ಇವತ್ ನನ್ ಮದ್ವೆ, ಈಗಲೇ ಬಂದು ಬಿಡು, ಧೋನಿ ವಿವಾಹ ಆಮಂತ್ರಣ ಸೀಕ್ರೆಟ್ ಬಹಿರಂಗಪಡಿಸಿದ ರೈನಾ!

First Published | Dec 23, 2023, 7:11 PM IST

ಇವತ್ ನನ್ ಮದುವೆ, ಯಾರಿಗೂ ಹೇಳಬೇಡ. ತಕ್ಷಣವೇ ಹೊರಟು ಬಾ. ಇದು ಎಂಎಸ್ ಧೋನಿ ತನ್ನ ಮದುವೆಗೆ ಆತ್ಮೀಯ ಸುರೈಶ್ ರೈನಾಗೆ ನೀಡಿದ ಆಹ್ವಾನ. ಧೋನಿ ಮದುವೆ ಕುರಿತು ಇಂಟ್ರೆಸ್ಟಿಂಗ್ ಮಾಹಿತಿಯನ್ನು ರೈನಾ ಬಹಿರಂಗಪಡಿಸಿದ್ದಾರೆ.
 

ಎಂಎಸ್ ಧೋನಿ ಇದೀಗ ಐಪಿಎಲ್ ಪಂದ್ಯಕ್ಕೆ ತಯಾರಿ ಆರಂಭಿಸಿದ್ದಾರೆ.  ಇತ್ತ ಅಭಿಮಾನಿಗಳು ಕಾತರದೊಂಡಿದ್ದಾರೆ. ಇದರ ನಡುವೆ ಆಪ್ತ ಸುರೇಶ್ ರೈನಾ ಕೆಲ ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗಪಡಿಸಿದ್ದಾರೆ. 

ಎಂಎಸ್ ಧೋನಿ ಜುಲೈ 4 , 2010ರಲ್ಲಿ ಸಾಕ್ಷಿಯನ್ನು ವಿವಾಹವಾಗಿದ್ದಾರೆ. ಆದರೆ ಧೋನಿ ಮದುವೆ ಬಾರಿ ಸಂಚಲನ ಸೃಷ್ಟಿಸಿತ್ತು. ಯಶಸ್ಸಿನ ಅಲೆಯಲ್ಲಿದ್ದ ಧೋನಿ ಸದ್ದಿಲ್ಲದೇ ಮದುವೆಯಾಗಿದ್ದರು.

Tap to resize

ಧೋನಿ ಮದುವೆ ವಿಚಾರ ಟೀಂ ಇಂಡಿಯಾ ಸಹ ಆಟಗಾರರಿಗೂ ತಿಳಿದಿರಲಿಲ್ಲ. ಧೋನಿ ಎಲ್ಲವನ್ನೂ ಗುಟ್ಟಾಗಿ ಇಟ್ಟಿದ್ದರು. ಮದುವೆ ದಿನ ಆಪ್ತ ಸುರೇಶ್ ರೈನಾಗೆ ಕರೆ ಮಾಡಿ ಆಹ್ವಾನ ನೀಡಿದ್ದರು. ಈ ಕುರಿತು ರೈನಾ ಹೇಳಿದ್ದಾರೆ.

ನನಗೆ ಧೋನಿ ಕರೆ ಬಂದಿತ್ತು. ಎಲ್ಲಿದ್ದಿ ಎಂದು ಧೋನಿ ಕೇಳಿದ್ದರು. ನಾನು ಲಖನೌದಲ್ಲಿದ್ದೇನೆ ಎಂದು ಧೋನಿ ಉತ್ತರಿಸಿದ್ದೆ. ಮರು ಮಾತಿನಲ್ಲಿ ನಾನಿಂದು ಮದುವೆಯಾಗುತ್ತಿದ್ದೇನೆ ಎಂದುಬಿಟ್ಟರು.

ಡೆಹ್ರಡೂನ್‌ನಲ್ಲಿ ಮದುವೆ. ಯಾರಿಗೂ ಹೇಳಬೇಡ, ತಕ್ಷಣವೇ ಹೊರಟು ಬಾ, ನಾನು ಕಾಯುತ್ತಿರುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ ಎಂದು ಸುರೇಶ್ ರೈನಾ ಹೇಳಿದ್ದಾರೆ.

ಧೋನಿ ಮಾತುಗಳನ್ನು ನಿಜಕ್ಕೂ ನಂಬಲು ಕಷ್ಟವಾಗಿತ್ತು. ಕಾರಣ ಮದುವೆ ದಿನ ಹೊರಟು ಬಾ ಎಂದರೆ ನೀವೇ ಯೋಚನೆ ಮಾಡಿ. ನಾನು ತಡಮಾಡದೇ ತಕ್ಷಣವೇ ಹೊರಟೆ. ನಾರ್ಮಲ್ ಡ್ರೆಸ್‌ನಲ್ಲೇ ಹೊರಟು ಹೋಗಿದ್ದೆ ಎಂದಿದ್ದಾರೆ.

ಧೋನಿ ಮದುವೆಯಲ್ಲಿ ನಾನು ಧೋನಿ ಡ್ರೆಸ್ ಹಾಕಿದ್ದೆ. ಕಾರಣ ನಾನು ದಿಢೀರ್ ಹೊರಟ ಕಾರಣ ನಾರ್ಮಲ್ ಡ್ರೆಸ್‌ನಲ್ಲಿದ್ದೆ ಎಂದು ಸುರೇಶ್ ರೈನಾ, ಧೋನಿ ಮದುವೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಮದುವೆಯಾದ ಮರುವರ್ಷವೇ ಧೋನಿ 2011ರ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿದ್ದರು. 2015ರಲ್ಲಿ ಧೋನಿ ಹಾಗೂ ಸಾಕ್ಷಿ ಬದುಕಿಗೆ ಝೀವಾ ಧೋನಿ ಆಗಮನವಾಗಿದ್ದಳು.

Latest Videos

click me!