ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ದಶಕದ ಪುರುಷರ ಟಿ20 ತಂಡವನ್ನು ಪ್ರಕಟಿಸಿದ್ದು, ಭಾರತದ ನಾಲ್ವರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಕಳೆದೊಂದು ದಶಕದಲ್ಲಿ ಟೀಂ ಇಂಡಿಯಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆದಿದ್ದು, ಸಹಜವಾಗಿಯೇ ಚುಟುಕು ಕ್ರಿಕೆಟ್‌ನಲ್ಲೂ ಭಾರತ ಸೈ ಎನಿಸಿಕೊಂಡಿದೆ.
ಐಸಿಸಿ ದಶಕದ ಟಿ20 ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ದಶಕದ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದ ಉಳಿದ ಮೂವರು ಭಾರತೀಯ ಆಟಗಾರರೆನಿಸಿದ್ದಾರೆ. ಐಸಿಸಿ ದಶಕದ ಟಿ20 ತಂಡದಲ್ಲಿ ಯಾರಿಗೆಲ್ಲ ಸಿಕ್ಕಿದೆ ಸ್ಥಾನ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.