ಆಸ್ಟ್ರೇಲಿಯಾ ಎದುರು ಗಾಯಕ್ಕೆ ತುತ್ತಾದವರು ಟೀಂ ಇಂಡಿಯಾದ ಒಬ್ಬಿಬ್ಬರಲ್ಲ, ಬರೋಬ್ಬರಿ ಅರ್ಧ ಡಜನ್..!

First Published | Jan 14, 2021, 4:56 PM IST

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ದದ ದೀರ್ಘಕಾಲಿಕ ಸರಣಿ ಕೊನೆಯ ಘಟಕ್ಕೆ ತಲುಪಿದ್ದು, ಬ್ರಿಸ್ಬೇನ್‌ನಲ್ಲಿ 4ನೇ ಟೆಸ್ಟ್ ಪಂದ್ಯವನ್ನಾಡಲು ಟೀಂ ಇಂಡಿಯಾ ಸಿದ್ದತೆ ನಡೆಸುತ್ತಿದೆ. ಹೀಗಿರುವಾಗಲೇ ಗಾಯದ ಸಮಸ್ಯೆ ಟೀಂ ಇಂಡಿಯಾ ಕ್ರಿಕೆಟಿಗರನ್ನು ಬಿಟ್ಟೂ ಬಿಡದಂತೆ ಕಾಡಲಾರಂಭಿಸಿದೆ.
ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ವೇಳೆ ಗಾಯಗೊಂಡು ತಂಡದಿಂದ ಹೊರಬಿದ್ದವರು ಒಬ್ಬಿಬ್ಬರು ಟೀಂ ಇಂಡಿಯಾ ಆಟಗಾರರಲ್ಲ, ಬರೋಬ್ಬರಿ ಅರ್ಧ ಡಜನ್‌ಗೂ ಹೆಚ್ಚು ಮಂದಿ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಕ್ವಿಕ್ ಝಲಕ್‌ ಇಲ್ಲಿದೆ ನೋಡಿ.

1.ಮೊಹಮ್ಮದ್ ಶಮಿ
ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಶಮಿಗೆ ಮೊಣಕೈಗೆ ಚೆಂಡು ಬಡಿದು, ಸರಣಿಯಿಂದಲೇ ಹೊರಬಿದ್ದಿದ್ದರು.
Tap to resize

2. ಉಮೇಶ್ ಯಾದವ್‌
ಟೀಂ ಇಂಡಿಯಾ ಮತ್ತೋರ್ವ ವೇಗಿ ಕಾಲ್ಪ್‌ ಇಂಜುರಿಗೆ ತುತ್ತಾಗುವ ಮೂಲಕ ಎರಡನೇ ಟೆಸ್ಟ್ ಪಂದ್ಯದ ಬಳಿಕ ತಂಡದಿಂದ ಹೊರಬಿದ್ದಿದ್ದರು.
3. ಕೆ.ಎಲ್. ರಾಹುಲ್‌
ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ರಾಹುಲ್‌, ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವ ವೇಳೆ ಮೊಣಕೈ ಗಾಯಕ್ಕೆ ತುತ್ತಾಗಿ ಸರಣಿಯಿಂದಲೇ ಹೊರಬಿದ್ದಿದ್ದಾರೆ.
4. ರವೀಂದ್ರ ಜಡೇಜಾ
ತಂಡದ ಸ್ಟಾರ್ ಆಲ್ರೌಂಡರ್ ಜಡೇಜಾ ಮೂರನೇ ಟೆಸ್ಟ್ ಪಂದ್ಯದ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ಸರಣಿಯಿಂದ ಹೊರಬಿದ್ದಿದ್ದಾರೆ.
5.ಹನುಮ ವಿಹಾರಿ
ಸಿಡ್ನಿ ಟೆಸ್ಟ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿನಿಂದ ಪಾರು ಮಾಡಿದ್ದ ವಿಹಾರಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಕೊನೆಯ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
6. ಜಸ್ಪ್ರಿತ್ ಬುಮ್ರಾ
ಟೀಂ ಇಂಡಿಯಾ ಪ್ರಮುಖ ವೇಗದ ಅಸ್ತ್ರ ಬುಮ್ರಾ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದು, ಕೊನೆಯ ಟೆಸ್ಟ್‌ ಪಂದ್ಯ ಆಡೋದು ಅನುಮಾನ ಎನಿಸಿದೆ.

Latest Videos

click me!