ಆರ್‌ಸಿಬಿ ಪ್ಲೇಆಫ್ ಲಗ್ಗೆ ಇಟ್ಟ ಡೇಟ್ 18, ಈ ಸಲ ಮಿಸ್ಸಾಗಲ್ಲ ಟ್ರೋಫಿ ಎನ್ನುತ್ತಿದೆ ಸಂಖ್ಯಾಶಾಸ್ತ್ರ

Published : May 19, 2025, 12:23 AM IST

18ನೇ ಆವೃತ್ತಿ, ಕೊಹ್ಲಿ ಜರ್ಸಿ 18 ಸೇರಿದಂತೆ ಎಲ್ಲವೂ 18ರಲ್ಲಿ ಮುಳುಗಿ ಹೋಗಿದೆ. ನ್ಯುಮರಾಲಜಿ ಪ್ರಕಾರ 18 ಸಂಖ್ಯೆ ಆರ್‌ಸಿಬಿ ಲಕ್ ಕೊಡಲಿದೆ. ವಿಶೇಷ ಅಂದರೆ ಇದೀಗ ಆರ್‌ಸಿಬಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿದ ದಿನಾಂಕವೂ 18. 

PREV
16
ಆರ್‌ಸಿಬಿ ಪ್ಲೇಆಫ್ ಲಗ್ಗೆ ಇಟ್ಟ ಡೇಟ್ 18, ಈ ಸಲ ಮಿಸ್ಸಾಗಲ್ಲ ಟ್ರೋಫಿ ಎನ್ನುತ್ತಿದೆ ಸಂಖ್ಯಾಶಾಸ್ತ್ರ

ಐಪಿಎಲ್ 2025 ಟೂರ್ನಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.  ಆರ್‌ಸಿಬಿ ಪ್ರದರ್ಶನವೂ ಉತ್ತಮವಾಗಿದೆ. ಹೀಗಾಗಿ ಅಭಿಮಾನಿಗಳ ಆತ್ಮವಿಶ್ವಾಸವೂ ಹೆಚ್ಚಾಗಿದೆ. ಇದೀಗ ಆರ್‌ಸಿಬಿ ಪ್ರದರ್ಶನ ಜೊತೆಗೆ ಲಕ್ ಕೂಡ ಕೈಹಿಡಿದಿದೆ. ಕಾರಣ ಸಂಖ್ಯಾಶಾಸ್ತ್ರ ಪ್ರಕಾರ ಆರ್‌ಸಿಬಿ ಲಕ್ಕಿ ನಂಬರ್ 18. ಇದೀಗ ಆರ್‌ಸಿಬಿಯ ಎಲ್ಲಾ ಪ್ರಮುಖ ಘಟ್ಟ 18ರಲ್ಲೇ ಅಡಕವಾಗುತ್ತಿದೆ. ಇದೀಗ ಪ್ಲೇ ಆಫ್ ಸ್ಥಾನಕ್ಕೇರಿದ ದಿನಾಂಕವೂ ಮೇ.18. 

26

ಐಪಿಎಲ್ 18ನೇ ಆವೃತ್ತಿಯಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಅನ್ನೋ ಮಾತುಗಳು ಬಲವಾಗುತ್ತಿದೆ. ಕಾರಣ ಸಂಖ್ಯೆ 18.  ವಿರಾಟ್ ಕೊಹ್ಲಿಯ ಜರ್ಸಿ ಸಂಖ್ಯೆ 18. ಐಪಿಎಲ್ ಫೈನಲ್ ದಿನಾಂಕ ಜೂನ್ 3. ಈ ಸಂಖ್ಯೆ ಒಟ್ಟುಗೂಡಿಸಿದರೆ 18. ಇದೀಗ ಮೇ.18ರಂದು ಆರ್‌ಸಿಬಿ ಐಪಿಎಲ್ ಪ್ಲೇಆಫ್ ಸ್ಥಾನ ಖಚಿತಪಡಿಸಿದೆ. ಮೇ.17ರಂದು ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಲೆಕ್ಕಾಚಾರ ಬದಲಾಗಿತ್ತು. ಆದರೆ ಮೇ 18ರ ಡೆಲ್ಲಿ ಹಾಗೂ ಗುಜರಾತ್ ನಡುವಿನ ಪಂದ್ಯದ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಆರ್‌ಸಿಬಿ ಪ್ಲೇ ಆಫ್ ಸ್ಥಾನ ಖಚಿತಗೊಂಡಿದೆ. ಮೇ.17ರ ಬದಲು ಆರ್‌ಸಿಬಿ ಪ್ಲೇ ಆಫ್ ಸ್ಥಾನವನ್ನು ದಿನಾಂಕ 18ಕ್ಕೆ ಖಚಿತಪಡಿಸಿಕೊಂಡಿದೆ.

