ದಶಕದ ಟೆಸ್ಟ್‌ ತಂಡ ಪ್ರಕಟಿಸಿದ ಬ್ರಾಡ್ ಹಾಗ್; ಏಕೈಕ ಭಾರತೀಯನಿಗೆ ಸ್ಥಾನ..!

First Published Jan 2, 2021, 5:07 PM IST

ಮೆಲ್ಬರ್ನ್‌: ಕೆಲದಿನಗಳ ಹಿಂದಷ್ಟೇ ಐಸಿಸಿ ದಶಕದ ತಂಡ ಪ್ರಕಟಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಗ್ ತಮ್ಮ ನೆಚ್ಚಿನ ದಶಕದ ಟೆಸ್ಟ್‌ ತಂಡವನ್ನು ಪ್ರಕಟಿಸಿದ್ದಾರೆ. 2011ರಿಂದ 2020ರ ಅವಧಿಯಲ್ಲಿನ ತಂಡ ಇದಾಗಿದ್ದು, ಅಚ್ಚರಿಯೆಂಬಂತೆ ಕೇವಲ ಒಬ್ಬ ಭಾರತೀಯ ಬ್ಯಾಟ್ಸ್‌ಮನ್ ಮಾತ್ರ ಬ್ರಾಡ್‌ ದಶಕದ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬ್ರಾಡ್ ದಶಕದ ತಂಡಕ್ಕೆ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ಗೆ ನಾಯಕತ್ವ ಪಟ್ಟ ಕಟ್ಟಿದ್ದಾರೆ. ಬ್ರಾಡ್ ತಂಡದಲ್ಲಿ 3 ದಕ್ಷಿಣ ಆಫ್ರಿಕಾ, 3 ಆಸ್ಟ್ರೇಲಿಯಾ, ಇಬ್ಬರು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಭಾರತ ತಂಡದ ಆಟಗಾರರಿಗೆ ಸ್ಥಾನ ನೀಡಿದ್ದಾರೆ. ಬ್ರಾಡ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.
 

1. ಆಲಿಸ್ಟರ್ ಕುಕ್: ಇಂಗ್ಲೆಂಡ್ ಪರ ಗರಿಷ್ಠ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌
undefined
2. ಡೇವಿಡ್‌ ವಾರ್ನರ್: ಆಸೀಸ್‌ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌. 70ರ ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ ಹೊಂದಿರುವ ಬ್ಯಾಟ್ಸ್‌ಮನ್
undefined
3. ಕೇನ್ ವಿಲಿಯಮ್ಸನ್: ಬ್ರಾಡ್‌ ತಂಡದ ನಾಯಕ, ಮಧ್ಯಮ ಕ್ರಮಾಂಕದ ನಂಬಿಕಸ್ಥ ಬ್ಯಾಟ್ಸ್‌ಮನ್
undefined
4. ವಿರಾಟ್ ಕೊಹ್ಲಿ: ಪರಿಸ್ಥಿತಿಗೆ ತಕ್ಕಂತೆ ಆಕ್ರಮಣಕಾರಿ ಆಟವಾಡುವ ಕೊಹ್ಲಿಗೆ 4ನೇ ಕ್ರಮಾಂಕದಲ್ಲಿ ಸ್ಥಾನ ನೀಡಲಾಗಿದೆ.
undefined
5. ಸ್ಟೀವ್‌ ಸ್ಮಿತ್: ಆಸ್ಟ್ರೇಲಿಯಾ ಪರ ಅತ್ಯಂತ ಸ್ಥಿರ ಪ್ರದರ್ಶನ ತೋರುತ್ತಾ ಬಂದಿರುವ ಬ್ಯಾಟ್ಸ್‌ಮನ್‌.
undefined
6. ಎಬಿ ಡಿವಿಲಿಯರ್ಸ್‌: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌, ದಕ್ಷಿಣ ಆಫ್ರಿಕಾ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದ ಎಬಿಡಿ
undefined
7. ಜಾಕ್ ಕಾಲೀಸ್: ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಅತ್ಯಂತ ಶ್ರೇಷ್ಠ ಆಲ್ರೌಂಡರ್‌. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ಆಟಗಾರ
undefined
8. ಪ್ಯಾಟ್‌ ಕಮಿಸ್‌: ಪ್ರಸ್ತುತ ಐಸಿಸಿ ಟೆಸ್ಟ್ ಶ್ರೇಯಾಂಕ ಹೊಂದಿರುವ ಆಸ್ಟ್ರೇಲಿಯಾದ ಮಾರಕ ವೇಗಿ
undefined
9.ಡೇಲ್ ಸ್ಟೇನ್: ದಕ್ಷಿಣ ಆಫ್ರಿಕಾದ ಡೆಡ್ಲಿ ವೇಗಿ, ಕರಾರುವಕ್ಕಾದ ದಾಳಿ ಮೂಲಕ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಬಲ್ಲ ವೇಗಿ
undefined
10. ಜೇಮ್ಸ್‌ ಆಂಡರ್‌ಸನ್: ಇಂಗ್ಲೆಂಡ್‌ನ ಅತ್ಯಂತ ಅನುಭವಿ ವೇಗಿ, ಸ್ವಿಂಗ್ ಕಿಂಗ್
undefined
11. ಯಾಸೀರ್ ಶಾ: ಅಚ್ಚರಿಯ ಆಯ್ಕೆ, ಪಾಕಿಸ್ತಾನದ ಸ್ಪಿನ್ನರ್. ಅಶ್ವಿನ್ ಹಾಗೂ ನೇಥನ್ ಲಯನ್ ಬಿಟ್ಟು ಯಾಸಿರ್ ಶಾ ಅವರನ್ನು ಆಯ್ಕೆ ಮಾಡಿದ್ದು ಹಲವರನ್ನು ಅಚ್ಚರಿಗೆ ನೂಕಿದೆ.
undefined
click me!