ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ ಸೋಲಿಗೆ ಆಟಗಾರರು ಮೇಲೆ ಹೊಣೆ ಮಾಡಲಾಗುತ್ತಿದೆ. ಆದರೆ ಸೋಲಿಗೆ ನೇರ ಕಾರಣ ಐಪಿಎಲ್ ಹಾಗೂ ಬಿಸಿಸಿಐ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ. ಈ ಗಂಭೀರ ಆರೋಪ ಬಿಸಿಸಿಐಗೆ ಸಂಕಷ್ಟ ತರಿಸಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿ ಅಭಿಮಾನಿಗಳಿಗೆ ಬೇಸರ ತರಿಸಿದೆ. 0-4 ಅಂತರದ ಸೋಲು ಭಾರತೀಯ ಅಭಿಮಾನಿಗಳು ನಿರೀಕ್ಷೆ ಮಾಡಿರಲಿಲ್ಲ. ಸೋಲಿನ ಬಳಿಕ ತಂಡದ ಆಯ್ಕೆ, ಕೋಚಿಂಗ್, ಆಟಗಾರರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಇದೀಗ ಗಂಭೀರ ಆರೋಪ ಮಾಡಿದ್ದಾರೆ. ಈ ಸೋಲಿಗೆ ಐಪಿಎಲ್ ಹಾಗೂ ಬಿಸಿಸಿಐ ಕಾರಣ ಎಂದಿದ್ದಾರೆ.
26
ಮಂಜ್ರೇಕರ್ ಹೇಳಿದ್ದೇನು?
ಟೀಂ ಇಂಡಿಯಾದ ಸೋಲಿಗೆ ಹಲವು ಕಾರಣಗಳಿವೆ. ಆದರೆ ಸಂಜಯ್ ಮಂಜ್ರೇಕರ್ ಮಾತು ಬಿಸಿಸಿಐಗೆ ಇರಿಸು ಮುರಿಸು ತಂದಿದೆ. ಐಪಿಎಲ್ ಪಂದ್ಯಗಳಲ್ಲಿ ಬ್ಯಾಟರ್ ಬೌಂಡರಿ ಸಿಕ್ಸರ್ ಸುಲಭವಾಗಿ ಹೊಡೆಯುತ್ತಾರೆ. ಆದರೆ ಅಂತಾರಾಷ್ಟ್ರೀಯ ಸ್ಟಾಂಡರ್ಡ್‌ಗೆ ಪಿಚ್‌ಗಳಿಲ್ಲ. ಐಪಿಎಲ್ ಟೂರ್ನಿಯಲ್ಲಿ ಒಂದೊಂದು ತಂಡವನ್ನು ಗೆಲ್ಲಿಸಿಕೊಟ್ಟ ಆಟಗಾರರು ಇಂಗ್ಲೆಂಡ್ ಪಿಚ್‌ನಲ್ಲಿ ವಿಫಲರಾಗಿದ್ದಾರೆ. ಐಪಿಎಲ್ ಪ್ಲ್ಯಾಟ್ ಫಿಚ್‌ನಲ್ಲಿ ಆಡುವ ಆಟಗಾರರು ವಿದೇಶಿ ಪಿಚ್‌ನಲ್ಲಿ ಬೌಲಿಂಗ್ ದಾಳಿ ಎದುರಿಸಲು ವಿಫಲರಾಗುತ್ತಿದ್ದಾರೆ ಎಂದು ಮಂಜ್ರೇಕರ್ ಹೇಳಿದ್ದಾರೆ.
36
ಬ್ಯಾಟರ್‌ಗೆ ಐಪಿಎಲ್ ಮೇಕಪ್
ಟೀಂ ಇಂಡಿಯಾ ಬ್ಯಾಟರ್‌ಗಳಿಗೆ ಐಪಿಎಲ್ ಮೇಕಪ್ ಮಾಡಿ ವಿದೇಶಿ ಪಿಚ್‌ಗಳಿಗೆ ಕಳುಹಿಸಿದರೆ ಫಲಿತಾಂಶ ಹೀಗೆ ಆಗುತ್ತದೆ ಎಂದು ಮಂಜ್ರೇಕರ್ ಹೇಳಿದ್ದಾರೆ. ಟಿ20 ಸರಣಿ ಸೋಲಿಗೆ ಆಟಾಗರರನ್ನು ಹೊಣೆಗಾರರನ್ನಾಗಿ ಮಾಡುವುದು ಸುಲಭ, ಸೋಲಿನ ಹೊಣೆ ಐಪಿಎಲ್ ಆಯೋಜನೆ ಮಾಡಿದವರಿಗೆ ಹೋಗಬೇಕು ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಸಂಜಯ್ ಮಂಜ್ರೇಕರ್ ಐಪಿಎಲ್ ಟೂರ್ನಿ ಹಾಗೂ ಬಿಸಿಸಿಐ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಹಲವರು ಮಂಜ್ರೇಕರ್ ವಾದವನ್ನು ಒಪ್ಪಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯಿಂದ ಭಾರತದಲ್ಲಿ ಎಲ್ಲರೂ ಅಬ್ಬರಿಸುತ್ತಾರೆ, ವಿದೇಶ ಪಿಚ್‌ಗಳಲ್ಲಿ ಮಂಕಾಗುತ್ತಾರೆ ಎಂದಿದ್ದಾರೆ. ಇದೇ ವೇಳೆ ಮತ್ತೆ ಕೆಲವರು ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಇದ್ದಾರೆ, ಅವರು ವಿದೇಶದಲ್ಲೂ ಆಡುತ್ತಾರೆ, ಭಾರತದಲ್ಲೂ ಆಡುತ್ತಾರೆ. ಐಪಿಎಲ್ ಯಾಕೆ ಹೊಣೆಯಾಗಬೇಕು ಎಂದು ಪ್ರಶ್ನಿಸಿದ್ದಾರೆ.
56
ಟೀಂ ಇಂಡಿಯಾಗೆ 4 ಸೋಲು
ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಸತತ 4 ಸೋಲು ಕಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನುಳಿದ ಎಲ್ಲಾ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿತ್ತು. ಮೊದಲ ಬಾರಿಗೆ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿತ್ತು. ಆದರೆ ಫಲಿತಾಂಶ ನಿರಾಸೆಯಾಗಿತ್ತು.
66
ಐರ್ಲೆಂಡ್ ವಿರುದ್ಧವೂ ಸೋಲು
ಇಂಗ್ಲೆಂಡ್ ಸರಣಿಗೂ ಮೊದಲು 11ನೇ ಸ್ಥಾನದಲ್ಲಿರುವ ಐರ್ಲೆಂಡ್ ವಿರುದ್ದ ಟೀಂ ಇಂಡಿಯಾ 2 ಟಿ20 ಪಂದ್ಯ ಆಡಿತ್ತು. ಎರಡರಲ್ಲೂ ಭಾರತ ಸೋಲು ಕಂಡಿತ್ತು. ಈ ವೇಳೆ ಇಂಗ್ಲೆಂಡ್ ವಿರುದ್ಧ ಸಿಡಿದೆಳುವ ವಿಶ್ವಾಸದಲ್ಲಿತ್ತು. ಇದೀಗ ಇಂಗ್ಲೆಂಡ್ ವಿರುದ್ದವೂ ಸೋಲು ಕಂಡು ಮುಖಭಂಗ ಅನುಭವಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.