ಭುಜದ ಗಾಯದಿಂದಾಗಿ ಅವರು 2017 ರಲ್ಲಿ ಐಪಿಎಲ್ ಹತ್ತನೇ ಆವೃತ್ತಿಯನ್ನು ಮಿಸ್ ಮಾಡಿಕೊಂಡರು. ಆದಾಗ್ಯೂ, 2018 ರಲ್ಲಿ, ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ಅವರನ್ನು 11 ಕೋಟಿ ರೂ.ಗೆ ಖರೀದಿಸಿತು. 2022 ರಲ್ಲಿ, ಕೆಎಲ್ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 17 ಕೋಟಿ ರೂಪಾಯಿಗಳ ದಾಖಲೆಯ ಬೆಲೆಗೆ ಖರೀದಿಸಿತು. 2023 ರ ಋತುವಿನಲ್ಲಿ ಅವರನ್ನು LSG ಯಿಂದ ನಾಯಕನಾಗಿ ಉಳಿಸಿಕೊಳ್ಳಲಾಯಿತು. ವರದಿಯ ಪ್ರಕಾರ, ಕೆಎಲ್ ರಾಹುಲ್ ಐಪಿಎಲ್‌ನಿಂದ 82.1 ಕೋಟಿ ಗಳಿಸಿದ್ದಾರೆ.