36

 

ಆರ್‌ಸಿಬಿಗೆ ಟ್ರೋಫಿ ಎನ್ನುತ್ತಿದೆ ಸಂಖ್ಯಾಶಾಸ್ತ್ರ

ಆರ್‌ಸಿಬಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿದ ದಿನಾಂಕ: ಮೇ. 18

ಐಪಿಎಲ್ ಫೈನಲ್ ದಿನಾಂಕ:  03-06-2025
6+3+2+0+2+5 = 18

ವಿರಾಟ್ ಕೊಹ್ಲಿ ಜರ್ಸಿ ಸಂಖ್ಯೆ= 18

ಐಪಿಎಲ್ 2025  = 18ನೇ ಆವೃತ್ತಿ

ಆರ್‌ಸಿಬಿಯ ಮೊದಲ ಇಂಗ್ಲೀಷ್ ಅಕ್ಷರ R = 18ನೇ ಅಕ್ಷರ
 

46

 ಆರ್‌ಸಿಬಿ ಪ್ರದರ್ಶನ, ಲಕ್, ಅಭಿಮಾನಿಗಳ ಹಾರೈಕೆ ಎಲ್ಲವೂ ತಂಡದ ಜೊತೆಗಿದೆ. ಹೀಗಾಗಿ 18ನೇ ಆವತ್ತಿಯಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲುವ ಸಾಧ್ಯತೆಗಳು ದಟ್ಟವಾಗುತ್ತಿದೆ. 18ರ ಶಕ್ತಿ ಇದೀಗ ತಂಡದ ಆತ್ಮವಿಶ್ವಾಸ ಹೆಚ್ಚಿಸಲಿದೆ. ಐಪಿಎಲ್ ಇತಿಹಾಸದಲ್ಲೇ ಆರ್‌ಸಿಬಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ. 

56

ಆರ್‌ಸಿಬಿಗೆ ಲೀಗ್ ಹಂತದಲ್ಲಿದೆ ಇನ್ನೆರಡು ಪಂದ್ಯ
ಲೀಗ್ ಹಂತದಲ್ಲಿ ಆರ್‌ಸಿಬಿಗೆ ಇನ್ನೆರಡು ಪಂದ್ಯ ಬಾಕಿ ಇದೆ. ಮೇ.23ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಬೆಂಗಳೂರಿನಲ್ಲಿ ಪಂದ್ಯ ಆಡಲಿದೆ. ಈ ಪಂದ್ಯಕ್ಕೂ ಮಳೆ ಭೀತಿ ಕಾಡುತ್ತಿದೆ. ಇನ್ನು ಲೀಗ್‌ನ ಕೊನೆಯ ಪಂದ್ಯ ಮೇ.27 ರಂದು ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ಲಖೌನದಲ್ಲಿ ಪಂದ್ಯ ಆಡಲಿದೆ. 

66

ಸದ್ಯ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಗುಜರಾತ್ ಟೈಟಾನ್ಸ್ ವಿರಾಜಮಾನವಾಗಿದೆ. ಪಂಜಾಬ್ ಕಿಂಗ್ಸ್ ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳು ಐಪಿಎಲ್ 2025 ಪ್ಲೇ ಆಫ್ ಸ್ಥಾನ ಖಚಿತಪಡಿಸಿದೆ. ಇನ್ನೊಂದು ಸ್ಥಾನಕ್ಕೆ ಮೂರು ತಂಡಗಳು ಹೋರಾಟ ನಡೆಸಲಿದೆ. 

Read more Photos on
click me!

Recommended Stories