ಸಾನಿಯಾ ಮಿರ್ಜಾ ಟೆನಿಸ್‌ನಿಂದ ಬ್ರೇಕ್‌ತೆಗೆದುಕೊಂಡಿದ್ದಾರೆ. ಈ ಸಮಯದಲ್ಲಿ ದುಬೈನಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.
ಅವರು ಆಗಾಗ್ಗೆ ಮಗ ಇಜಾನ್ ಮತ್ತು ಪತಿ ಶೋಯೆಬ್ ಮಲಿಕ್ ಅವರೊಂದಿಗಿನ ಫೋಟೋಗಳನ್ನುಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆಕೆಲವು ಸ್ನೇಹಿತರೊಂದಿಗೆ ಯುಎಇಯ ಡೆಸರ್ಟ್ ಸಫಾರಿಗೆ ಹೋಗಿದ್ದರು ಸಾನಿಯಾ.
ಸಫಾರಿಯ ಕೆಲವು ಫೋಟೋಗಳನ್ನು ಸಾನೀಯಾ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಅವರ ಲುಕ್ ಸಖತ್ ವೈರಲ್ ಆಗಿದೆ,
ಸೂರ್ಯಾಸ್ತದ ಸಮಯದಲ್ಲಿನ ಅವರ ಈ ಫೋಟೋ ಅಭಿಮಾನಿಗಳು ಸಖತ್ ಲೈಕ್ ಮಾಡಿಕಾಮೆಂಟ್ ಮಾಡಿದ್ದಾರೆ.
ಇದರಜೊತೆ ಮಗ, ಪತಿ ಮತ್ತು ಕೆಲವು ಸ್ನೇಹಿತರೊಂದಿಗಿನ ಫೋಟೋಗಳನ್ನೂ ಶೇರ್ ಮಾಡಿದ್ದಾರೆ.
ಈ ಫೋಟೋಗೆ ಸಾನಿಯಾ expectation vs realityಎಂದು ಕ್ಯಾಪ್ಷನ್ ನೀಡಿದ್ದಾರೆ
ದುಬೈನಲ್ಲಿ, ಶೋಯೆಬ್ ಮತ್ತು ಇಜಾನ್ ಸ್ನೇಹಿತರೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ ಮೂಗುತಿ ಸುಂದರಿ ಸಾನಿಯಾ. ಇತ್ತೀಚೆಗೆ ಅವರ ಮಗ ಇಜಾನ್ ಮಿರ್ಜಾ ಮಲಿಕ್ ಫೋಟೋ ವೈರಲ್ ಆಗಿದ್ದು, ಇದರಲ್ಲಿ ಆತ ನಕಲಿ ಮೊಸಳೆ ಸವಾರಿ ಮಾಡುತ್ತಿರುವುದು ಕಂಡುಬಂದಿದೆ.
ಸಾನಿಯಾ ಅವರ ಪತಿ ಶೋಯೆಬ್ ಮಲಿಕ್ ಕ್ರಿಕೆಟ್‌ನಿಂದಾಗಿ ಬ್ಯುಸಿಯಾಗಿದ್ದಾಗ ಹೆಚ್ಚಾಗಿ ಕುಟುಂಬದಿಂದ ದೂರವಿರುತ್ತಾರೆ. ಆದರೆ ಈಗ ಹೆಂಡತಿ ಮತ್ತು ಮಗನೊಂದಿಗೆ ಒಳ್ಳೆ ರೀತಿಯಲ್ಲಿಸಮಯ ಕಳೆಯುತ್ತಿದ್ದಾರೆ.
ಶೋಯೆಬ್ ಮತ್ತು ಸಾನಿಯಾ ಮದುವೆಯಾಗಿ ಸುಮಾರು 10 ವರ್ಷಗಳಳಾಗಿದ್ದು, ಸಾನಿಯಾ 2018 ರಂದು ಮಗ ಇಜಾನ್‌ನಿಗೆ ಜನ್ಮ ನೀಡಿದರು.