1. 10,000 ಟೆಸ್ಟ್ ರನ್ ಬಾರಿಸಿದ ಮೊದಲ ಕ್ರಿಕೆಟಿಗ
ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಗವಾಸ್ಕರ್ ಮಾರ್ಚ್ 07, 1987ರಲ್ಲಿ ಪಾಕಿಸ್ತಾನ ಎದುರಿನ ಟೆಸ್ಟ್ ಪಂದ್ಯದಲ್ಲಿ ಗವಾಸ್ಕರ್ ಈ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಈ ದಾಖಲೆಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅಳಿಸಿ ಹಾಕಿದರು.
2. ವೆಸ್ಟ್ ಇಂಡೀಸ್ ವಿರುದ್ದವೇ 13 ಶತಕ ಬಾರಿಸಿದ್ದ ಸನ್ನಿ..!
80ರ ದಶಕದಲ್ಲಿ ವೆಸ್ಟ್ ಇಂಡೀಸ್ ತಂಡವು ಬಲಾಢ್ಯ ಬೌಲಿಂಗ್ ಪಡೆಯನ್ನು ಹೊಂದಿತ್ತು. ಆದರೆ ಸುನಿಲ್ ಗವಾಸ್ಕರ್, ತಮ್ಮ ನಿರ್ಭಯ ಬ್ಯಾಟಿಂಗ್ ಮೂಲಕ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದ್ದ ವೆಸ್ಟ್ ಇಂಡೀಸ್ ಎದುರೇ 13 ಶತಕ ಬಾರಿಸಿದ್ದರು. ಇದು ಆ ಕಾಲದಲ್ಲಿ ದಾಖಲೆಯಾಗಿತ್ತು.
3. ಚೊಚ್ಚಲ ಸರಣಿಯಲ್ಲಿಯೇ ಗರಿಷ್ಠ ರನ್
ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್, ವೆಸ್ಟ್ ಇಂಡೀಸ್ ಎದುರು 1971ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ವಿಂಡೀಸ್ ಎದುರಿನ ಚೊಚ್ಚಲ ಟೆಸ್ಟ್ ಸರಣಿಯಲ್ಲೇ 774 ರನ್ ಬಾರಿಸುವ ಮೂಲಕ ವಿಂಡೀಸ್ ಎದುರು ಟೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಲ್ಲಿಯವರೆಗೂ ಟೆಸ್ಟ್ ಪಾದಾರ್ಪಣೆ ಸರಣಿಯಲ್ಲಿ 700+ ರನ್ ಬಾರಿಸಿದ ಭಾರತದ ಮೊದಲ ಹಾಗೂ ಏಕೈಕ ಬ್ಯಾಟರ್ ಎನ್ನುವ ಹೆಗ್ಗಳಿಕೆ ಗವಾಸ್ಕರ್ ಹೆಸರಿನಲ್ಲಿಯೇ ಉಳಿದಿದೆ.
4. ಸತತ ಸೆಂಚುರಿ ಬಾರಿಸುವಲ್ಲಿ ಗವಾಸ್ಕರ್ ಪಂಟರ್..!
ಹೌದು, ಸುನಿಲ್ ಗವಾಸ್ಕರ್ ಸತತ ಸೆಂಚುರಿ ಬಾರಿಸುವಲ್ಲಿ ಸಾಕಷ್ಟು ಪ್ರಚಂಡ ಆಟಗಾರ ಎನಿಸಿದ್ದರು. ಗವಾಸ್ಕರ್ ಪೋರ್ಟ್ ಆಫ್ ಸ್ಪೇನ್ ಹಾಗೂ ಮುಂಬೈನ ವಾಂಖೇಡೆ ಮೈದಾನದಲ್ಲಿ ಸತತ 4 ಸೆಂಚುರಿ ಬಾರಿಸಿ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ.
১৯৭৯ সালের ইংল্যান্ড সফরে এমনই আরও একটি অসাধারণ কীর্তি প্রায় গড়ে ফেলেছিলেন গাভাস্কার। ওভালে ইংল্যান্ডের বিরুদ্ধে সিরিজের শেষ টেস্ট ম্যাচে চতুর্থ ইনিংসে ভারতকে ৪৩৮ রানের লক্ষ্য দেয় ইংল্যান্ড। চতুর্থ ইনিংসে অত রান তাড়া করে সেই সময় কোনও দল জেতেনি। আবার তিন বছর আগেই চারশো তিন রান তাড়া করে ওয়েস্ট ইন্ডিজের মাটিতে জয় পেয়েছিল ভারত। গাভাস্কারের দুর্দান্ত দ্বি-শতরানের দৌলতে অসম্ভবকে সম্ভব প্রায় করে ফেলেছিল ভারত। তার ২২১ রানের অসাধারণ ইনিংসের দৌলতে ৮ উইকেট খুইয়ে ৪২৯ রান তোলে ভারত। একটুর জন্য রেকর্ডের থেকে ফসকে যায় তাড়া।
5. ಕ್ಯಾಚ್‌ನಲ್ಲೂ ಸೆಂಚುರಿ ಬಾರಿಸಿದ್ದಾರೆ ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್ ಕೇವಲ ಬ್ಯಾಟಿಂದ ಮಾತ್ರವಲ್ಲದೇ ಕ್ಯಾಚ್ ಹಿಡಿಯುವ ವಿಚಾರದಲ್ಲೂ ಸಾಕಷ್ಟು ಚುರುಕಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಷೇತ್ರರಕ್ಷಕರಾಗಿ 100+ ಕ್ಯಾಚ್ ಪಡೆದ ಭಾರತದ ಮೊದಲ ಆಟಗಾರ ಎನ್ನುವ ಹಿರಿಮೆ ಗವಾಸ್ಕರ್ ಹೆಸರಿನಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಗವಾಸ್ಕರ್ 108 ಕ್ಯಾಚ್ ಹಿಡಿದಿದ್ದಾರೆ.