ಟೀಂ ಇಂಡಿಯಾಗಿದೆ ಬೆಸ್ಟ್ ಚಾನ್ಸ್‌; ಸೆಮೀಸ್‌ ಗೆಲ್ಲದೆಯೂ ಟಿ20 ವಿಶ್ವಕಪ್ ಫೈನಲ್‌ಗೆ ಎಂಟ್ರಿ ಕೊಡಬಹುದು ರೋಹಿತ್ ಪಡೆ..!

First Published Jun 25, 2024, 5:43 PM IST

ಬೆಂಗಳೂರು: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಸೆಮಿಫೈನಲ್ ಗೆಲ್ಲದೆಯೂ ಫೈನಲ್‌ಗೇರಲು ಅವಕಾಶವಿದೆ. ಅದು ಹೇಗೆ ಅಂತೀರಾ? ಈ ಸ್ಟೋರಿ ನೋಡಿ.
 

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಪಂದ್ಯಗಳು ರೋಚಕವಾಗಿ ಮುಕ್ತಾಯವಾಗಿದ್ದು, ಇದೀಗ ಹಾಲಿ ಚಾಂಪಿಯನ್ ಇಂಗ್ಲೆಂಡ್, ಮಾಜಿ ಚಾಂಪಿಯನ್ ಭಾರತ ಸೇರಿದಂತೆ 4 ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.
 

ಹೌದು, ಗ್ರೂಪ್‌ 1ರಿಂದ ಮಾಜಿ ಚಾಂಪಿಯನ್ ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಿದರೆ, ಗ್ರೂಪ್ 2 ವಿಭಾಗದಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮೀಸ್‌ಗೆ ಎಂಟ್ರಿ ಕೊಟ್ಟಿವೆ.
 

Latest Videos


ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೂಪರ್ 8 ಹಂತದಲ್ಲಿ ತಾನಾಡಿದ 3 ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಸೆಮೀಸ್‌ ಪ್ರವೇಶಿಸಿದೆ.
 

ಇನ್ನು ಟೀಂ ಇಂಡಿಯಾ ಇದೀಗ ಜೂನ್ 27ರ ಸಂಜೆ ಭಾರತೀಯ ಕಾಲಮಾನ 8 ಗಂಟೆಯಿಂದ ಆರಂಭವಾಗಲಿರುವ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
 

ಕಳೆದ ಬಾರಿ ಅಂದರೆ 2022ರ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ, ಇದೇ ಇಂಗ್ಲೆಂಡ್ ಎದುರು ಶರಣಾಗಿತ್ತು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ರೋಹಿತ್ ಶರ್ಮಾ ಪಡೆ ಸಜ್ಜಾಗಿದೆ.

ಇನ್ನು ಇದೆಲ್ಲದರ ನಡುವೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಸೆಮಿಫೈನಲ್‌ನಲ್ಲಿ ಗೆಲ್ಲದೆಯೇ ಫೈನಲ್‌ಗೇರುವ ಸುವರ್ಣಾವಕಾಶ ಇದೆ ಎನ್ನುವುದು ನಿಮಗೆಲ್ಲರಿಗೂ ಅಚ್ಚರಿ ಎನಿಸಿದರೂ ಸತ್ಯ.

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಜೂನ್ 27ರಂದು ಗಯಾನದಲ್ಲಿ ಎರಡನೇ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ತಿಳಿಸಿದೆ.

ಒಂದು ವೇಳೆ ಎರಡನೇ ಸೆಮಿಫೈನಲ್‌ ಪಂದ್ಯವು ಮಳೆಯಿಂದಾಗಿ ರದ್ದಾದರೇ, ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಟೂರ್ನಿಯಿಂದ ಹೊರಬೀಳಲಿದ್ದು, ಟೀಂ ಇಂಡಿಯಾ ಅನಾಯಾಸವಾಗಿ ಫೈನಲ್‌ಗೇರಲಿದೆ.

2024ರ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕೆ ಯಾವುದೇ ಮೀಸಲು ದಿನ ಲಭ್ಯವಿಲ್ಲ. ಹೀಗಾಗಿ ಮಳೆಯಿಂದ ಸೆಮಿಫೈನಲ್ ಪಂದ್ಯ ರದ್ದಾದರೇ, ಗ್ರೂಪ್ ಹಂತದ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ತಂಡವು ಫೈನಲ್‌ಗೆ ಪ್ರವೇಶ ಪಡೆಯಲಿದೆ.

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಗ್ರೂಪ್ 1 ವಿಭಾಗದಲ್ಲಿ ಮೂರನೇ ಮೂರು ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಇನ್ನೊಂದೆಡೆ ಇಂಗ್ಲೆಂಡ್ ತಂಡವು ಗ್ರೂಪ್ 2 ವಿಭಾಗದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಪಂದ್ಯ ರದ್ದಾದರೇ ಭಾರತಕ್ಕೆ ಫೈನಲ್‌ಗೇರುವ ಸುವರ್ಣಾವಕಾಶವಿದೆ.

ಈ ಕಾರಣಕ್ಕಾಗಿಯೇ ನಾವು ಹೇಳಿದ್ದು, ಸೆಮಿಫೈನಲ್‌ನಲ್ಲಿ ಭಾರತ ಗೆಲ್ಲದೆಯೇ ಫೈನಲ್ ಪ್ರವೇಶಿಸಬಹುದು ಎಂದು. ಅಂದಹಾಗೆ 2024ರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಜೂನ್ 29ರಂದು ನಡೆಯಲಿದ್ದು, ಯಾವ ಎರಡು ತಂಡಗಳು ಪ್ರಶಸ್ತಿ ಸುತ್ತ ಪ್ರವೇಶಿಸಲಿದೆ ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.

click me!