತಕ್‌' ವಾಹಿನಿಯಲ್ಲಿ ನಡೆದ 'ಸೀದಿ ಬಾತ್' (ನೇರ ಮಾತು) ಕಾರ್ಯಕ್ರಮದಲ್ಲಿ ತಾವು HIV ಟೆಸ್ಟ್‌ ಮಾಡಿಸಿಕೊಂಡಿದ್ದರ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

49

ಹೌದು, ಟೀಂ ಇಂಡಿಯಾ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್, ಓರ್ವ ಟ್ಯಾಟೂ ಪ್ರಿಯ ವ್ಯಕ್ತಿ ಎನ್ನುವುದು ಎಲ್ಲರಿಗೂ ಗೊತ್ತೆ ಇದೆ. ಶಿಖರ್ ಧವನ್ ಮೈಮೇಲೆ ಮಾತ್ರವಲ್ಲ, ಮುಂಗೈ ಹಾಗೂ ಕಾಲಿನ ಕೆಲ ಭಾಗದಲ್ಲೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

59

ಇನ್ನು ತಾವು ಹದಿಹರೆಯದಲ್ಲಿದ್ದಾಗ ಮಾಡಿದ ಎಡವಟ್ಟಿನಿಂದಾಗಿ HIV ಟೆಸ್ಟ್‌ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಅದೃಷ್ಟವಶಾತ್ ಆ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿತು ಎಂದು ಆ ದಿನಗಳನ್ನು ಶಿಖರ್ ಧವನ್ ಮೆಲುಕು ಹಾಕಿದ್ದಾರೆ.

69

ನಾನು 14-15 ವರ್ಷದವನಿದ್ದಾಗ ಒಮ್ಮೆ ಮನಾಲಿಗೆ ಹೋಗಿದ್ದೆ. ನಮ್ಮ ಕುಟುಂಬದವರಿಗೆ ಗೊತ್ತಾಗದಂತೆ ನಾನು ನನ್ನ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದೆ. ಕೆಲ ಸಮಯದವರೆಗೂ ಈ ವಿಚಾರವನ್ನು ನಮ್ಮ ಪೋಷಕರಿಂದ ಮುಚ್ಚಿಟ್ಟಿದೆ.

79

ಇದಾಗಿ ಮೂರ್ನಾಲ್ಕು ತಿಂಗಳ ಬಳಿಕ ನನ್ನ ತಂದೆ ನಾನು ಟ್ಯಾಟೂ ಹಾಕಿಸಿಕೊಂಡಿರುವುದು ನೋಡಿದರು. ಆಮೇಲೆ ನನಗೆ ಚೆನ್ನಾಗಿ ಬಾರಿಸಿದರು. ಇಷ್ಟೇ ಆಗಿದ್ದರೇ ಹೆಚ್ಚು ಭಯಪಡುತ್ತಿರಲಿಲ್ಲ.

89
Shikhar Dhawan

ಯಾಕೆಂದರೆ ನನಗೆ ಟ್ಯಾಟೂ ಹಾಕಿದ ಸೂಜಿಯನ್ನು ಈ ಹಿಂದೆ ಎಷ್ಟು ಜನರಿಗೆ ಬಳಸಿದ್ದಾರೆ ಎನ್ನುವ ಮಾಹಿತಿ ನನಗಿರಲಿಲ್ಲ. ಹೀಗಾಗಿ ನಾನು ಆತಂಕದಿಂದಲೇ HIV ಟೆಸ್ಟ್‌ ಮಾಡಿಸಿಕೊಂಡೆ, ಅದೃಷ್ಟವಶಾತ್ ಆ ಟೆಸ್ಟ್‌ ನೆಗೆಟಿವ್ ಬಂದಿತು ಎಂದು ಶಿಖರ್ ಧವನ್ ಹೇಳಿದ್ದಾರೆ.

99

ಸಾಮಾನ್ಯವಾಗಿ ಒಬ್ಬರಿಗೆ ಟ್ಯಾಟೂ ಹಾಕಲು ಬಳಸಿದ ಸೂಜಿಯನ್ನು ಇನ್ನೊಬ್ಬರಿಗೆ ಬಳಸುವುದಿಲ್ಲ. ಒಂದು ವೇಳೆ ಹೆಚ್‌ಐವಿ ಸೋಂಕು ಇರುವ ವ್ಯಕ್ತಿಗೆ ಟ್ಯಾಟೂ ಹಾಕಲು ಬಳಸಿದ ಸೂಜಿಯನ್ನು ಮತ್ತೊಬ್ಬ ವ್ಯಕ್ತಿಗೆ ಬಳಸಿದರೆ, ಅವರಿಗೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ಕೂಡಾ ರಸ್ತೆ ಬದಿ ಟ್ಯಾಟೂ ಹಾಕಿಸಿಕೊಳ್ಳುವಾಗ ಜಾಗೃತೆಯಿಂದಿರಿ.

Read more Photos on
click me!

Recommended Stories