ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ, ಇದೀಗ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ಭಾರತ ತಂಡ ಕೂಡಿಕೊಂಡ ಮೇಲೆ ವೈಭವ್ ಸೂರ್ಯವಂಶಿಗೆ ಒಂದು ಮ್ಯಾಚ್‌ಗೆ ಸಿಗುವ ಸಂಬಳವೆಷ್ಟು ನೋಡೋಣ ಬನ್ನಿ.
ಭಾರತ ತಂಡಕ್ಕೆ ಆಯ್ಕೆಯಾದ ಅತಿಕಿರಿಯ ಪುರುಷ ಕ್ರಿಕೆಟಿಗ ವೈಭವ್ ಸೂರ್ಯವಂಶಿ
ಮುಂಬರುವ ಜೂನ್ 26ರಿಂದ ಆರಂಭವಾಗಲಿರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಇದೀಗ 15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಆಯ್ಕೆಯಾದ ಅತಿಕಿರಿಯ ಭಾರತೀಯ ಕ್ರಿಕೆಟಿಗ ಎನ್ನುವ ಹಿರಿಮೆಗೆ ವೈಭವ್ ಪಾತ್ರರಾಗಿದ್ದಾರೆ.
26
ವೈಭವ್ ಸೂರ್ಯವಂಶಿಗೆ ಸಿಗುವ ಸಂಬಳ ಎಷ್ಟು?
19ನೇ ಸೀಸನ್ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಈ ಯುವ ಬ್ಯಾಟರ್, ಈಗ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಸಿದ್ಧರಾಗಿದ್ದಾರೆ. ಇನ್ನೂ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಡೆಯದ ವೈಭವ್ ಸೂರ್ಯವಂಶಿಗೆ ಇದೀಗ ಭಾರತ ಸೀನಿಯರ್ಸ್ ತಂಡದಲ್ಲಿ ಆಡಿದರೆ ಎಷ್ಟು ಸಂಬಳ ಸಿಗುತ್ತದೆ ಎನ್ನುವ ಕುತೂಹಲ ಇದೀಗ ಜೋರಾಗಿದೆ.
36
ಮ್ಯಾಚ್ ಫೀ ಬಗ್ಗೆ ಬಿಸಿಸಿಐ ನಿಯಮವೇನು?
ಸದ್ಯ ಬಿಸಿಸಿಐ ನಿಯಮಗಳ ಪ್ರಕಾರ, ಭಾರತ ತಂಡದ ಪರ ಟಿ20 ಪಂದ್ಯವೊಂದಕ್ಕೆ ಆಡುವ ಆಟಗಾರನಿಗೆ ಬರೋಬ್ಬರಿ 3 ಲಕ್ಷ ರೂಪಾಯಿ ಮ್ಯಾಚ್ ಫೀ ಸಿಗಲಿದೆ. ಭವಿಷ್ಯದಲ್ಲಿ ವೈಭವ್ ಸೂರ್ಯವಂಶಿ ಭಾರತದ ಏಕದಿನ ತಂಡದಲ್ಲಿ ಸ್ಥಾನ ಪಡೆದರೆ, ಅವರ ಮ್ಯಾಚ್ ಫೀ ಮತ್ತಷ್ಟು ಹೆಚ್ಚಲಿದೆ.
ಬಿಸಿಸಿಐ ನಿಯಮದಂತೆ, ಪ್ರತಿ ಏಕದಿನ ಪಂದ್ಯಕ್ಕೆ ಆಟಗಾರರು 6 ಲಕ್ಷ ರೂಪಾಯಿ ಪಡೆಯುತ್ತಾರೆ. ಇದು ಟಿ20ಗೆ ಹೋಲಿಸಿದರೆ ದುಪ್ಪಟ್ಟು ಆದಾಯವಾಗಿದೆ. ಭಾರತೀಯ ಕ್ರಿಕೆಟ್‌ನ ಅತ್ಯಂತ ಪ್ರತಿಷ್ಠೆಯ ಸ್ವರೂಪ ಟೆಸ್ಟ್ ಕ್ರಿಕೆಟ್. ಈ ಮಾದರಿಯಲ್ಲಿ ಆಡುವ ಆಟಗಾರರಿಗೆ ಅತಿ ಹೆಚ್ಚು ಮ್ಯಾಚ್ ಫೀ ಸಿಗುತ್ತದೆ. ಸದ್ಯ ಭಾರತ ಟೆಸ್ಟ್ ತಂಡದ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 15 ಲಕ್ಷ ರೂಪಾಯಿ ನೀಡಲಾಗುತ್ತಿದೆ. ವೈಭವ್ ಟೆಸ್ಟ್ ತಂಡಕ್ಕೆ ಆಯ್ಕೆಯಾದರೆ, ಅವರ ಆದಾಯ ಟಿ20ಗೆ ಹೋಲಿಸಿದರೆ ಐದು ಪಟ್ಟು ಹೆಚ್ಚಾಗಲಿದೆ.
56
ವೈಭವ್ ಸಂಬಳ ಬರೋಬ್ಬರಿ 15 ಪಟ್ಟು ಹೆಚ್ಚಳ
ವೈಭವ್ ಸೂರ್ಯವಂಶಿ ಇತ್ತೀಚಿನವರೆಗೂ ಭಾರತದ ಅಂಡರ್-19 ತಂಡದಲ್ಲಿ ಆಡುತ್ತಿದ್ದರು. ಆ ಮಟ್ಟದಲ್ಲಿ ಆಟಗಾರರಿಗೆ ಬಿಸಿಸಿಐ ದಿನಕ್ಕೆ ಸುಮಾರು 20,000 ರೂಪಾಯಿ ಭತ್ಯೆ ನೀಡುತ್ತದೆ. ಈಗ ಸೀನಿಯರ್ ತಂಡಕ್ಕೆ ಬಂದಿದ್ದರಿಂದ, ಅವರ ಆದಾಯ ಒಂದೇ ಬಾರಿಗೆ ಸುಮಾರು 15 ಪಟ್ಟು ಹೆಚ್ಚಾಗಿದೆ.
66
ಭಾರತ ಸೀನಿಯರ್ಸ್ ತಂಡದಲ್ಲೂ ಮಿಂಚಲು ರೆಡಿಯಾದ ವೈಭವ್ ಸೂರ್ಯವಂಶಿ
ಚಿಕ್ಕ ವಯಸ್ಸಿನಲ್ಲೇ ಐಪಿಎಲ್‌ನಲ್ಲಿ ಪ್ರತಿಭೆ ಮೆರೆದ ವೈಭವ್, ಈಗ ಭಾರತ ತಂಡದಲ್ಲಿ ಸ್ಥಾನ ಗಳಿಸಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ತಂಡದಲ್ಲಿ ಖಾಯಂ ಸ್ಥಾನ ಗಳಿಸಿ ಎಲ್ಲಾ ಮಾದರಿಗಳಲ್ಲಿ ಮಿಂಚುವುದೇ ಅವರ ಮುಂದಿನ ಗುರಿಯಾಗಿದೆ. ಭಾರತ ಸೀನಿಯರ್ಸ್ ತಂಡದಲ್ಲೂ ವೈಭವ್ ಯಶಸ್ವಿಯಾಗಲಿ ಎನ್ನುವುದು ಕೋಟ್ಯಾಂತರ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಹಾರೈಕೆಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.