ಅಧಿಕೃತವಾಗಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿದ ಆರ್‌ಸಿಬಿ, ಒಟ್ಟು 3 ತಂಡಕ್ಕೆ ಕ್ವಾಲಿಫೈ ಟಿಕೆಟ್

Published : May 18, 2025, 11:44 PM ISTUpdated : May 18, 2025, 11:46 PM IST

ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಡಬಲ್ ಆಗಿದೆ. ಇದೀಗ ಆರ್‌ಸಿಬಿ 2025ರ ಐಪಿಎಲ್ ಟೂರ್ನಿಯಲ್ಲಿ ಅಧಿಕೃತವಾಗಿ ಪ್ಲೇಆಫ್ ಸ್ಥಾನಕ್ಕೇರಿದೆ. ಇದರೊಂದಿಗೆ 3 ತಂಡಗಳ ಪ್ಲೇ ಸ್ಥಾನ ಖಚಿತಗೊಂಡಿದೆ. ಇನ್ನೊಂದು ಸ್ಥಾನಕ್ಕೆ ಪೈಪೋಟಿ ಜೋರಾಗಿದೆ.

PREV
15
ಅಧಿಕೃತವಾಗಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿದ ಆರ್‌ಸಿಬಿ, ಒಟ್ಟು 3 ತಂಡಕ್ಕೆ ಕ್ವಾಲಿಫೈ ಟಿಕೆಟ್

 ಆರ್‌ಸಿಬಿ-ಕೆಕೆಆರ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದ ಕಾರಣ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ಇದೀಗ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಕಾರಣ ಆರ್‌ಸಿಬಿ ಇದೀಗ ಅಧಿಕೃತಾಗಿ 2025ರ ಪ್ಲೇಆಫ್ ಸ್ಥಾನಕ್ಕೇರಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ಫಲಿತಾಂಶ ಹೊರಬೀಳುತ್ತಿದ್ದಂತೆ ಪ್ಲೇ ಆಫ್ ಸ್ಥಾನದ ಬಹುಚೇಕ ಚಿತ್ರಣ ಹೊರಬಿದ್ದಿದೆ. ಇತ್ತ ಆರ್‌ಸಿಬಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. 

25

3 ತಂಡಗಳ ಪ್ಲೇ ಆಫ್ ಸ್ಥಾನ ಖಚಿತ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳುವ ಜೊತೆಗೆ ಇತರ ಎರಡು ತಂಡಗಳು ಪ್ಲೇ ಆಫ್ ಸ್ಥಾನ ಖಚಿತಪಡಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 10 ವಿಕೆಟ್ ಭರ್ಜರಿ ಗೆಲುವು ಕಂಡ ಗುಜರಾತ್ ಟೈಟಾನ್ಸ್ ಪ್ಲೇ ಆಫ್ ಸ್ಥಾನ ಖಚಿತಪಡಿಸಿದೆ. ಅಂಕಪಟ್ಟಿಯಲ್ಲಿ ಮೊದಲ ತಂಡವಾಗಿ ಹೊರಹೊಮ್ಮಿದೆ. ಗುಜರಾತ್ ಟೈಟಾನ್ಸ್ ಜೊತೆಗೆ ಪಂಜಾಬ್ ಕಿಂಗ್ಸ್ ಕೂಡ ಐಪಿಎಲ್ 2025 ಪ್ಲೇ ಆಫ್ ಸ್ಥಾನ ಖಚಿತಪಡಿಸಿದೆ.

35

 ಒಂದು ಸ್ಥಾನಕ್ಕೆ 3 ತಂಡದ ಹೋರಾಟ
ಪ್ಲೇ ಆಫ್ ಸ್ಥಾನದಲ್ಲಿ ಮೂರು ಸ್ಥಾನ ಈಗಾಗಲೇ ಖಚಿತಗೊಂಡಿದೆ.ಇನ್ನುಳಿದ ಒಂದು ಸ್ಥಾನಕ್ಕೆ ಮೂರು ತಂಡಗಳು ಹೋರಾಟ ನಡೆಸಲಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಇದೀಗ ಪ್ಲೇ ಆಫ್ ಸ್ಥಾನಕ್ಕೆ ಹೋರಾಟ ನಡೆಸಲಿದೆ. ಇದರಲ್ಲಿ ಒಂದು ತಂಡಕ್ಕೆ ಅವಕಾಶ ಸಿಗಲಿದೆ. ಸದ್ಯ ಪ್ಲೇ ಆಫ್ ಸ್ಥಾನಕ್ಕೇರಿದ 3 ತಂಡಗಳಿಗೆ ತಲಾ ಎರಡೆರಡು ಪಂದ್ಯಗಳು ಬಾಕಿ ಇದೆ. ಹೀಗಾಗಿ ಅಂಕಪಟ್ಟಿಯಲ್ಲಿ ಸ್ಥಾನ ಪಲ್ಲಟವಾಗಬಹುದು. ಆದರೆ ಪ್ಲೇ ಆಫ್ ಸ್ಥಾನ ಖಚಿತಗೊಂಡಿದೆ.

45

ಐಪಿಎಲ್ ಟೂರ್ನಿಯಂದ ಹೊರಬಿದ್ದ ತಂಡಗಳು
ಈ ಬಾರಿಯ ಐಪಿಎಲ್ ಟೂರ್ನಿಯಿಂದ ನಾಲ್ಕು ತಂಡಗಳು ಅಧಿಕೃತವಾಗಿ ಹೊರಬಿದ್ದಿದೆ. ಇನ್ನೇನಿದ್ದರು ಈ ತಂಡಗಳಿಗೆ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳುವ ಮಾರ್ಗ ಒಂದೇ ಮುಂದಿದೆ.  ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿ ಸಿಎಸ್‌ಕೆ ತಳ್ಳಲ್ಪಟ್ಟಿದೆ. 12 ಪಂದ್ಯಗಳಿಂದ 3 ಗೆಲುವು ಸಾಧಿಸಿ ಕೇವಲ 6 ಅಂಕಗಳಿಸಿದೆ. 

55

ಆರ್‌ಸಿಬಿ ಮೇಲೆ ನಿರೀಕ್ಷೆ ಡಬಲ್
ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪ್ರದರ್ಶನ ಅದ್ಭುತವಾಗಿದೆ. ಕೆಲ ಆವೃತ್ತಿಗಳಲ್ಲಿ ಈ ರೀತಿಯ ಪ್ರದರ್ಶನವನ್ನು ಆರ‌್‌ಸಿಬಿ ನೀಡಿದೆ.ಆಧರೆ ಈ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹೆಚ್ಚು ಮಾಡಿದೆ. ಇದೀಗ ಇನ್ನೆರಡು ಪಂದ್ಯ ಬಾಕಿ ಇರುವಂತೆ ಆರ್‌ಸಿಬಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಇದೀಗ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಖಚಿತಪಡಿಸಲು ಆರ್‌ಸಿಬಿ ಪ್ರಯತ್ನಿಸಲಿದೆ. 

Read more Photos on
click me!

Recommended Stories