ಇಲೆಕ್ಟ್ರಾನಿಕ್ ಸಿಟಿಗೆ ಭೇಟಿ ಕೊಟ್ಟು ಚಪಾತಿ ಸವಿದ ಜಾಂಟಿ ರೋಡ್ಸ್‌! ಫ್ಯಾನ್ಸ್‌ ಡೌಟ್‌ಗೆ ಉತ್ತರ ಕೊಟ್ಟ ಹರಿಣಗಳ ಲೆಜೆಂಡ್

First Published | Aug 28, 2024, 11:25 AM IST

ಬೆಂಗಳೂರು: ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ ಜಾಂಟಿ ರೋಡ್ಸ್‌ಗೆ ಭಾರತದ ಜತೆ ಅವಿನಾಭಾವ ಸಂಬಂಧವಿದೆ. ಇದರ ಜತೆಗೆ ಇದೀಗ ಇಲ್ಲಿನ ಇಲೆಕ್ಟ್ರಾನಿಕ್ ಸಿಟಿಗೆ ಭೇಟಿ ನೀಡಿ ಚಪಾತಿ ಸವಿದಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬನ ಬಹುಕಾಲದ ಡೌಟ್‌ಗೂ ಉತ್ತರ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

ಹರಿಣಗಳ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಕ್ಷೇತ್ರ ರಕ್ಷಕ ಎಂದೇ ಕರೆಸಿಕೊಳ್ಳುವ ಜಾಂಟಿ ರೋಡ್ಸ್‌ ಆಗಾಗ ಭಾರತಕ್ಕೆ ಭೇಟಿ ಕೊಡುತ್ತಲೇ ಇರುತ್ತಾರೆ. ಅದೇ ರೀತಿ ಭಾರತಕ್ಕೆ ಬಂದಾಗ ಇಲ್ಲಿನ ಸ್ಥಳೀಯ ಆಟಗಾರಗಳನ್ನು ರುಚಿ ನೋಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

ಅದೇ ರೀತಿ ಇತ್ತೀಚೆಗಷ್ಟೇ ಜಾಂಟಿ ರೋಡ್ಸ್‌, ಕೆಲಸದ ನಿಮಿತ್ತ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಇಲ್ಲಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿನ ರೆಸ್ಟೋರೆಂಟ್‌ನಲ್ಲಿ ಸ್ಥಳೀಯ ಆಹಾರದ ರುಚಿ ನೋಡಿದ್ದಾರೆ.

Tap to resize

ಹೌದು, ಜಾಂಟಿ ರೋಡ್ಸ್‌ ಇಲೆಕ್ಟ್ರಾನಿಕ್ ಸಿಟಿಯಲ್ಲಿನ ರೆಸ್ಟೋರೆಂಟ್‌ನಲ್ಲಿ ದಾಲ್ ಹಾಗೂ ಚಪಾತಿ/ರೋಟಿಯನ್ನು ಸೇವಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. 

ಇಲೆಕ್ಟ್ರಾನಿಕ್ ಸಿಟಿಯಲ್ಲಿ ಸಾಕಷ್ಟು ಅತ್ಯುತ್ತಮ ಬ್ಯುಸಿನೆಸ್ ಪಾರ್ಕ್‌ಗಳಿವೆ. ಇದೆಲ್ಲದರ ನಡುವೆ ನೀಲಾಂದ್ರಿ ರಸ್ತೆಯಲ್ಲಿರುವ ಗುರುನಾಥ್ ಶಂಕರ್ ನಾಟೇಕರ್ ಒಂದು ರೀತಿ ಊಟಕ್ಕೆ ಹಿಡೆನ್ ಜೆಮ್ ಇದ್ದಂತೆ ಎಂದು ರೋಡ್ಸ್‌ ಬೆಂಗಳೂರಿನ ಊಟವನ್ನು ಗುಣಗಾನ ಮಾಡಿದ್ದಾರೆ.

ಇನ್ನು ಇದೇ ವೇಳೆ ನೆಟ್ಟಿಗರೊಬ್ಬರು, ಸರ್ ಬಾಲ್ಯದ ದಿನಗಳಿಂದಲೂ ನಾನು ನಿಮಗೊಂದು ಪ್ರಶ್ನೆ ಕೇಳಬೇಕೆಂದಿದ್ದೆ. 1997ರಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯವು ಮಳೆಯಿಂದ ರದ್ದಾಗಿತ್ತು. ಆ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಸ್ಕ್ವೇರ್ ಕಟ್ ಬಾರಿಸಿದರು, ಅದನ್ನು ನೀವು ಕ್ಯಾಚ್ ಹಿಡಿದುಕೊಂಡ್ರಿ. ನನಗನಿಸುತ್ತೆ ಆಗ ಚೆಂಡು ನೆಲಕ್ಕೆ ತಾಗಿತ್ತು ಎಂದು. ನಿಮಗೆ ಅದು ನೆನಪಿದ್ರೆ ದಯವಿಟ್ಟು ಈಗಾಲಾದರೂ ಹೇಳಿ ಚೆಂಡು ನೆಲಕ್ಕೆ ತಾಗಿತ್ತೇ ಅಥವಾ ಇಲ್ಲವೇ ಎಂದು ಕೇಳಿದ್ದಾರೆ.

ಪವನ್ ರೈ ಎನ್ನುವ ನೆಟ್ಟಿಗ ಕೇಳಿದ ಪ್ರಶ್ನೆಯನ್ನು 'ಎಕ್ಸ್‌' ಖಾತೆಯಲ್ಲಿ ಗಮನಿಸಿದ ಜಾಂಟಿ ರೋಡ್ಸ್‌, ಚೆಂಡು ನೆಲಕ್ಕೆ ತಾಗಿರಲಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಯ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಓರ್ವ ಸೆಲಿಬ್ರಿಟಿ ಮಾಜಿ ಕ್ರಿಕೆಟಿಗನಾಗಿದ್ದರೂ, ಅಭಿಮಾನಿಯೊಬ್ಬ ಕೇಳಿದ ಅನುಮಾನಕ್ಕೆ ರೋಡ್ಸ್‌ ಉತ್ತರಿಸಿದ ರೀತಿ ಕೂಡಾ ಅವರ ಸರಳತೆಯನ್ನು ಎತ್ತಿ ತೋರಿಸುತ್ತಿದೆ.

Latest Videos

click me!