ಈ MNC ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾಳೆ ದಾದಾ ಮಗಳು ಸನಾ ಗಂಗೂಲಿ..! ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ?

First Published Sep 9, 2023, 6:51 PM IST

ಕೋಲ್ಕತಾ: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಪುತ್ರಿ ಸನಾ ತಮ್ಮ ಅದ್ಭುತ ಡ್ಯಾನ್ಸ್ ಹಾಗೂ ಇನ್ನಿತರ ವಿಚಾರಗಳಿಗೆ ಆಗಾಗ ಸುದ್ದಿಯಾಗುತ್ತಲೇ ಬಂದಿದ್ದಾರೆ. ಇದೀಗ ಸನಾ ಅವರು ಪದವಿ ಓದುತ್ತಿರುವಾಗಲೇ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎನ್ನುವ ವಿಚಾರ ಬಯಲಾಗಿದೆ. ಸನಾ ಕೆಲಸ ಮಾಡುತ್ತಿರುವ ಕಂಪನಿ ಯಾವುದು? ಸಂಬಳ ಎಷ್ಟು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ
 

ಸನಾ ಅವರ ತಂದೆ ಕೋಲ್ಕತಾದ ಮಹಾರಾಜ ಖ್ಯಾತಿಯ ಸೌರವ್ ಗಂಗೂಲಿ ಆಗಿರುವುದರಿಂದ ಅವರ ಮಗಳ ಬಾಲ್ಯದ ಫೋಟೋಗಳಿಂದ ಹಿಡಿದು ಇಲ್ಲಿಯವರೆಗಿನ ಎಲ್ಲಾ ಫೋಟೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಬಂದಿವೆ. 

ಇನ್ನು ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಸನಾ ಗಂಗೂಲಿ ಈ ವರ್ಷವಷ್ಟೇ ಲಂಡನ್‌ನ ಪ್ರತಿಷ್ಠಿತ ಯೂನಿವರ್ಸಿಟಿಯೊಂದರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದು ಸುದ್ದಿಯಾಗಿದ್ದರು.
 

ಮಗಳು ಯಶಸ್ವಿಯಾಗಿ ಪದವಿ ಶಿಕ್ಷಣ ಪೂರೈಸಿದ್ದನ್ನು ದಾದಾ ದಂಪತಿ ಲಂಡನ್‌ಗೆ ತೆರಳಿ ಖುಷಿಯ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದರು. ಸನಾ ಗಂಗೂಲಿ ತಮ್ಮ ಪದವಿ ಶಿಕ್ಷಣವನ್ನು ಪೂರೈಸುವ ಮುನ್ನವೇ ತನಗೆ ಕೆಲಸ ಹುಡುಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.

ಹೌದು, ಸನಾ ಗಂಗೂಲಿ ತಮ್ಮ ಶಾಲಾ ಶಿಕ್ಷಣವನ್ನು ಕೋಲ್ಕತಾದ ಲೊರೆಟ್ಟೋ ಹೌಸ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದರು. ಇದಾದ ಬಳಿಕ ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌ ಲಂಡನ್‌ನಲ್ಲಿ((ULC)) ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸನಾ ಗಂಗೂಲಿ ULC ನಲ್ಲಿ ವ್ಯಾಸಂಗ ಮಾಡುತ್ತಿರುವ ಸಮಯದಲ್ಲೇ ಎನಾಕ್ಟಸ್‌ನ ಪೂರ್ಣ ಪ್ರಮಾಣದಲ್ಲಿ ಉದ್ಯೋಗಿಯಾಗಿಯೂ ಕೆಲಸ ಮಾಡುತ್ತಿದ್ದರು. Enactus UCL ಯುವ ಉದ್ಯಮಿಗಳು ಮತ್ತು ದೊಡ್ಡ ಕಾರ್ಪೊರೇಟ್‌ಗಳು ತಮ್ಮದೇ ಆದ ಸಾಮಾಜಿಕ ಉದ್ಯಮಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
 

ಈ ಸಂದರ್ಭದಲ್ಲಿ ಸನಾ ಗಂಗೂಲಿಗೆ ವಿಶ್ವದ ದೊಡ್ಡ ದೊಡ್ಡ ಕಂಪನಿಗಳಾದ HSBC, KPMG, ಗೋಲ್ಡ್‌ಮನ್ ಸ್ಯಾಷಸ್‌, ಬಾರ್ಕ್ಲೇಸ್‌ ಹಾಗೂ ಇನ್ನಿತರ ಕಂಪನಿಗಳ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿತು.

ಸನಾ ಗಂಗೂಲಿಯ ಲಿಂಕ್‌ಡಿನ್‌ ಪ್ರೊಫೈಲ್‌ ಪ್ರಕಾರ, ಸದ್ಯ ಸೌರವ್ ಗಂಗೂಲಿ ಪುತ್ರಿ ಸನಾ, PwC ಎನ್ನುವ ಕಂಪನಿಯಲ್ಲಿ 2022ರಿಂದ ಇಂಟರ್ನಿಯಾಗಿ ಕೆಲಸ ಮಾಡುತ್ತಿದ್ದಾರೆ. 

PwC ಎನ್ನುವ ಕಂಪನಿಯು ಹಣಕಾಸಿನ ವ್ಯವಹಾರಗಳ ಬಗ್ಗೆ ಸಲಹೆ ನೀಡುವ ಜಗತ್ತಿನ ಅತಿದೊಡ್ಡ ಕಂಪನಿಯಾಗಿದೆ. ಈ ಬ್ಯುಸಿನೆಸ್ ಕಂಪನಿಯು ಜಗತ್ತಿನ 152 ದೇಶಗಳಲ್ಲಿ ತಮ್ಮ ಶಾಖೆಗಳನ್ನು ಹೊಂದಿದೆ. ಈ ಕಂಪನಿಯಲ್ಲಿ ಜಗತ್ತಿನಾದ್ಯಂತ 3.28 ಲಕ್ಷ ಮಂದಿ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
 

ಇನ್ನೂ ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ, PwC ಕಂಪನಿಯಲ್ಲಿ ಇಂಟರ್ನಿಯಾಗಿ ಕೆಲಸ ಮಾಡುವ ವಿದ್ಯಾರ್ಥಿಗಳಿಗೂ ಕೂಡಾ ಈ ಕಂಪನಿ ಕೈತುಂಬಾ ಸಂಬಳ ನೀಡುತ್ತಾ ಬಂದಿದೆ.

UK.indeed.com ಎನ್ನುವ ವೆಬ್‌ಸೈಟ್ ವರದಿಯ ಪ್ರಕಾರ PwC ಕಂಪನಿಯಲ್ಲಿ ಇಂಟರ್ನ್‌ಶಿಪ್ ಮಾಡುವವರಿಗೆ ವಾರ್ಷಿಕ ಸರಾಸರಿ 30 ಲಕ್ಷ ರುಪಾಯಿ ಸಂಬಳ ನೀಡುತ್ತಿದೆ. ಹೀಗಾಗಿ ಸನಾ ಗಂಗೂಲಿ ಕೂಡಾ 30+ಲಕ್ಷ ಸಂಬಳವನ್ನು ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
 

click me!