Published : Apr 16, 2025, 12:54 PM ISTUpdated : Apr 16, 2025, 01:07 PM IST
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲಾರ್ಧ ಮುಗಿಯುತ್ತಾ ಬಂದಿದೆ. ಆದರೆ ಇನ್ನೂ ಕೆಲವು ಆಟಗಾರರು ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಈ ಪೈಕಿ ಆರ್‌ಸಿಬಿ ಮಾಜಿ ಕ್ರಿಕೆಟಿಗ ಈಗ ಬ್ಯಾಡ್ ಫಾರ್ಮ್‌ನಿಂದಾಗಿ ಟಾಕ್ ಆಫ್ ದಿ ಟೌನ್ ಎನಿಸಿಕೊಂಡಿದ್ದಾರೆ.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಗ್ಲೆನ್ ಮ್ಯಾಕ್ಸ್ ವೆಲ್ ಕಳಪೆ ಪ್ರದರ್ಶನ ಮುಂದುವರೆದಿದೆ.
27
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಕೈಬಿಟ್ಟಿತ್ತು. ಹೀಗಾಗಿ ಹರಾಜಿನಲ್ಲಿ ಮ್ಯಾಕ್ಸಿಯನ್ನು ಪಂಜಾಬ್ ಫ್ರಾಂಚೈಸಿ ಖರೀದಿಸಿತ್ತು.
37
ಐಪಿಎಲ್ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 4.2 ಕೋಟಿ ರುಪಾಯಿ ನೀಡಿ ನೀಡಿ ಆಸೀಸ್ ಮೂಲದ ಆಲ್ರೌಂಡರ್ ಮ್ಯಾಕ್ಸ್‌ವೆಲ್‌ರನ್ನು ಖರೀದಿಸಿತ್ತು. ಆದರೆ ಮ್ಯಾಕ್ಸಿ, ಈ ಬಾರಿಯ ಐಪಿಎಲ್‌ನಲ್ಲಿ ಪದೇ ಪದೇ ಬ್ಯಾಟಿಂಗ್ ವೈಪಲ್ಯ ಅನುಭವಿಸುತ್ತಿದ್ದಾರೆ.
47
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 10 ಪಂದ್ಯಗಳನ್ನಾಡಿ ಕೇವಲ 5.78ರ ಬ್ಯಾಟಿಂಗ್ ಸರಾಸರಿಯಲ್ಲಿ 52 ರನ್ ಗಳಿಸಿದ್ದರು. ಇದೀಗ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಮ್ಯಾಕ್ಸಿ 6 ಪಂದ್ಯಗಳನ್ನಾಡಿ ಕೇವಲ 41 ರನ್ ಬಾರಿಸಿ ನಿರಾಸೆ ಮೂಡಿಸಿದ್ದಾರೆ.
57
ಈ ಬಾರಿಯ ಐಪಿಎಲ್ ಟೂರ್ನಿಗೂ ಮುನ್ನ ಪ್ರೀತಿ ಝಿಂಟಾ ಸಹ ಒಡೆತನದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಿತ್ತು.
67
ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಫಾರ್ಮ್‌ನಲ್ಲಿದ್ದ ಮಾರ್ಕಸ್ ಸ್ಟೋನಿಸ್ ಹೊರಗಿಟ್ಟು ಪಂಜಾಬ್ ಕಿಂಗ್ಸ್ ಟೀಂ ಮ್ಯಾನೇಜ್‌ಮೆಂಟ್ ಮ್ಯಾಕ್ಸ್‌ವೆಲ್‌ಗೆ ಮಣೆ ಹಾಕಿತ್ತು, ಆದ್ರೆ ಮ್ಯಾಕ್ಸಿ 10 ಎಸೆತಗಳಲ್ಲಿ 7 ರನ್ ಗಳಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು.
77
ಒಟ್ಟಿನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಈಗಿನ ಆಟವನ್ನು ಗಮನಿಸಿದ ಆರ್‌ಸಿಬಿ ಫ್ಯಾನ್ಸ್, ಮ್ಯಾಕ್ಸಿಯನ್ನು ತಂಡದಿಂದ ಕೈಬಿಟ್ಟಿದ್ದು ಒಳ್ಳೆಯದ್ದೇ ಆಯ್ತು ಎಂದು ಹಿರಿಹಿರಿ ಹಿಗ್ಗುತ್ತಿದ್ದಾರೆ.