ಭರ್ಜರಿ ಸೆಂಚುರಿ ಜೊತೆಗೆ ವಿಶ್ವದಾಖಲೆ, ಕೆಎಲ್ ರಾಹುಲ್ ಅಬ್ಬರಕ್ಕೆ ಕೊಹ್ಲಿ ರೆಕಾರ್ಡ್ ಬ್ರೇಕ್

Published : May 18, 2025, 11:14 PM IST

ಐಪಿಎಲ್ ಇತಿಹಾಸದಲ್ಲಿ ಯಾರೂ ಸಾಧಿಸದ ಅಪರೂಪದ ದಾಖಲೆಯನ್ನು ದೆಹಲಿ ಕ್ಯಾಪಿಟಲ್ಸ್ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ತಮ್ಮದಾಗಿಸಿಕೊಂಡಿದ್ದಾರೆ. ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ಜೊತೆಗೆ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. 

PREV
16
ಭರ್ಜರಿ ಸೆಂಚುರಿ ಜೊತೆಗೆ ವಿಶ್ವದಾಖಲೆ, ಕೆಎಲ್ ರಾಹುಲ್ ಅಬ್ಬರಕ್ಕೆ ಕೊಹ್ಲಿ ರೆಕಾರ್ಡ್ ಬ್ರೇಕ್
ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ದಾಖಲೆ ಮುರಿದರು

ಐಪಿಎಲ್ 2025ರಲ್ಲಿ ದೆಹಲಿ ಕ್ಯಾಪಿಟಲ್ಸ್ - ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಶತಕ ಬಾರಿಸಿದರು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಅಪರೂಪದ ಮೈಲಿಗಲ್ಲು ಸಾಧಿಸಿದರು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಕೆಎಲ್ ರಾಹುಲ್ ಅಬ್ಬರಕ್ಕೆ ಹಲವು ದಾಖಲೆ ನಿರ್ಮಾಣವಾಗಿದೆ. 

26
ಕೆಎಲ್ ರಾಹುಲ್

ಮೇ 18 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಐಪಿಎಲ್ 2025ರ 60ನೇ ಪಂದ್ಯದಲ್ಲಿ ದೆಹಲಿ-ಗುಜರಾತ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ 8000 ಟಿ20 ರನ್ ಪೂರ್ಣಗೊಳಿಸಿದರು. ಇದರೊಂದಿಗೆ ಅತಿ ವೇಗವಾಗಿ 8 ಸಾವಿರ ರನ್ ಪೂರ್ಣಗೊಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಷ್ಟೇ ಅಲ್ಲ ಅತೀ ವೇಗದಲ್ಲಿ 8000 ರನ್ ಪೂರೈಸಿದ ವಿಶ್ವ ಕ್ರಿಕೆಟಿಗ ದಾಖಲೆ ಬರೆದಿದ್ದಾರೆ. 

36
ಕೆಎಲ್ ರಾಹುಲ್

33 ವರ್ಷದ ಕೆಎಲ್ ರಾಹುಲ್ ಈ ಸಾಧನೆಯನ್ನು ಕೇವಲ 224 ಇನ್ನಿಂಗ್ಸ್‌ಗಳಲ್ಲಿ ಸಾಧಿಸಿದ್ದಾರೆ. ಈ ಹಿಂದೆ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು, ಅವರು ಇದನ್ನು ಸಾಧಿಸಲು 243 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್.. ಕೊಹ್ಲಿಯನ್ನು ಹಿಂದಿಕ್ಕಿ ಟಿ20ಯಲ್ಲಿ 8000 ರನ್ ಗಳಿಸಿದ ಅತಿ ವೇಗದ ಭಾರತೀಯ ಎನಿಸಿಕೊಂಡರು. 

