ಟೀಮ್ ಇಂಡಿಯಾದ ಅಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ವರ್ಷದ ಆರಂಭದ ಬಾಲಿವುಡ್ ನಟಿ ನಟಾಸಾ ಸ್ಟಾಂಕೋವಿಕ್ ಅವರನ್ನು ಮದುವೆಯಾಗಿದ್ದಾರೆ.
ಈ ದಂಪತಿಗೆ ಜುಲೈನಲ್ಲಿ ಜನಿಸಿರುವ ಮಗ ಅಗಸ್ತ್ಯಗೆ ಈಗ ಐದು ತಿಂಗಳ ವಯಸ್ಸು.ಪ್ರತಿ ತಿಂಗಳು ಮಗನ ಜನ್ಮದಿನವನ್ನು ಆಚರಿಸುತ್ತಿರುತ್ತಾರೆ.
ಮಗನ ಐದನೇ ತಿಂಗಳ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡಿದ ಪೋಟೋವನ್ನು ಶೇರ್ ಮಾಡಿದ್ದಾರೆ ಪಾಂಡ್ಯ.
ಪಾಂಡ್ಯ ಅವರು ಇತ್ತೀಚೆಗೆ ಪೋಸ್ಟ್ ಮಾಡಿದ ಫೋಟೋವೊಂದರಲ್ಲಿ, ಹಾರ್ದಿಕ್ ಪತ್ನಿ ನಟಾಸಾ ಜೊತೆ ಅಗಸ್ತ್ಯರ ಐದನೇ ತಿಂಗಳ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಫೋಟೋದಲ್ಲಿ ಪಾಂಡ್ಯನ ತೊಡೆಯ ಮೇಲೆ ಮಗ ಕುಳಿತಿದ್ದು ನಟಾಸಾ ಅವರ ಪಕ್ಕದಲ್ಲಿಯೇ ನಿಂತಿದ್ದಾರೆ.
ನಮ್ಮ ಹುಡುಗನಿಗೆ 5 ತಿಂಗಳುಗಳು.. ವಿ ಆರ್ ಬ್ಲೆಸ್ಡ್' ಎಂದು ಪೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.
ಪಾಂಡ್ಯ ಸೆರ್ಬಿಯಾ ಮೂಲದ ಬಾಲಿವುಡ್ ನಟಿ ನಟಾಸಾ ಸ್ಟಾಂಕೋವಿಕ್ ಅವರೊಂದಿಗೆ ಸಂಬಂಧ ಹೊಂದಿದ್ದರು, ಈ ಜೋಡಿಯು ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಲಾಕ್ ಡೌನ್ ಸಮಯದಲ್ಲಿ ಮದುವೆಯಾದರು. ನಂತರ ಈ ಕಪಲ್‌ಗೆ ಅಗಸ್ತ್ಯ ಜುಲೈನಲ್ಲಿ ಜನಿಸಿದನು.
ಮಗು ಹುಟ್ಟಿದ ಒಂದು ತಿಂಗಳ ಕಾಲ ನಂತರ ಐಪಿಎಲ್ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ಬ್ಯುಸಿಯಾಗಿದ್ದ ಪಾಂಡ್ಯಗೆ ಮಗನ ಜೊತೆ ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಪ್ರಸ್ತುತ ನಾಲ್ಕು ತಿಂಗಳ ನಂತರ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ ಹಾರ್ದಿಕ್.
ಮನೆಗೆ ಹಿಂದಿರುಗುತ್ತಿದ್ದಂತೆ, ಈ ಕ್ರಿಕೆಟರ್ ತನ್ನ ಫಾದರ್ ಹುಡ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಅವರ ಮತ್ತು ಅಗಸ್ತ್ಯನ ಕೆಲವು ಆಡರೋಬಲ್ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ, ಪಾಂಡ್ಯ ಸಹೋದರ ವೈಭವ್ ಮತ್ತು ಕುಟುಂಬದೊಂದಿಗೆ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದ್ದರು. ಪಾಂಡ್ಯ ಬರ್ದರ್ಸ್ ಅಗಸ್ತ್ಯನ ಜೊತೆಗೆ, ಸಾಂತಾಕ್ಲಾಸ್ ಆಗಿ ಡ್ರೆಸ್ ಮಾಡಿಕೊಂಡಿರುವುದು ಕಾಣಬಹುದು.