ದುಬಾರಿ ವೇಗಿ ಮಿಚೆಲ್ ಸ್ಟಾರ್ಕ್‌ ಪತ್ನಿ ಅಲೀಸಾ ಹೀಲಿ ಗರ್ಭಿಣಿನಾ? ಐಪಿಎಲ್‌ನಲ್ಲಿ ಕೆಕೆಆರ್‌ಗೆ ಕೈ ಕೊಡ್ತಾರಾ ಆಸೀಸ್ ವೇಗಿ?

First Published | Dec 23, 2023, 4:59 PM IST

ಬೆಂಗಳೂರು: 2024ರ ಇಂಡಿಯನ್‌ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯಾದ ಎಡಗೈ ಮಾರಕ ವೇಗಿ ಯಾರು ಕಂಡು ಕೇಳರಿಯದ ಮೊತ್ತಕ್ಕೆ ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಪಾಲಾಗಿದೆ. ಹೀಗಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ಕ್‌ ಪತ್ನಿ ಪ್ರಗ್ನೆಂಟ್ ಆಗಿದ್ದು, ಐಪಿಎಲ್ ಆಡೋದು ಅನುಮಾನ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿಯ ಸತ್ಯಾಸತ್ಯತೆಯ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ.  
 

ದುಬೈನಲ್ಲಿ ಡಿಸೆಂಬರ್ 19ರಂದು ನಡೆದ 2024ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌ ದಾಖಲೆಯ ಮೊತ್ತಕ್ಕೆ ಕೋಲ್ಕತಾ ನೈಟ್‌ರೈಡರ್ಸ್‌ ತಂಡದ ಪಾಲಾಗಿದ್ದಾರೆ.

ಐಪಿಎಲ್‌ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ಫ್ರಾಂಚೈಸಿಯು 24.75 ಕೋಟಿ ರುಪಾಯಿಗೆ ಮಿಚೆಲ್‌ ಸ್ಟಾರ್ಕ್‌ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಈ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನ್ನುವ ಹಿರಿಮೆಗೆ ಸ್ಟಾರ್ಕ್‌ ಪಾತ್ರರಾಗಿದ್ದಾರೆ.

Tap to resize

ಈ ಹಿಂದೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಸ್ಟಾರ್ಕ್‌, ಇದೀಗ ಕೆಕೆಆರ್ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಆದರೆ ಕೆಕೆಆರ್ ತಂಡ ಕೂಡಿಕೊಂಡ ಬೆನ್ನಲ್ಲೇ ಸ್ಟಾರ್ಕ್‌ ಕುರಿತಾಗಿ ಒಂದು ಸುದ್ದಿ ವೈರಲ್ ಆಗಿದೆ.

ಮಿಚೆಲ್ ಸ್ಟಾರ್ಕ್‌ ಪತ್ನಿ ಅಲಿಸಾ ಹೀಲಿ 5 ತಿಂಗಳ ಗರ್ಭಿಣಿಯಾಗಿದ್ದು, ಮುಂಬರುವ ಐಪಿಎಲ್ ಟೂರ್ನಿಯ ವೇಳೆಗೆ ಮಗುವಿಗೆ ಜನ್ಮ ನೀಡಲಿದ್ದಾರೆ. ಹೀಗಾಗಿ ಸ್ಟಾರ್ಕ್‌ ಐಪಿಎಲ್‌ ಟೂರ್ನಿಯಿಂದ ಬ್ರೇಕ್ ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಸಾಕಷ್ಟು ಸಂಚಲನ ಮೂಡಿಸಿತ್ತು.

ಆದರೆ ಸದ್ಯ ಇರುವ ಮಾಹಿತಿಯ ಪ್ರಕಾರ ಅಲಿಸಾ ಹೀಲಿ 5 ತಿಂಗಳು ಪ್ರಗ್ನೆಂಟ್‌ ಎನ್ನುವ ಸುದ್ದಿಯು ಸುಳ್ಳು. ಸದ್ಯ ಅಲೀಸಾ ಹೀಲಿ ನೇತೃತ್ವದ ಆಸ್ಟ್ರೇಲಿಯಾ ತಂಡವು ಭಾರತ ಪ್ರವಾಸದಲ್ಲಿದ್ದು, ಏಕೈಕ ಟೆಸ್ಟ್ ಸರಣಿಯನ್ನಾಡುತ್ತಿದೆ. 

ಭಾರತ ಎದುರು ಮೊದಲ ಇನಿಂಗ್ಸ್‌ನಲ್ಲಿ ಅಲೀಸಾ ಹೀಲಿ 38 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಒಟ್ಟಿನಲ್ಲಿ ಹೀಲಿ ಪ್ರಗ್ನೆಂಟ್‌ ಅಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

Latest Videos

click me!