46
ಟಿ20ಯಲ್ಲಿ 8000 ರನ್

ಟಿ20ಯಲ್ಲಿ 8000 ರನ್‌ಗಳನ್ನು ಅತಿ ವೇಗವಾಗಿ ಗಳಿಸಿದ ಆಟಗಾರರು: 1. ಕ್ರಿಸ್ ಗೇಲ್ - 213 ಇನ್ನಿಂಗ್ಸ್ 2. ಬಾಬರ್ ಆಜಮ್ - 218 ಇನ್ನಿಂಗ್ಸ್ 3. ಕೆಎಲ್ ರಾಹುಲ್ - 224 ಇನ್ನಿಂಗ್ಸ್ 4. ವಿರಾಟ್ ಕೊಹ್ಲಿ - 243 ಇನ್ನಿಂಗ್ಸ್ 5. ಮೊಹಮ್ಮದ್ ರಿಜ್ವಾನ್ - 244 ಇನ್ನಿಂಗ್ಸ್

56
ಕೆಎಲ್ ರಾಹುಲ್

ಈ ಪಂದ್ಯಕ್ಕೂ ಮುನ್ನ ಕೆಎಲ್ ರಾಹುಲ್‌ಗೆ 8000 ರನ್‌ಗಳ ಗಡಿ ದಾಟಲು 33 ರನ್‌ಗಳ ಅಗತ್ಯವಿತ್ತು.. ಅವರು ಡಿಸಿ ಪರ ಆರಂಭಿಕರಾಗಿ ಫಾಫ್ ಡು ಪ್ಲೆಸಿಸ್ ಜೊತೆ ಇನ್ನಿಂಗ್ಸ್ ಆರಂಭಿಸಿದರು. ದೆಹಲಿ ಕ್ಯಾಪಿಟಲ್ಸ್‌ಗೆ ಈ ಋತುವಿನಲ್ಲಿ ಇದು ಏಳನೇ ಆರಂಭಿಕ ಜೋಡಿ ಎಂಬುದು ವಿಶೇಷ. ಪಂದ್ಯದಲ್ಲಿ ಕೆಎಲ್ ರಾಹುಲ್ ಶತಕ ಬಾರಿಸಿದರು. 2025ರ ಐಪಿಎಲ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿದ ಮೊದಲ ರೈಟ್ ಹ್ಯಾಂಡ್ ಬ್ಯಾಟರ್ ಅನ್ನೋ ದಾಖಲೆ ಬರೆದಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಎಲ್ಲಾ ಎಡಗೈ ಬ್ಯಾಟರ್ ಶತಕ ಸಿಡಿಸಿದ್ದರು. ಇದು ಕೆಎಲ್ ರಾಹುಲ್ 5ನೇ ಐಪಿಎಲ್ ಶತಕವಾಗಿದೆ. 

66
ಕೆಎಲ್ ರಾಹುಲ್

ಕೆಎಲ್ ರಾಹುಲ್ 65 ಎಸೆತಗಳಲ್ಲಿ 112 ರನ್ ಗಳಿಸಿದರು. ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ಅವರ ಶತಕದ ಇನ್ನಿಂಗ್ಸ್‌ನಿಂದ ದೆಹಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 199 ರನ್ ಗಳಿಸಿತು. ಈ ಶತಕದೊಂದಿಗೆ ಐಪಿಎಲ್‌ನಲ್ಲಿ ಮೂರು ತಂಡಗಳಿಗೆ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೆಎಲ್ ರಾಹುಲ್ ಪಾತ್ರರಾದರು. ಇದಕ್ಕೂ ಮೊದಲು ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಪರ ಶತಕ ಬಾರಿಸಿದ್ದ ಕೆಎಲ್ ರಾಹುಲ್.. ಈಗ ದೆಹಲಿ ಕ್ಯಾಪಿಟಲ್ಸ್ ಪರ ತಮ್ಮ ಮೊದಲ ಶತಕ ಸಾಧಿಸಿದರು.

Read more Photos on
click me!

Recommended Stories